ನಿರ್ಮಾಪಕ ‘ಝೀ ಸ್ಟುಡಿಯೋಸ್’ನಿಂದ ಕ್ಷಮೆಯಾಚನೆಆಕ್ಷೆಪಣೆಯ ಭಾಗಗಳನ್ನು ತೆಗೆಯಲಾಗುವುದು ! |
(‘ನೆಟ್‌ಫ್ಲಿಕ್ಸ್’ ಎಂಬುದು ‘ಓಟಿಟಿ’ ಅಂದರೆ ‘ಓವರ್ ದಿ ಟಾಪ್’ ಪ್ಲಾಟ್‌ಫಾರ್ಮ್. ಓಟಿಟಿ ಮೂಲಕ, ವೀಕ್ಷಕರು ಚಲನಚಿತ್ರಗಳು, ವೆಬ್ ಸರಣಿಗಳು ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.)
ಮುಂಬಯಿ – ಹಿಂದೂಗಳು ಬಲವಾಗಿ ವಿರೋಧಿಸಿದ ನಂತರ ‘ಅನ್ನಪೂರ್ಣನಿ’ ಚಿತ್ರವನ್ನು ‘ನೆಟ್‌ಫ್ಲಿಕ್ಸ್’ ಈ ‘ಓಟಿಟಿ’ ಪ್ಲಾಟ್‌ಫಾರ್ಮ್ ನಿಂದ ತೆಗೆದುಹಾಕಲಾಗಿದೆ ಮತ್ತು ಚಿತ್ರದ ನಿರ್ಮಾಪಕ ‘ಝೀ ಸ್ಟುಡಿಯೋಸ್’ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ ಮತ್ತು ‘ಚಿತ್ರದ ಆಕ್ಷೇಪಾರ್ಹ ಭಾಗಗಳು ತೆಗೆದುಹಾಕಲಾಗುವುದು’, ಎಂದು ಹೇಳಿದೆ. ‘ಅನ್ನಪೂರ್ಣನಿ’ ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂಗಳು ವಿರೊಧಿಸಿದ್ದರು. ಈ ಸಂಬಂಧ ಮುಂಬಯಿನಲ್ಲೂ ಪ್ರಕರಣ ದಾಖಲಾಗಿದೆ.
ಈ ಚಿತ್ರದಲ್ಲಿ ಬ್ರಾಹ್ಮಣ ಹಿಂದೂ ಹುಡುಗಿಯ ಪ್ರೇಮಿಯು ಮುಸ್ಲಿಂ ಎಂದು ತೋರಿಸಲಾಗಿದೆ. ಮುಸ್ಲಿಂ ಪ್ರೇಮಿ, ‘ಶ್ರೀರಾಮನು ವನವಾಸದಲ್ಲಿದ್ದಾಗ ಮಾಂಸಾಹಾರ ಸೇವಿಸುತ್ತಿದ್ದ’ ಎಂದು ಯುವತಿಗೆ ಹೇಳುತ್ತಾ, ‘ನಮಾಜ್ ಮಾಡುತ್ತಾ ಬಿರಿಯಾನಿ ಮಾಡಿದರೆ ರುಚಿಯಾಗುತ್ತೆ’ ಎಂದು ಸಲಹೆ ನೀಡುತ್ತಾನೆ. ಆದ್ದರಿಂದ ಈ ಯುವತಿ ನಮಾಜ್ ಮಾಡುತ್ತಲೇ ಬಿರಿಯಾನಿ ತಯಾರಿಸುತ್ತಾಳೆ ಎಂಬುದನ್ನೂ ತೋರಿಸಲಾಗಿದೆ. ಈ ಚಲನ ಚಿತ್ರವು ಡಿಸೆಂಬರ್ 1, 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ಡಿಸೆಂಬರ್ 29, 2023 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಆ ನಂತರ ಚಿತ್ರಕ್ಕೆ ವಿರೋಧ ವ್ಯಕ್ತವಾಗತೊಡಗಿತು.
Top news at 7 pm: Govt thanks celebrities for promoting ‘domestic tourism’, Nayanthara’s #Annapoorni removed from Netflix
Read: https://t.co/LYT4Y2djyW pic.twitter.com/VqJyakL53G
— News9 (@News9Tweets) January 11, 2024
ಸಂಪಾದಕರ ನಿಲುವು* ಕ್ಷಮೆ ಕೇಳಿದರೆ ಸಾಕಾಗಲ್ಲ, ಈ ಚಿತ್ರಕ್ಕೆ ಅನುಮತಿ ನೀಡಿದ ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕರಿಗೆ ಶಿಕ್ಷೆಯಾಗಬೇಕು ! ಆಗ ಮಾತ್ರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರಿಗೆ ಭಯ ಹುಟ್ಟಬಹುದು ! |