|
ಅಲೀಗಡ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ಮುಲಾಯಂ ಸಿಂಹ ಯಾದವರ ಆಗಿನ ಸರಕಾರದಲ್ಲಿ ರಾಮಭಕ್ತಿ ಮಾಡುವುದು ಅಪರಾಧವಾಗಿತ್ತು. ಆ ಸಮಯದಲ್ಲಿ ಕಾರಸೇವಕರನ್ನು ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆ ಹೊಂದಿದಾಗ ಅವರಿಗೆ ಅಪರಾಧ ಪ್ರಮಾಣ ಪತ್ರ ನೀಡಲಾಗುತ್ತಿದ್ದೂ, ಆ ಪ್ರಮಾಣ ಪತ್ರದ ಮೇಲೆ ‘ರಾಮಭಕ್ತಿ ಚಾಲಾನ’ ಎಂದು ಬರೆಯಲಾಗುತ್ತಿತ್ತು. ಅಲಿಗಡ ಜಿಲ್ಲೆಯಲ್ಲಿನ ಸುಮಾರು ೪೦೦ ಕಾರಸೇವಕರಿಗೆ ಇಂತಹ ‘ಅಪರಾಧ ಪ್ರಮಾಣ ಪತ್ರ’ ನೀಡಲಾಗಿತ್ತು. ಕಾರಸೇವಕರ ಆ ಸಮಯದ ಪರಿಸ್ಥಿತಿಯ ಬಗ್ಗೆ ಹೇಳುವಾಗ ಈ ಮಾಹಿತಿ ನೀಡಿದರು.
ಕಾರಸೇವಕ ಮನೋಜ ಆಗ್ರವಾಲ, ಅರ್ಜುನ ದೇವ ವಾರ್ಷ್ಣೆಯ ಮತ್ತು ಅನುರಾಗ ವಾರ್ಷ್ಣೆಯ ಇವರು, ೧೯೯೦ ಅಯೋಧ್ಯೆಯಲ್ಲಿ ಕಾರಸೇವೆ ಮಾಡುವುದಕ್ಕಾಗಿ ದೇಶಾದ್ಯಂತದಿಂದ ಕಾರಸೇವಕರು ಬಂದು ಸೇರಿದ್ದರು. ಆಗ ಉತ್ತರ ಪ್ರದೇಶದಲ್ಲಿನ ಸಮಾಜವಾದಿ ಪಕ್ಷದ ಸರಕಾರವಿತ್ತು. ಮುಲಾಯಂ ಸಿಂಹ ಯಾದವ ಮುಖ್ಯಮಂತ್ರಿ ಆಗಿದ್ದರು. ಸರಕಾರದ ಆದೇಶದಿಂದ ಕಾರಸೇವೆ ಮಾಡಲು ಬಂದಿರುವ ಜನರನ್ನು ಬಂಧಿಸಲಾಗುತ್ತಿತ್ತು. ಅಲಿಗಡದಲ್ಲಿ ನೂರಾರು ಕಾರಸೇವಕರನ್ನು ಪೊಲೀಸರು ಜೈಲಿಗೆ ಅಟ್ಟಿದರು ಮತ್ತು ಜೇಲಿನಿಂದ ಬಿಡುಗಡೆಯಾದ ನಂತರ ಅವರಿಗೆ ಒಂದು ಪ್ರಮಾಣ ಪತ್ರ ನೀಡಲಾಗಿತ್ತು. ಅದರ ಮೇಲೆ ಅಪರಾಧಿ ಕಾಲಂನಲ್ಲಿ ‘ರಾಮಭಕ್ತಿ ಚಾಲಾನ’ ಹೇಗೆ ಬರೆಯಲಾಗಿತ್ತು ಎಂದು ಹೇಳಿದರು.
ಹಣೆಯ ಮೇಲೆ ಕುಂಕುಮ ಹಚ್ಚಲು ಭಯ ! – ಮನೋಜ ಅಗ್ರವಾಲ
‘ಆ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಅಯೋಧ್ಯೆಯಲ್ಲಿ ಕಾರಸೇವೆಯ ಕರೆ ನೀಡಲಾಗಿತ್ತು. ನಮ್ಮ ೧೫೦ ಜನರ ಗುಂಪು ಕಾರಸೇವೆಗಾಗಿ ಅಯೋಧ್ಯೆಗೆ ಹೊರಟಿತ್ತು. ನಮ್ಮನ್ನು ದಾರಿಯಲ್ಲೇ ನಿಲ್ಲಿಸಿ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಯಾರಾದರೂ ಕೇಸರಿ ಬಟ್ಟೆ ಧರಿಸಿ ಮನೆಯ ಹೊರಗೆ ಬಂದರೆ ಆಗ ಅವರನ್ನು ಶಂಕಿತನಂತೆ ನೋಡಲಾಗುತ್ತಿತ್ತು. ನಮಗೆ ಹಣೆ ಮೇಲೆ ಕುಂಕುಮ ಹಚ್ಚಲು ಭಯವಾಗುತ್ತಿತ್ತು’, ಎಂದು ಮನೋಜ್ ಅಗ್ರವಾಲ್ ಇವರು ಹೇಳಿದರು.
೧೦ ದಿನ ಜೈಲಲ್ಲಿ ಇರಿಸಿದ್ದರು ! – ಅರ್ಜುನ ದೇವ ವಾರ್ಷ್ಣೆಯ
ಪೊಲೀಸರು ನಮಗೆ ಹತ್ತು ದಿನ ಜೈಲಲ್ಲಿ ಇರಿಸಿದ್ದರು. ಬಿಡುಗಡೆ ಆದ ನಂತರ ನಮಗೆ ಜಿಲ್ಲಾ ಆಡಳಿತದಿಂದ ಅಪರಾಧ ಪ್ರಮಾಣ ಪತ್ರ ನೀಡಲಾಗಿತ್ತು ಮತ್ತು ಅದರಲ್ಲಿ ಬಂಧನದ ಹಿಂದೆ ‘ರಾಮ ಭಕ್ತಿ’ ಈ ಕಾರಣ ಎಂದು ಬರೆಯಲಾಗಿತ್ತು, ಎಂದು ಅರ್ಜುನ ದೇವ ವಾರ್ಷ್ಣೆಯ ಇವರು ಹೇಳಿದರು.
ಪೊಲೀಸರ ಥಳಿತದಿಂದ ನನ್ನ ಕಾಲು ಮುರಿದಿತ್ತು ! – ಅನುರಾಗ ವಾರ್ಷ್ಣೆಯ
ಅಯೋಧ್ಯೆಗೆ ಹೋಗುವಾಗ ಪೊಲೀಸರು ಲಾಟಿಚಾರ್ಜ್ ಮಾಡಿದ್ದರಿಂದ ನನ್ನ ಕಾಲು ಮುರಿಯಿತು. ಪೊಲೀಸ ಠಾಣೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದರು. ನಂತರ ನನ್ನನ್ನು ಜೈಲಿಗೆ ಕಳುಹಿಸಿದರು. ಕಾಲು ಮುರಿದ ಸ್ಥಿತಿಯಲ್ಲಿ ನಾನು ಜೈಲಲ್ಲಿ ದಿನ ಕಳೆದೆ. ೧೨ ದಿನ ನನ್ನನ್ನು ಜೈಲಲ್ಲಿ ಇರಿಸಿ ನಂತರ ಬಿಡುಗಡೆ ಮಾಡಿದರು, ಎಂದು ಅನುರಾಗ ವಾರ್ಷ್ಣೆಯ ಇವರು ಹೇಳಿದರು.
ಸಂಪಾದಕೀಯ ನಿಲುವುಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಹ ಯಾದವ ಇವರ ಹಿಂದುದ್ವೇಷ ತಿಳಿಯಿರಿ ! ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದುತ್ವನಿಷ್ಠರಿಗೆ ಇಂತಹ ಪರಿಸ್ಥಿತಿ ಬರುವುದೆಂದರೆ ಹಿಂದುಗಳಿಗೆ ನಾಚಿಕೆಡು ! ಹಿಂದೂಗಳನ್ನು ವಕ್ರ ದೃಷ್ಟಿಯಿಂದ ನೋಡಲು ಧೈರ್ಯ ಆಗದಂತೆ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ! |