ಅಯೋಧ್ಯೆಯಲ್ಲಿ ಶರಯೂ ನದಿಯ ತೀರದಲ್ಲಿ 100 ಯಜ್ಞಕುಂಡಗಳ ನಿರ್ಮಾಣ !

1 ಸಾವಿರದ 8 ಶಿವಲಿಂಗಗಳ ಕೂಡ ಸ್ಥಾಪನೆ !

ಅಯೋಧ್ಯೆ – ಜನೇವರಿ 22 ರಂದು ನಡೆಯುವ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಜನವರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಈ ಸಂದರ್ಭದಲ್ಲಿ ಸಾವಿರಾರು ಋಷಿಮುನಿಗಳು ಮತ್ತು ಸಂತರು ಯಾಗ-ಪೂಜೆ ಮಾಡಲು ಅಯೋಧ್ಯೆಗೆ ಬರುವವರಿದ್ದಾರೆ. ಜನವರಿ 17 ರಿಂದ ಯಾಗ- ಪೂಜೆಗಳು ಆರಂಭವಾಗಲಿದೆ. ಇದಕ್ಕಾಗಿ ಅಯೋಧ್ಯೆಯ ಶರಯೂ ನದಿಯ ದಡದಲ್ಲಿ 100 ಯಜ್ಞಕುಂಡಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ ಶರಯೂ ನದಿಯ ತೀರದಲ್ಲಿ ಜಬಲಪುರದಿಂದ ಬರುವ 1 ಸಾವಿರ 8 ಶಿವಲಿಂಗಳ ಸ್ಥಾಪನೆಯಾಗಲಿದೆ. ನಗರದಲ್ಲಿ ಜನವರಿ 22 ರಂದು ನಡೆಯುವ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ಸಿದ್ಧತೆಗಳು ಪ್ರಾರಂಭವಾಗಿದ್ದು, ನಗರದ ವಾತಾವರಣ ರಾಮಮಯವಾಗಿದೆ.

ಅಯೋಧ್ಯೆಯಲ್ಲಿ ಜನವರಿ 8 ರಿಂದ ರಾಮಕಥಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ಪ್ರಾರಂಭವಾಗಿದೆ. ಈ ಮಹೋತ್ಸವ ಹೋಳಿಹಬ್ಬದ ವರೆಗೆ ಅಂದರೆ ಮಾರ್ಚ್ 24 ರವರೆಗೆ ಮುಂದುವರಿಯುತ್ತದೆ. ರಾಮಕಥಾ ಉದ್ಯಾನವನದಲ್ಲಿ ವಿವಿಧ ಧಾರ್ಮಿಕ ಮುಖಂಡರು ರಾಮಕಥೆಯ ಮೇಲೆ ಪ್ರವಚನ ಮಾಡಲಿದ್ದಾರೆ.