ಗಂಟೆ ಬಾರಿಸಿದಾಗ ‘ಓಂ’ ಎಂಬ ಶಬ್ದ ಕೇಳಿಸುತ್ತದೆ !
ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮಮಂದಿರಕ್ಕಾಗಿ ರಾಜ್ಯದ ಎಟಾದ ಜಾಲೆಸರನಿಂದ 2 ಸಾವಿರ 400 ಕೆಜಿ ತೂಕದ ಗಂಟೆಯನ್ನು ಅರ್ಪಿಸಲಾಗಿದೆ. ನೂರಾರು ವರ್ತಕರು, ಈ ಅಷ್ಟಧಾತುವಿನ ಘಂಟೆಯನ್ನು ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಅಯೋಧ್ಯೆಗೆ ತಂದರು. ಈ ಘಂಟೆಯ ಎತ್ತರ 6 ಅಡಿಗಳಿಗಿಂತ ಹೆಚ್ಚಿದೆ. ಶಾಂತ ವಾತಾವರಣದಲ್ಲಿ ಈ ಘಂಟೆಯ ಧ್ವನಿ ಸುಮಾರು 2 ಕಿ.ಮಿ. ವರೆಗೆ ಕೇಳಿಬರುತ್ತದೆ. ವಿಶೇಷವೆಂದರೆ ಈ ಘಂಟೆ ಬಾರಿಸಿದಾಗ `ಓಂ’ ಎಂಬ ಧ್ವನಿ ಕೇಳಿಸುತ್ತದೆ.
ಈ ಘಂಟೆಯ ಅಚ್ಚನ್ನು 75 ಕಾರ್ಮಿಕರು 3 ತಿಂಗಳಿನಲ್ಲಿ ಸಿದ್ಧಪಡಿಸಿದ ಬಳಿಕ 70 ಕಾರ್ಮಿಕರು ಕೇವಲ 25 ನಿಮಿಷಗಳಲ್ಲಿ ಗಂಟೆಯನ್ನು ತಯಾರಿಸಿದರು. ಇದಕ್ಕಾಗಿ ಸುಮಾರ 25 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದರೊಂದಿಗೆ ಪ್ರತಿ 50 ಕೆ.ಜಿ. ತೂಕದ ಇತರೆ 7 ಗಂಟೆಗಳೂ `ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ಗೆ ಸಮರ್ಪಿಸಲಾಗಿದೆ. ಉದ್ಯಮಿ ಮನೋಜ ಮಿತ್ತಲ ಇವರು, ತಂದೆ ವಿಕಾಸ ಮಿತ್ತಲ ಇವರ ಸ್ಮರಣೆಗಾಗಿ ಈ ಗಂಟೆಯನ್ನು ತಯಾರಿಸಲಾಗಿದೆ ಎಂದು ಹೇಳಿದರು.