ಶಾಜಾಪುರ (ಮಧ್ಯಪ್ರದೇಶ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲುತೂರಾಟ : 44 ಮುಸಲ್ಮಾನರ ವಿರುದ್ಧ ದೂರು ದಾಖಲು !

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಹಿನ್ನಲೆಯಲ್ಲಿ ಹಿಂದೂಗಳ ಮೆರವಣಿಗೆ !

ಶಾಜಾಪುರ – ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಭಗವಾನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಹಿಂದೂ ಸಮಾಜ ಪ್ರತಿದಿನ ಸಾಯಂಕಾಲದ ಮೆರವಣಿಗೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನವರಿ 8 ರಂದು ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ 30 ರಿಂದ 40 ಹಿಂದೂಗಳು ಸಂಜೆ ಮೆರವಣಿಗೆಯನ್ನು ನಡೆಸುತ್ತಿದ್ದರು. ಈ ಮೆರವಣಿಗೆಯು ಅಖಂಡ ಆಶ್ರಮದ ಎದುರಿನ ರಸ್ತೆಯಿಂದ ಹೋಗುತ್ತಿರುವಾಗ ಮುಸಲ್ಮಾನರ ಗುಂಪು ಮೆರವಣಿಗೆಯನ್ನು ತಡೆದರು ಮತ್ತು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಸಿದರು. ಈ ಘಟನೆಯಲ್ಲಿ ಹಿಂದೂ ಸಮುದಾಯದ 6 ಜನರು ಗಂಭೀರವಾಗಿ ಗಾಯಗೊಂಡರು. ತದನಂತರ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು ಮತ್ತು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಈ ಪ್ರಕರಣದಲ್ಲಿ ಪೊಲೀಸರು 44 ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ದೂರಿನಲ್ಲಿ, ಕೆಲವು ಮುಸಲ್ಮಾನರು ಕತ್ತಿ ಹಿಡಿದು ಹಿಂದೂಗಳನ್ನು ಹತ್ಯೆ ಮಾಡಲು ಓಡಿದರು. ಗುಂಪಿನಿಂದ ಮಂಜೂರ ಖಾನ ಹೆಸರಿನ ವ್ಯಕ್ತಿಯು ಮೆರವಣಿಗೆಯಲ್ಲಿದ್ದ ಹಿಂದೂಗಳ ಮೇಲೆ ಕತ್ತಿಯಿಂದ ದಾಳಿ ಮಾಡಿದನು. ಅದರಲ್ಲಿ ಲಲಿತ ಕುಶವಾಹ ಇವನ ತಲೆಗೆ ಗಾಯವಾಗಿ ರಕ್ತಸ್ರಾವ ಆಗತೊಡಗಿತು. ಕಲ್ಲುತೂರಾಟದಲ್ಲಿ ಕುಣಾಲ ದೇವತವಾಲ, ಢೋಲಿ ಸೋನೂ ಮಾಲವೀಯ, ಪ್ರಶಾಂತ ಕುಶವಾಹ, ಚೇತನ ಪ್ರಜಾಪತಿ, ನಿಖಿಲ ಪ್ರಜಾಪತಿ ಮುಂತಾದವರು ಗಾಯಗೊಂಡರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 8 ಜನರನ್ನು ಬಂಧಿಸಲಾಗಿದ್ದು, ಇತರರನ್ನು ಹುಡುಕಲಾಗುತ್ತಿದೆಯೆಂದು ಪೊಲೀಸರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂದ್ವೇಷ ನರನರಗಳಲ್ಲಿಯೂ ತುಂಬಿರುವ ಮತಾಂಧರ ವಿರುದ್ಧ ಕಾನೂನುರೀತ್ಯಾ ಹೋರಾಡಲು ಹಿಂದೂಗಳು ಸಂಘಟಿತರಾಗುವುದು ಕಾಲದ ಆವಶ್ಯಕತೆಯಾಗಿದೆ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಈ ರೀತಿ ದಾಳಿಗಳು ನಡೆಯಬಾರದು ಎಂದು ಅಪೇಕ್ಷೆ !