ಉತ್ತರಪ್ರದೇಶದಲ್ಲಿ ನಗರಪಾಲಿಕೆಯಿಂದ ಗಾಜಿಯಾಬಾದ್ ಹೆಸರನ್ನು ಬದಲಾಯಿಸುವ ಪ್ರಸ್ತಾಪ !

ಗಾಜಿಯಾಬಾದ (ಉತ್ತರಪ್ರದೇಶ) – ಗಾಜಿಯಾಬಾದ್‌ನ ಮರುನಾಮಕರಣಕ್ಕೆ ಸಂಬಂಧಿಸಿದಂತೆ ನಗರಪಾಲಿಕೆಯಲ್ಲಿ ಚರ್ಚೆ ಮಾಡಲಾಗಿದೆ. ಇದಕ್ಕಾಗಿ ‘ಗಜನಗರ‘ ಮತ್ತು “ಹರನಂದಿನಗರ‘ ಎಂಬ ಹೆಸರುಗಳನ್ನು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮೇಯರ್ ಸುನಿತಾ ದಯಾಲ ಇವರ ಪ್ರಕಾರ, ನಗರಪಾಲಿಕೆಯಲ್ಲಿ ಮರುನಾಮಕರಣದ ಪ್ರಸ್ತಾಪ ಒಪ್ಪಿಗೆಯಾದರೇ, ಮುಂದೆ ರಾಜ್ಯಸರಕಾರಕ್ಕೆ ಮತ್ತು ನಂತರ ಕೇಂದ್ರಸರಕಾರಕ್ಕೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎಂದು ತಿಳಿಸಿದರು. 1740 ರಲ್ಲಿ ಮೊಘಲ್ ದೊರೆ ಗಾಝಿಉದ್ದೀನ್ ಹೆಸರಿನಿಂದ ಈ ಜಿಲ್ಲೆಗೆ ಈ ಹೆಸರು ಇಡಲಾಗಿತ್ತು.

(ಸೌಜನ್ಯ – News State)

ಸಂಪಾದಕೀಯ ನಿಲುವು

ಸ್ವಾತಂತ್ಯ್ರ ಬಂದು ೭೫ ವರ್ಷಗಳು ಕಳೆದರೂ ಆಕ್ರಮಣಕಾರರ ಹೆಸರುಗಳು ಖಾಯಂ ಇರುವುದು, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡು !