‘ಕಾರಸೇವಕರ ಮೇಲೆ ಗುಂಡು ಹಾರಿಸಲು ತತ್ಕಾಲಿನ ಸರಕಾರದ ಆದೇಶ ಯೋಗ್ಯ !’ (ಅಂತೆ) – ಸಮಾಜವಾದಿ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ವಿವಾದಾತ್ಮಕ ಹೇಳಿಕೆ !

ಸ್ವಾಮಿ ಪ್ರಸಾದ್ ಮೌರ್ಯ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಅಂದಿನ ಸರಕಾರವು ಕಾರಸೇವಕರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಯೋಗ್ಯವಾಗಿತ್ತು’, ಎಂದು ಹೇಳಿದ್ದಾರೆ. ‘ಅಂದಿನ ಸರಕಾರವು ಕಾನೂನಿನ ರಕ್ಷಣೆ ಮಾಡುವುದಕ್ಕಾಗಿ ಅವರ ಕರ್ತವ್ಯ ನಿಭಾಯಿಸಿದ್ದರು’, ಎಂದು ಮೌರ್ಯ ಹೇಳಿದರು. ಅವರು ಗಣೇಶಪುರದ ಬೌದ್ಧ ಏಕತಾ ಸಮಿತಿಯ ವತಿಯಿಂದ ಆಯೋಜಿಸಲಾದ ಬೌದ್ಧ ಜನಜಾಗೃತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.

೧. ಸ್ವಾಮಿ ಪ್ರಸಾದ ಮೌರ್ಯ ಇವರು, ಅಯ್ಯೋಧ್ಯೆಯಲ್ಲಿ ನ್ಯಾಯವ್ಯವಸ್ಥೆ ಅಥವಾ ಸರಕಾರದ ಯಾವುದೇ ಆದೇಶವಿಲ್ಲದೆ ಕಾರಸೇವಕರಿಂದ ದೊಡ್ಡ ಪ್ರಮಾಣದಲ್ಲಿ ದ್ವಂಸ ನಡೆದಿತ್ತು. ಅದಕ್ಕಾಗಿ ಅಂದಿನ ಸಮಾಜವಾದಿ ಪಕ್ಷದ ಮುಲಾಯಮ ಸಿಂಹ ಯಾದವ ಸರಕಾರ ಸಂವಿಧಾನ ಮತ್ತು ಕಾನೂನು ರಕ್ಷಣೆ ಮಾಡುವುದಕ್ಕಾಗಿ ಕಾರಸೇವಕರ ಮೇಲೆ ಗುಂಡು ಹಾರಿಸಲು ಹೇಳಿದ್ದರು. (ಉತ್ತರ ಪ್ರದೇಶದಲ್ಲಿನ ಗಲಭೆ ಸೃಷ್ಟಿಸುವ ಅಥವಾ ಮರಣಾಂತಿಕ ಹಲ್ಲೆ ನಡೆಸುವ ಮತಾಂಧ ಮುಸಲ್ಮಾನರ ಸಂದರ್ಭದಲ್ಲಿ ಸಮಾಜವಾದಿ ಸರಕಾರವು ಇಂತಹ ತತ್ಪರತೆ ತೋರಿಸಿತ್ತೆ ? – ಸಂಪಾದಕರು)

೨. ಅಕ್ಟೋಬರ್ ೩೦, ೧೯೯೦ ರಂದು ಮೊದಲ ಸಲ ಕಾರಸೇವಕರ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡು ತಗಲಿ ೫ ಜನರು ಸಾವನ್ನಪ್ಪಿದ್ದರು. ಗುಂಡಿನ ದಾಳಿಯ ನಂತರ ಕೇವಲ ೨ ದಿನದಲ್ಲಿ ನವಂಬರ್ ೨ ರಂದು ಸಾವಿರಾರು ಕಾರಸೇವಕರು ಹನುಮಾನ ಗಢ್ ಗೆ ತಲುಪಿದ್ದರು. ಈ ಘಟನೆಯ ೨ ವರ್ಷದ ನಂತರ ಡಿಸೆಂಬರ್ ೬, ೧೯೯೨ ರಲ್ಲಿ ಅಯೋಧ್ಯೆಯಲ್ಲಿನ ವಿವಾದಾತ್ಮಕ ಕಟ್ಟಡ ಕೆಡವಲಾಗಿತ್ತು.

* ಕೇವಲ ಮುಸಲ್ಮಾನರ ಓಲೈಕೆಗಾಗಿ ಅಂದಿನ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಮೂಲಯಮ ಸಿಂಹ ಯಾದವ ಇವರು ಕಾರಸೇವಕರ ಮೇಲೆ ಗುಂಡು ಹಾರಿಸುವ ತುಘಲಕ್ ಆದೇಶ ನೀಡಿದ್ದರು. ಅದನ್ನು ಬೆಂಬಲಿಸುವ ಮೌರ್ಯ ಇವರನ್ನು ಜೀವಾವಧಿಗಾಗಿ ಜೈಲಿಗೆ ಅಟ್ಟಲು ಸರಕಾರ ಪ್ರಯತ್ನ ಮಾಡಬೇಕು !

* ಚುನಾವಣೆಯ ಸಮಯದಲ್ಲಿ ಇಂತಹ ಪಕ್ಷದ ರಾಜಕೀಯ ಅಸ್ತಿತ್ವ ಹಿಂದುಗಳು ಮುಗಿಸುವರು ಇದು ನಿಶ್ಚಿತ !