೪೨ ದ್ವಾರಗಳಿಗೆ ೧೦೦ ಕೆಜಿ ಚಿನ್ನದ ಲೇಪನ !
ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಶ್ರೀರಾಮಮಂದಿರದ ಒಟ್ಟು ೪೬ ದ್ವಾರಗಳು ಅಳವಡಿಸಲಾಗುವುದು. ಅದರಲ್ಲಿನ ೪೨ ದ್ವಾರಗಳಿಗೆ ೧೦೦ ಕೆಜಿ ಚಿನ್ನದ ಲೇಪನ ಮಾಡಲಾಗುವುದು. ಇದರಲ್ಲಿನ ಮೊದಲನೆಯ ಚಿನ್ನದ ದ್ವಾರದ ಛಾಯಾಚಿತ್ರ ಪ್ರಸಾರ ಮಾಡಲಾಗಿದೆ. ಈ ದ್ವಾರ ಸುಮಾರು ೮ ಅಡಿ ಎತ್ತರ ಮತ್ತು ೧೨ ಅಡಿ ಅಗಲ ಇದೆ. ಬರುವ ೩ ದಿನದಲ್ಲಿ ಇನ್ನೂ ೧೩ ದ್ವಾರಗಳನ್ನು ಅಳವಡಿಸಲಾಗುವುದು. ಈ ದ್ವಾರಗಳು ಮಹಾರಾಷ್ಟ್ರದಲ್ಲಿನ ಸಾಗವಾನಿ ಕಟ್ಟಿಗೆಯಿಂದ ಮಾಡಲಾಗಿದೆ. ಹೈದರಾಬಾದಿನ ಕಾರ್ಮಿಕರಿಂದ ಇದರ ಕೆತ್ತನೆಕಾರ್ಯ ಮಾಡಿದೆ. ಇದರ ನಂತರ ಅದರ ಮೇಲೆ ತಾಮ್ರದ ಲೇಪನ ಮಾಡಿ ನಂತರ ಚಿನ್ನದ ಲೇಪನ ಮಾಡಲಾಗಿದೆ.
ಶ್ರೀರಾಮಲಲ್ಲನ ಸಿಂಹಾಸನ ಕೂಡ ಚಿನ್ನದ್ದು !
ಶ್ರೀ ರಾಮಲಲ್ಲಾನ ಸಿಂಹಾಸನ ಕೂಡ ಚಿನ್ನದಿಂದ ತಯಾರಿಸಲಾಗಿದೆ. ಈ ಕಾರ್ಯ ಜನವರಿ ೧೫ ರ ವರೆಗೆ ಪೂರ್ಣಗೊಳ್ಳುವುದು. ಮಂದಿರದ ಶಿಖರ ಕೂಡ ಚಿನ್ನದ್ದೆ ಇರಲಿದೆ; ಆದರೆ ಈ ಕಾರ್ಯ ಶಿಖರ ಪೂರ್ಣವಾದ ನಂತರ ಮಾಡಲಾಗುವುದು.
ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿರುವ ಚರಣ ಪಾದುಕೆ !
ಭಗವಾನ್ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ನಂತರ ಅವರ ಚರಣ ಪಾದುಕೆ ಕೂಡ ಮಂದಿರದಲ್ಲಿ ಇಡಲಾಗುವುದು. ಈ ಚರಣ ಪಾದುಕೆ ೧ ಕೆಜಿ ಚಿನ್ನ ಮತ್ತು ೭ ಕೆಜಿ ಬೆಳ್ಳಿಯಿಂದ ತಯಾರಿಸಲಾಗಿದೆ. ಭಾಗ್ಯನಗರದ ಶ್ರೀಜಲ ಶ್ರೀನಿವಾಸ ಶಾಸ್ತ್ರಿ ಇವರು ಈ ಪಾದುಕೆ ತಯಾರಿಸಿದ್ದಾರೆ.