ಉತ್ತರದ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ! – ಸೈನ್ಯದಳದ ಮುಖ್ಯಸ್ಥ ಮನೋಜ ಪಾಂಡೆ

ಸೈನ್ಯದಳದ ಮುಖ್ಯಸ್ಥ ಮನೋಜ ಪಾಂಡೆ

ನವ ದೆಹಲಿ – ಭಾರತದ ಉತ್ತರದ ಗಡಿಯಲ್ಲಿನ ಸ್ಥಿತಿ ಸ್ಥಿರವಾಗಿ ಇದ್ದರು ಕೂಡ, ಸೂಕ್ಷ್ಮವಾಗಿದೆ. ನಮ್ಮಲ್ಲಿ ಸಾಕಷ್ಟು ಕ್ಷಮತೆ ಇದ್ದೂ ಸತತವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೆಚ್ಚಿಸುತ್ತಿದ್ದೇವೆ, ಎಂದು ಸೇನಾದಳ ಮುಖ್ಯಸ್ಥ ಮನೋಜ ಪಾಂಡೆ ಇವರು ಮಾಹಿತಿ ನೀಡಿದರು.

೧. ಲಡಾಖದಲ್ಲಿ ಚೀನಾದ ಜೊತೆ ನಡೆದಿರುವ ವಿವಾದದಿಂದ ಸೇನಾದಳ ಮುಖ್ಯಸ್ಥ ಪಾಂಡೆ ಇವರು, ಸೇನೆ ಮತ್ತು ರಾಜಕೀಯ ಎರಡೂ ಹಂತದಲ್ಲಿ ಚೀನಾದ ಜೊತೆಗಿನ ಚರ್ಚೆ ಮುಂದುವರೆದಿದೆ. ಚರ್ಚೆಯಲ್ಲಿ ನಮ್ಮ ಪ್ರಾಧಾನ್ಯತೆ ಎಪ್ರಿಲ್ ೨೦೨೦ ರ ಸ್ಥಿತಿ ಮತ್ತೆ ನಿರ್ಮಾಣ ಮಾಡುವುದು. ಅದರ ನಂತರ ಇತರ ಅಂಶಗಳ ಕಡೆಗೆ ಗಮನಹರಿಸಲಾಗುವುದು. ನಮ್ಮ ಬಳಿ ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಅದರ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಶಕ್ತಿ ಇದೆ ಎಂದು ಹೇಳಿದರು.

೨. ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಸೇನಾದಳ ಮುಖ್ಯಸ್ಥ ಪಾಂಡೆ ಇವರು ಮಾತನಾಡಿ, ಇಲ್ಲಿ ನುಸುಳುವಿಕೆಯ ಘಟನೆಗಳು ನಡೆಯುತ್ತಿದ್ದರು ಕೂಡ ನಾವು ಅವುಗಳನ್ನು ವಿಫಲಗೊಳಿಸುತ್ತಿದ್ದೇವೆ. ಅಲ್ಲಿ ಯುದ್ಧವಿರಾಮದ ಸ್ಥಿತಿ ಖಾಯಂ ಇದೆ. ಕಾಶ್ಮೀರದಲ್ಲಿ ಹಿಂಸೆ ಕಡಿಮೆ ಆಗಿದೆ. ಕಳೆದ ವರ್ಷ ರಾಜೌರಿ ಮತ್ತು ಪುಂಛ ಇಲ್ಲಿ ೨೦ ಸೈನಿಕರು ಹುತಾತ್ಮರಾದರು. ಇದರಿಂದ ನಾವು ಪಾಠ ಕಲಿತಿದ್ದೇವೆ ಎಂದು ಹೇಳಿದರು.

೩. ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಸೇನಾದಳ ಮುಖ್ಯಸ್ಥ ಪಾಂಡೆ ಇವರು, ಮಣಿಪುರದಲ್ಲಿ ನಾವು ಸರಕಾರಕ್ಕೆ ಸಹಾಯ ಮಾಡುತ್ತಿದ್ದೇವೆ. ಸೈನ್ಯವು ಅಲ್ಲಿ ಸಂಯಮದಿಂದ ಕಾರ್ಯ ಮಾಡಿದೆ. ಲೂಟಿ ಮಾಡಿರುವ ನಮ್ಮ ಶಸ್ತ್ರಾಸ್ತ್ರಗಳು ಹಿಂತಿರುಗಿ ಪಡೆಯುವ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

೪. ಚೀನಾ ಮತ್ತು ಭೂತಾನ ಇವರಲ್ಲಿ ಚರ್ಚೆಯ ಕಡೆಗೆ ಕೂಡ ನಮ್ಮ ಗಮನವಿದೆ. ಭೂತಾನದ ಜೊತೆಗೆ ನಮ್ಮ ಸಂಬಂಧ ದೃಢವಾಗಿದೆ. ಅದರ ಜೊತೆಗೆ ನಾವು ಸತತ ಸಂಪರ್ಕದಲ್ಲಿ ಇದ್ದೇವೆ, ಎಂದು ಸೈನ್ಯದಳ ಮುಖ್ಯಸ್ಥ ಪಾಂಡೆ ಇವರು ಸ್ಪಷ್ಟಪಡಿಸಿದರು.