ನಾಗಪುರ – ಯಾವುದೇ ಯುದ್ಧದಲ್ಲಿ ನೀವು ಧರ್ಮರಥದ ಮೇಲೆ ಆರೂಢನಾಗಿದ್ದರೆ, ಆಗ ಶತ್ರುಗಳಿಂದ ಕೂಡ ನಿಮ್ಮ ಪರಾಜಯ ಆಗಲು ಸಾಧ್ಯವಿಲ್ಲ. ಈ ಉಪದೇಶ ಗೋಸ್ವಾಮಿ ತುಲಸಿದಾಸರು ಬರೆದಿರುವ ‘ರಾಮಚರಿತಮಾನಸ’ದಲ್ಲಿ ವಿಭೀಷಣ ಗೀತೆಯಲ್ಲಿ ಹೇಳಿದ್ದಾರೆ, ಎಂದು ಹಿರಿಯ ಸಾಹಿತಿ ಮತ್ತು ಅಭ್ಯಾಸಕರಾದ ಪ್ರಕಾಶ ಎದಲಾಬಾದಕರ ಇವರು ಪ್ರತಿಪಾದಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಿದರ್ಭ ಪ್ರಾಂತ ಮತ್ತು ಶ್ರೀ ಜಗದಂಬಾ ದೇವಸ್ಥಾನದ ಸಮಿತಿ ಇವರ ಉಪಸ್ಥಿತಿಯಲ್ಲಿ ಆಯೋಜಿಸಲಾದ ವ್ಯಾಖ್ಯಾನದಲ್ಲಿ ‘ತುಳಸಿ ರಾಮಾಯಣದಲ್ಲಿ ರಾಮ’ ಈ ವಿಷಯವಾಗಿ ಪ್ರಮುಖ ವಕ್ತಾರರೆಂದು ಅವರು ಮಾತನಾಡುತ್ತಿದ್ದರು.
ರಾಮರಾಜ್ಯ ಬೇಕಿದ್ದರೆ, ಪ್ರಜೆಗಳು ಕೂಡ ರಾಮರಾಜ್ಯದಲ್ಲಿ ಬದುಕಲು ಯೋಗ್ಯವಾಗಿ ಇರಬೇಕು !
ಪ್ರಕಾಶ ಎದಲಾಬಾದಕರ ಮಾತು ಮುಂದುವರೆಸಿ, ರಾಜ ಇವನು ಉಪಭೋಗಶೂನ್ಯ ಸ್ವಾಮಿ ಇರುತ್ತಾನೆ, ಈ ಸಂದೇಶ ಕೂಡ ಪ್ರಭು ಶ್ರೀರಾಮಚಂದ್ರನು ನೀಡಿದ್ದಾನೆ. ರಾಮರಾಜ್ಯದಲ್ಲಿ ಆಚಾರ ಮತ್ತು ವಿಚಾರ ಇದರ ಸ್ವಾತಂತ್ರ್ಯ ಇತ್ತು, ಇದು ಕೂಡ ಶ್ರೀರಾಮಚರಿತ ಮಾನಸದಲ್ಲಿ ಸ್ಪಷ್ಟಪಡಿಸಿದೆ. ನಿಮಗೆ ರಾಮರಾಜ್ಯ ಬೇಕಿದ್ದರೆ, ಪ್ರಜೆಗಳು ಕೂಡ ರಾಮ ರಾಜ್ಯದಲ್ಲಿ ಬದುಕಲು ಯೋಗ್ಯವಾಗಬೇಕು, ಈ ಸಂದೇಶ ತುಳಸಿ ರಾಮಾಯಣದಲ್ಲಿ ನೀಡಿದೆ.
ಪ್ರತಿಯೊಬ್ಬರಿಗೂ ‘ರಾಮ’ ಆಗಬೇಕಾದರೆ, ನಮ್ಮಲ್ಲಿನ ‘ರಾವಣ’ನನ್ನು ದೂರ ಮಾಡಿ ! – ಡಾ. ಶರದ ನಿಂಬಾಳಕರ
ಡಾ. ಶರದ ನಿಂಬಾಳಕಾರ ಇವರು, ”ಪ್ರತಿಯೊಬ್ಬ ವ್ಯಕ್ತಿಗೂ ರಾಮನಾಗಲು ಇಷ್ಟವಾಗುತ್ತದೆ; ಆದರೆ ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮಲ್ಲಿನ ರಾವಣನನ್ನು ದೂರ ಸರಿಸಿ ನಮ್ಮಲ್ಲಿನ ರಾಮನನ್ನು ಜಾಗೃತಗೊಳಿಸಬೇಕು, ಎಂದು ಪ್ರಭು ರಾಮಚಂದ್ರರು ತಮ್ಮ ಕೃತಿಯಿಂದ ಸಂದೇಶ ನೀಡಿದ್ದಾನೆ. ರಾವಣನು ಕೂಡ ಬ್ರಾಹ್ಮಣ ಕುಲದವನಾಗಿದ್ದನು. ಅವನು ದಶಮುಖ, ಎಂದರೆ ೧೦ ಗುಣ ಉಳ್ಳವನಾಗಿದ್ದನು; ಆದರೆ ‘ಅಹಂಕಾರ’ ಈ ದುರ್ಗುಣದಿಂದ ಅವನ ಎಲ್ಲವನ್ನು ಕಳೆದುಕೊಂಡನು.