ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ ಕಳೆದ 500 ವರ್ಷಗಳಿಂದ ಹಿಂದೂಗಳು ಹೋರಾಡುತ್ತಿದ್ದಾರೆ. ‘ಶ್ರೀರಾಮಮಂದಿರ ನಿರ್ಮಾಣದಲ್ಲಿ ತಮ್ಮ ಕೊಡುಗೆಯೂ ಇರಬೇಕು’, ಎಂದು ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷಮತೆಗನುಗುಣವಾಗಿ ಹೋರಾಡಿದರು, ಇನ್ನೂ ಕೆಲವರು ಅದಕ್ಕಾಗಿ ವ್ರತವನ್ನು ಮಾಡಿದರು ಅಥವಾ ಕೆಲವರು ವಿವಿಧ ರೀತಿಯ ನಿರ್ಧಾರಗಳನ್ನು ಕೈಗೊಂಡಿದ್ದರು. ಇದರ ಮಾಹಿತಿ ಈಗ ಬೆಳಕಿಗೆ ಬರುತ್ತಿದೆ. ಅಯೋಧ್ಯೆಯಿಂದ 15 ಕಿ.ಮೀ. ಅಂತರದಲ್ಲಿರುವ ಸರಾಯವಂಶಿ ಗ್ರಾಮದ ಸೂರ್ಯವಂಶಿ ನಾಗರಿಕರು `ಎಲ್ಲಿಯ ವರೆಗೆ ಶ್ರೀರಾಮಮಂದಿರ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೆ ತಲೆಗೆ ಪೇಟ ಮತ್ತು ಕಾಲಿಗೆ ಚರ್ಮದ ಚಪ್ಪಲಿಗಳನ್ನು ಧರಿಸುವುದಿಲ್ಲ’, ಎಂದು 500 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದರು. ಅವರ ಅನೇಕ ತಲೆಮಾರುಗಳು ಶ್ರೀರಾಮ ಮಂದಿರಕ್ಕಾಗಿ ಬಲಿದಾನ ಮಾಡಿದರು. ಈಗ ಅವರ ಪ್ರತಿಜ್ಞೆ ಪೂರ್ಣವಾಗುತ್ತಿರುವುದರಿಂದ ಅವರು ಸಂತಸಗೊಂಡಿದ್ದಾರೆ. ಈ ಸಮುದಾಯದವರು ಒಂದು ವೇಳೆ ಪ್ರಭು ಶ್ರೀರಾಮನಿಗೆ ಅವನ ಸ್ಥಾನದಲ್ಲಿ ವಿರಾಜಮಾನರಾಗಲು ಸಾಧ್ಯವಾಗದಿದ್ದರೆ, ನಾವು ಸಂತೋಷದ ಜೀವನವನ್ನು ಹೇಗೆ ನಡೆಸಬಹುದು ? ಎಂದು ಹೇಳುತ್ತಾರೆ.
Ayodhya: 150,000 villagers to finally wear turban and shoes as 500-year-old pledge gets fulfilled with Ram temple completion#RamMandir #RamJanmbhoomiMandir #AyodhyaRamTemple
READ: https://t.co/LvF4Sy8u4Vhttps://t.co/LvF4Sy8u4V
— WION (@WIONews) January 3, 2024