ಅಪಹರಣಕಾರರೆಂದು ಸಂದೇಹದಿಂದ ಬಂಗಾಳದಲ್ಲಿ ೩ ಸಾಧುಗಳಿಗೆ ಸಮೂಹದಿಂದ ಥಳಿತ !

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ತನಕ ಇಂತಹ ಘಟನೆಗಳು ನಿಲ್ಲುವುದಿಲ್ಲ !

ಪುರುಲಿಯ (ಬಂಗಾಳ) – ಇಲ್ಲಿ ಜನವರಿ ೧೧ ರಂದು ಸಂಜೆ ೩ ಸಾಧುಗಳಿಗೆ ಸಮೂಹವು ಥಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಸಾಧುಗಳು ಬಂಗಾಳದ ಗಂಗಾಸಾಗರ ಮೇಳಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದರು. ಈ ಸಾಧುಗಳು ಅಪಹರಣಕಾರರೆಂದು ತಿಳಿದು ಅವರಿಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಭಾಜಪದಿಂದ ತೃಣಮೂಲ ಕಾಂಗ್ರೆಸ್ಸನ್ನು ಟೀಕಿಸಿದೆ. ‘ರಾಜ್ಯದಲ್ಲಿ ತೃಣ ಮೂಲ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಸಾಧುಗಳ ಮೇಲೆ ದಾಳಿಗಳು ನಡೆಯುತ್ತಿವೆ, ಎಂದು ಭಾಜಪ ಆರೋಪಿಸಿದೆ. ಪೊಲೀಸರು ಮಾತ್ರ ಈ ಘಟನೆ ತಪ್ಪು ತಿಳುವಳಿಕೆಯಿಂದ ನಡೆದಿದೆ ಎಂದು ಹೇಳುತ್ತಿದ್ದಾರೆ.

೧. ಒಂದು ಬಾಡಿಗೆಯ ಕಾರಿನಿಂದ ಈ ೩ ಸಾಧುಗಳು, ಓರ್ವ ವ್ಯಕ್ತಿ ಮತ್ತು ಅವರ ೨ ಮಕ್ಕಳು ಹೀಗೆ ಉತ್ತರಪ್ರದೇಶದಿಂದ ಗಂಗಾಸಾಗರ ಮೆಳಕ್ಕಾಗಿ ಬಂದಿದ್ದರು. ಪುಲಿಯಾದಲ್ಲಿ ಅವರು ಅಪ್ರಾಪ್ತ ಹುಡುಗೆಗೆ ವಿಳಾಸ ಕೇಳಿದರು. ಆ ಹುಡುಗಿ ಸಾಧುಗಳನ್ನು ನೋಡಿ ಹೆದರಿ ಕಿರುಚುತ್ತಾ ಓಡಿ ಹೋದಳು. ಆದ್ದರಿಂದ ಸ್ಥಳೀಯ ಜನರು ಅಲ್ಲಿ ಸೇರಿದರು. ಅವರು ಕೂಡ ಹುಡುಗಿಯ ಅಪಹರಿಸಲು ಬಂದಿರುವುದಾಗಿ ಅನುಮಾನ ಪಟ್ಟರು. ಅದರ ನಂತರ ಜನರು ಈ ಸಾಧುಗಳನ್ನು ಥಳಿಸಿದರು. ಈ ಸಮಯದಲ್ಲಿ ಸಾಧುಗಳು ಕೈ ಮುಗಿದು ವಿನಂತಿಸಿರುವುದು ಕಾಣುತ್ತಿತ್ತು, ಎಂದು ವಿಡಿಯೋದಲ್ಲಿ ಕಾಣುತ್ತಿದೆ.

೨. ಸಮೂಹವು ಸಾಧುಗಳು ಯಾವ ಕಾರಿನಲ್ಲಿ ಬಂದಿದ್ದರು, ಆ ವಾಹನವನ್ನು ಧ್ವಂಸಗೊಳಿಸಿದರು. ಆ ಸಮಯದಲ್ಲಿ ಪೊಲೀಸರು ಸಾಧುಗಳನ್ನು ಗುಂಪಿನ ವಶದಿಂದ ಬಿಡಿಸಿ ಪೊಲೀಸ ಠಾಣೆಗೆ ಕರೆದೊಯ್ದರು.

(ಸೌಜನ್ಯ :TV9 Bharatvarsh)