‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಸಂಘಟನೆಯಿಂದ ನಿರ್ಮಾಪಕರಿಗೆ ಕರೆ !
ನವ ದೆಹಲಿ – ಮಾಲ್ಡೀವ್ಸ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣವನ್ನು ಮಾಡದಿರಿ, ಎಂದು ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಸಂಘಟನೆಯು ಕರೆ ನೀಡಿದೆ. ಭಾರತದಲ್ಲಿಯೇ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಚಿತ್ರೀಕರಣವನ್ನು ಮಾಡಬೇಕು ಎಂದೂ ಈ ಸಂಘಟನೆಯು ಹೇಳಿದೆ. ಮಾಲ್ಡೀವ್ಸನ ಕೆಲವು ಸಚಿವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತವನ್ನು ಅಪಮಾನ ಮಾಡಿರುವ ಹಿನ್ನೆಲೆಯಲ್ಲಿ ಈ ಸಂಘಟನೆಯು ಒಂದು ಕರಪತ್ರದ ಮೂಲಕ ಕರೆ ನೀಡಿದೆ.
ಈ ಕರಪತ್ರದಲ್ಲಿ ಯಾವ ಚಲನಚಿತ್ರಗಳ ನಿರ್ಮಾಪಕರು ಮಾಲ್ಡೀವ್ಸನಲ್ಲಿ ಚಲನಚಿತ್ರಗಳ ಚಿತ್ರೀಕರಣದ ನಿಯೋಜನೆ ಮಾಡಿದ್ದಾರೆಯೋ ಮತ್ತು ಅದಕ್ಕಾಗಿ ಸ್ಥಳವನ್ನು ಕಾಯ್ದಿರಿಸಿದ್ದಾರೆಯೋ, ಅವರು ಅದನ್ನು ರದ್ದುಗೊಳಿಸಬೇಕು. ಈ ನಿರ್ಮಾಪಕರು ಭಾರತದಲ್ಲಿಯೇ ಮಾಲ್ಡೀವ್ಸನಂತಹ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಚಿತ್ರೀಕರಣವನ್ನು ಮಾಡಬೇಕು. ಇದರಿಂದ ಭಾರತದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದು ಹೇಳಿದ್ದಾರೆ.
Mumbai film industry workers union urges producers to choose alternate locations in India for shooting purposes. Read story!#FWICE #BoycottMaldives #MaldivesIndia #LakshadweepTourism #MaldivesOut https://t.co/xKCCjRq32H
— FilmiBeat (@filmibeat) January 11, 2024