ಗುಜರಾತ್ ಶಾಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ !
ನವದೆಹಲಿ – ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಒಂದು ವೀಡಿಯೊದಲ್ಲಿ, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿ ಹೇಳುವಾಗ ‘ಹಾಜರ್’ ಅಥವಾ ‘ಉಪಸ್ಥಿತ’ ಹೇಳದೇ ‘ಜೈ ಶ್ರೀ ರಾಮ’ ಎಂದು ಹೇಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಗುಜರಾತಿನದ್ದು ಎನ್ನಲಾಗುತ್ತಿದೆ. ಇದರಿಂದ ಕೆಲವು ಜನರು ‘ಶಾಲೆಯಿಂದಲೇ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಉತ್ತಮ’ ಎಂದು ಹೇಳಿದರೆ, ಇನ್ನು ಕೆಲವರು ‘ಶಾಲೆಯಲ್ಲಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು’ ಎಂದು ಹೇಳಿದ್ದಾರೆ.
ಜನವರಿ 1, 2020 ರಿಂದ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ ‘ಜೈ ಭಾರತ್’ ಅಥವಾ ‘ಜೈ ಹಿಂದ್’ ಎಂದು ಹೇಳುವಂತೆ ಗುಜರಾತ್ ಸರಕಾರ ಎಲ್ಲಾ ಶಾಲೆಗಳಿಗೆ ಆದೇಶಿಸಿತ್ತು.