ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆ ಮಾಡುವುದರಲ್ಲಿ ತಪ್ಪೇನು ? – ಗೃಹ ಸಚಿವ ಪರಮೇಶ್ವರ್

ಗೃಹ ಸಚಿವ ಪರಮೇಶ್ವರ್ ಇವರ ಪ್ರಶ್ನೆ ?

ಬೆಂಗಳೂರು – ನಾವು ಹಿಂದೂಗಳು ಅಲ್ಲವೇ ? ನಮ್ಮ ಪಕ್ಷದಲ್ಲಿ ಹಿಂದೂ ಧರ್ಮದವರಿಲ್ಲವೇ ? ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆ ಮಾಡಿದರೆ ಅದರಲ್ಲಿ ತಪ್ಪೇನಿದೆ ? ಎಂದು ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿನ ಗೃಹ ಸಚಿವ ಡಾ. ಜಿ ಪರಮೇಶ್ವರ್ ಇವರು ಪ್ರಶ್ನೆ ಕೇಳಿದರು. ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿನ ೩೨ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವ ಆದೇಶ ನೀಡಿದೆ. ಅದರ ಬಗ್ಗೆ ಅವರು ಮಾತನಾಡುತ್ತಿದ್ದರು. ‘ಅಯೋಧ್ಯೆ ಶ್ರೀರಾಮಮಂದಿರಗಾಗಿ ನಾನು ಕೂಡ ದೇಣಿಗೆ ನೀಡಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರವಾಗಿದೆ, ಎಂದೂ ಕೂಡ ಅವರು ಈ ಸಮಯದಲ್ಲಿ ಹೇಳಿದರು.

ಕಾಂಗ್ರೆಸ್ ಈ ಮೊದಲೇ ಅದರ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಗೆ ಭಾಗವಹಿಸಲು ಅನುಮತಿ ನೀಡಿದೆ; ಆದರೆ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕಿ ಸೋನಿಯಾ ಗಾಂಧಿ ಈ ಕಾರ್ಯಕ್ರಮಕ್ಕೆ ಉಪಸ್ಥಿತರಿರುವುದಿಲ್ಲ ಎಂದು ಹೇಳಿದರು.