ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ 11 ದಿನಗಳ ಧಾರ್ಮಿಕ ವಿಧಿ ವಿಧಾನ ಪ್ರಾರಂಭ !

ಪ್ರಧಾನಿ ಮೋದಿ ಇವರಿಂದ ಮಾಹಿತಿ !

ನವದೆಹಲಿ – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಉದ್ದೇಶಿಸಿ ಸಂದೇಶವೊಂದನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಮುಂದಿನ 11 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನ ನಡೆಸುವುದಾಗಿ ಘೋಷಿಸಿದ್ದಾರೆ. ಈ ವಿಧಿ ಯಾವ ರೀತಿಯ ಇರಲಿದೆ ? ಎಂಬುದು ಸ್ಪಷ್ಟವಾಗಿಲ್ಲ.

ಮೋದಿ ಈ ಸಂದೇಶದಲ್ಲಿ,

1. ಜೀವನದ ಕೆಲವು ಕ್ಷಣಗಳು ಈಶ್ವರನ ಆಶೀರ್ವಾದದಿಂದ ಮಾತ್ರ ನಿಜವಾಗುತ್ತವೆ. ಇಂದು ಜಗತ್ತಿನಾದ್ಯಂತ ಇರುವ ಶ್ರೀರಾಮ ಭಕ್ತರಿಗೆ ಅಂತಹ ಪವಿತ್ರ ವಾತಾವರಣವಾಗಿದೆ. ಎಲ್ಲೆಡೆ ಪ್ರಭು ಶ್ರೀರಾಮನ ಭಕ್ತಿಯ ಅದ್ಭುತ ವಾತಾವರಣವಿದೆ. ನಾಲ್ಕು ದಿಕ್ಕುಗಳಲ್ಲಿಯೂ ಶ್ರೀರಾಮನಾಮ ಜಪ ಕೇಳಿಸುತ್ತದೆ. ಜನವರಿ 22ಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

2. ಈಗ ಅಯೋಧ್ಯೆಯಲ್ಲಿ ನಡೆಯುವ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ ಇನ್ನು 11 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಪುಣ್ಯ ಪ್ರಸಂಗವನ್ನು ಕಣ್ತುಂಬಿಕೊಳ್ಳುವ ಅವಕಾಶ ನನಗೆ ದೊರೆಯುತ್ತಿದೆ. ಇದು ನನಗೆ ಕಲ್ಪನೆಗೂ ಮೀರಿದ ಅನುಭೂತಿಯಾಗಿದೆ. ನಾನು ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಈ ರೀತಿಯ ಮಾನಸಿಕ ಸ್ಥಿತಿಯನ್ನು ಹೊಂದಿದ್ದೇನೆ. ಈ ಅನುಭವ ನನಗೆ ಒಂದು ಬೆರೆಯೇ ಅವಕಾಶವಾಗಿದೆ.

3. ಹಲವು ತಲೆಮಾರುಗಳಿಂದ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದ ಕನಸನ್ನು ನನಸಾಗಿಸಲು ಉಪಸ್ಥಿತಿ ಇರಲು ಅವಕಾಶ ಸಿಕ್ಕಿದೆ ಇದು ನನ್ನ ಭಾಗ್ಯವಾಗಿದೆ. ಈಶ್ವರನು ನನಗೆ ಎಲ್ಲಾ ಭಾರತೀಯರನ್ನು ಪ್ರತಿನಿಧಿಸುವ ನಿಮಿತ್ತ ಮಾಡಿದ್ದಾನೆ. ಇದೊಂದು ದೊಡ್ಡ ಜವಾಬ್ದಾರಿ.

4. ನಮ್ಮ ಶಾಸ್ತ್ರದಲ್ಲಿಯೂ, ನಮಗೆ ಈರ್ಶವರನ ಯಾಗಕ್ಕಾಗಿ ಆರಾಧಿಸಲು ನಮ್ಮ ಸುತ್ತಲು ದೈವಿ ಚೇತನಾವನ್ನು ಜಾಗೃತಗೊಳಿಸಬೇಕಾಗುತ್ತದೆ. ಶಾಸ್ತ್ರಗಳಲ್ಲಿ ವ್ರತಗಳು ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಉಲ್ಲೇಖಿಸಿದೆ. ಪ್ರಾಣಪ್ರತಿಷ್ಠಾಪನೆಯ ಮೊದಲು ಈ ನಿಯಮಗಳನ್ನು ಪಾಲಿಸಬೇಕು. ಅದಕ್ಕಾಗಿಯೇ ನಾನು ಆಧ್ಯಾತ್ಮಿಕ ವ್ಯಕ್ತಿಗಳಿಂದ ಪಡೆದ ಮಾರ್ಗದರ್ಶನ ಮತ್ತು ಅವರು ನೀಡಿದ ನಿಯಮಗಳ ಪ್ರಕಾರ ಇಂದಿನಿಂದ 11 ದಿನಗಳ ವಿಶೇಷ ವಿಧಿ ವಿಧಾನಗಳನ್ನು ಪ್ರಾರಂಭಿಸುತ್ತಿದ್ದೇನೆ.

5. ಈ ಪವಿತ್ರ ಕ್ಷಣದಲ್ಲಿ ನಾನು ಭಗವಂತನ ಪಾದದಲ್ಲಿ, ಹಾಗೆಯೇ ಜನರಲ್ಲಿ. ನೀವೆಲ್ಲರೂ ನನ್ನನ್ನು ಆಶೀರ್ವಾದಿಸಿ ಮತ್ತು ಇದರಿಂದ ನನ್ನ ಕಡೆಯಿಂದ ಯಾವುದೇ ಕೊರತೆ ಆಗುವುದಿಲ್ಲ, ಎಂದು ಪ್ರಾರ್ಥಿಸುತ್ತೇನೆ.

6. ನಾಸಿಕಧಾಮ ಪಂಚವಟಿಯಿಂದ ಈ 11 ದಿನಗಳ ಅನುಷ್ಠಾನವನ್ನು ಆರಂಭಿಸುತ್ತಿರುವುದು ನನ್ನ ಸೌಭಾಗ್ಯ. ಶ್ರೀರಾಮನು ಪಂಚವಟಿಯಲ್ಲಿ ಬಹಳ ಕಾಲ ವಾಸವಾಗಿದ್ದನು ಎಂದು ಹೇಳಿದರು.

(ಸೌಜನ್ಯ :INDIA TODAY)