ದೇವಾಲಯದ ಅರ್ಚಕರಿಂದ ಪ್ರಧಾನಿಗೆ ಕಲಾರಾಮ್ ದೇವಾಲಯದ ಚಿತ್ರ ಉಡುಗೊರೆ
ನಾಸಿಕ್ – ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಐತಿಹಾಸಿಕ ಶ್ರೀ ಕಲಾರಾಮ್ ದೇವಸ್ಥಾನಕ್ಕೆ ತೆರಳಿ ಶ್ರೀರಾಮನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀ ಕಾಲಾರಾಮ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮತ್ತು ಆರತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಕಾಳಾರಾಮ ಮಂದಿರ ಸಂಸ್ಥಾನದ ಮುಖ್ಯಸ್ಥ ಮಹಂತ್ ಮತ್ತು ಟ್ರಸ್ಟಿ ಅವರು ಶ್ರೀರಾಮನ ಬೆಳ್ಳಿಯ ವಿಗ್ರಹ, ಶಾಲು ಮತ್ತು ಶ್ರೀಫಲದೊಂದಿಗೆ ಮೋದಿ ಅವರನ್ನು ಸನ್ಮಾನಿಸಿದರು. ಕಲಾರಾಮ್ ದೇವಾಲಯದ ಆವರಣದಲ್ಲಿ ‘ಸಿಯಾವರ್ ರಾಮಚಂದ್ರ ಕೀ ಜೈ’ ಎಂಬ ಘೋಷಣೆಗಳು ಮೊಳಗಿತು.
1. ಈ ಸಂದರ್ಭದಲ್ಲಿ ಕಾಳರಾಮ ದೇವಸ್ಥಾನದ ಪ್ರಧಾನ ಮಹಾಂತ ಆಚಾರ್ಯ ಮಹಾಮಂಡಳೇಶ್ವರ ಸುಧೀರ್ದಾಸ್ ಮಹಾರಾಜರು, ಶ್ರೀ ಕಾಳಾರಾಮ ಮಂದಿರ ಸಂಸ್ಥಾನದ ಟ್ರಸ್ಟಿಗಳಾದ ಸರ್ವಶ್ರೀ ಧನಂಜಯ ಪೂಜಾರಿ, ಮಂಗೇಶ ಪುಜಾರಿ, ನರೇಶ ಪುಜಾರಿ, ಮಂದಾರ ಜನೋರಕರ್, ಏಕನಾಥ ಕುಲಕರ್ಣಿ, ಪಂ. ಪ್ರಣವ ಪುಜಾರಿ, ಅದ್ವಯ ಪುಜಾರಿ ಹಾಗೂ ವಾರಕರಿ ಮತ್ತು ಸಂತ ಪರಿವಾರದ ಗಣ್ಯರು ಉಪಸ್ಥಿತರಿದ್ದರು.
2. ಅಭಂಗ್ ಮತ್ತು ಭಾವಾರ್ಥ ರಾಮಾಯಣದ 8ನೇ ಅಧ್ಯಾಯವನ್ನು (ಇದು ನಾಸಿಕ್‌ನಲ್ಲಿರುವ ಭಗವಾನ್ ಶ್ರೀರಾಮನ ನಿವಾಸವನ್ನು ಉಲ್ಲೇಖಿಸುತ್ತದೆ) ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಓದಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿದ್ದ ಮಹಂತ್, ವಾರಕರಿ ಮತ್ತು ಸಂತ ಕುಟುಂಬದ ವಂಶಸ್ಥರೊಂದಿಗೆ ಮೋದಿ ಸಂವಾದ ನಡೆಸಿದರು. ದೇವಸ್ಥಾನದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮೋದಿ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಿದರು.