ಗುಜರಾತ ಗಲಭೆಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರು ಗುಜರಾತದಲ್ಲಿ ಭಯೋತ್ಪಾದಕ ದಾಳಿಯ ಸಿದ್ಧತೆಯಲ್ಲಿದ್ದರು !

ನವ ದೆಹಲಿ – ಗುಜರಾತದಲ್ಲಿ ೨೦೦೨ ರಲ್ಲಿ ನಡೆದಿರುವ ಗಲಭೆಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ನ ಪುಣೆ ಗುಂಪಿನಿಂದ ಗುಜರಾತದಲ್ಲಿ ಭಯೋತ್ಪಾದಕ ದಾಳಿ ಮಾಡುವ ಷಡ್ಯಂತ್ರ ರಚಿಸಿರುವುದು ಬೆಳಕಿಗೆ ಬಂದಿದೆ. ಕೆಲವು ತಿಂಗಳ ಹಿಂದೆ ಬಂಧಿಸಲಾಗಿರುವ ಇಸ್ಲಾಮಿಕ್ ಸ್ಟೇಟ್ ನ ಶಾಹನವಾಜ್ ಆಲಂ ಈ ಭಯೋತ್ಪಾದಕನ ವಿಚಾರಣೆಯಿಂದ ಮಾಹಿತಿ ದೊರೆತಿದೆ. ಆತ ಹೇಳಿದಂತೆ ಗುಜರಾತದಲ್ಲಿ ಗಾಂಧಿನಗರ, ಕರ್ಣಾವತಿ, ವಡೋದರ ಮತ್ತು ಸೂರತ ಈ ನಗರಗಳನ್ನು ಗುರಿ ಮಾಡಿದ್ದರು.

ಶಹನವಾಜ್, ಭಯೋತ್ಪಾದಕ ದಾಳಿಗಾಗಿ ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರು ಪುಣೆಯಿಂದ ಕರ್ಣಾವತಿಗೆ ಹೋಗಿದ್ದರು. ಅವರು ಅಲ್ಲಿ ಎರಡು ದಿನ ಉಳಿದುಕೊಂಡರು. ಅಲ್ಲಿಯ ರೈಲು ನಿಲ್ದಾಣ, ಥಿಯೇಟರ್, ಕಾಲೇಜುಗಳು, ಸಭಾಗೃಹಗಳು, ಮಸೀದಿ, ಸಾಬರಮತಿ ಆಶ್ರಮ, ನ್ಯಾಯಾಲಯಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಲಯಗಳ ಮುಂತಾದ ಸಾರ್ವಜನಿಕ ಸ್ಥಳಗಳ ಮಾಹಿತಿ ಸಂಗ್ರಹಿಸಿದ್ದರು. ಅಲ್ಲಿಯ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದರು ಮತ್ತು ವಿಡಿಯೋ ಕೂಡ ತಯಾರಿಸಿದ್ದರು. ಅದರ ನಂತರ ಅವರು ಹಿಂತಿರುಗಿದ್ದರು. ಅವರು ಪಾಕಿಸ್ತಾನದಲ್ಲಿನ ಅವರ ಅಬು ಸುಲೇಮಾನ್ ಈ ಮುಖ್ಯಸ್ಥನಿಂದ ಆದೇಶ ದೊರೆತನಂತರ ಈ ಷಡ್ಯಂತ್ರ ಹೇಗೆ ಪೂರ್ಣಗೊಳಿಸುವುದು ಇದನ್ನು ನಿಶ್ಚಯ ಮಾಡುವವರಿದ್ದರು.

ಸಂಪಾದಕೀಯ ನಿಲುವು

೨೦ ವರ್ಷಗಳ ಹಿಂದೆ ಕಾರ ಸೇವಕರನ್ನು ಸುಟ್ಟಿರುವುದರ ನಂತರ ನಡೆದಿರುವ ಗಲಭೆಯ ಸೇಡು ತೀರಿಸಿಕೊಳ್ಳಲು ಮತಾಂಧ ಮುಸಲ್ಮಾನರು ಇಂದಿಗೂ ಸತತ ಪ್ರಯತ್ನ ಮಾಡುತ್ತಿದ್ದಾರೆ. ಹಿಂದುಗಳು ಈ ರೀತಿಯ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ ಆಗ ಅವರಿಗೆ ವರ್ಷದ ೩೬೫ ದಿನಗಳು ಕೂಡ ಕಡಿಮೆ ಬೀಳುವುದು; ಆದರೆ ಹಿಂದುಗಳು ಸಹಿಷ್ಣು ಮತ್ತು ಕಾನೂನು ಪ್ರಿಯರಾಗಿರುವುದರಿಂದ ಅವರು ಯಾವಾಗಲೂ ಅನ್ಯಾಯದ ವಿರೋಧ ಕಾನೂನು ರೀತಿಯಲ್ಲಿ ಹೋರಾಡುತ್ತಾರೆ !