ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗಾಗಿ ತಿರುಪತಿ ದೇವಸ್ಥಾನದಿಂದ 1 ಲಕ್ಷ ಲಡ್ಡುಗಳನ್ನು ಅರ್ಪಣೆ !

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗಾಗಿ ತಿರುಪತಿ ದೇವಸ್ಥಾನದಿಂದ 1 ಲಕ್ಷ ಲಡ್ಡುಗಳನ್ನು ಅರ್ಪಿಸಲಾಗುತ್ತಿದೆ

ತಿರುಪತಿ (ಆಂಧ್ರಪ್ರದೇಶ) – ಶ್ರೀರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ‘ತಿರುಮಲಾ ತಿರುಪತಿ ದೇವಸ್ಥಾನ ಮಂಡಳಿ’ಯಿಂದ 1 ಲಕ್ಷ ಲಡ್ಡುಗಳನ್ನು ಕಳುಹಿಸಲು ನಿರ್ಣಯಿಸಲಾಗಿದೆ. ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡುಗಳನ್ನೇ ಅಯೋಧ್ಯೆಗೆ ಪ್ರಸಾದ ರೂಪದಲ್ಲಿ ಕಳುಹಿಸಲಿದ್ದಾರೆ.

ಈ ಸಂದರ್ಭದಲ್ಲಿ ತಿರುಮಲ-ತಿರುಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಧರ್ಮಾ ರೆಡ್ಡಿಯವರು ಹೇಳಿರುವುದೇನೆಂದರೆ,

1. ಶ್ರೀರಾಮ ಮತ್ತು ವೆಂಕಟೇಶ ಬಾಲಾಜಿ ಇಬ್ಬರೂ ಭಗವಾನ ವಿಷ್ಣುವಿನ ಪ್ರಮುಖ ಅವತಾರಗಳಲ್ಲಿ ಒಂದಾಗಿದೆ. ಆದುದರಿಂದ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ಆಗಮಿಸುವ ಗಣ್ಯರು ಹಾಗೂ ಭಕ್ತರಿಗೆ 25 ಗ್ರಾಂ ತೂಕದ 1 ಲಕ್ಷ ಲಡ್ಡುಗಳನ್ನು ಅರ್ಪಿಸುವ ನಿರ್ಣಯವನ್ನು ನಾವು ತೆಗೆದುಕೊಂಡಿದ್ದೇವೆ.

2. ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮ ಸನಾತನ ಧರ್ಮಕ್ಕೆ ಐತಿಹಾಸಿಕ ಕ್ಷಣವಾಗಿದೆ.

3. ನಮ್ಮ ಮಂಡಳಿಯ ಮೂಲ ಉದ್ದೇಶ ಹಿಂದೂ ಧರ್ಮ ಮತ್ತು ಅದರ ಸಂಸ್ಕೃತಿ ಹಾಗೂ ಮೌಲ್ಯಗಳ ಪ್ರಚಾರ-ಪ್ರಸಾರ ಮಾಡುವುದಾಗಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ನಡೆಯಲಿರುವ ಪೂಜೆಯ ಸಂದರ್ಭದಲ್ಲಿ ನಾವೂ ಒಂದು ಭಾಗವಾಗಿರುವುದು ನಮ್ಮ ಸೌಭಾಗ್ಯವಾಗಿದೆ.

4. ತಿರುಪತಿ ದೇವಸ್ಥಾನದಲ್ಲಿ ಪ್ರತಿದಿನ 175 ಗ್ರಾಂ ತೂಕದ 4 ಲಕ್ಷ ಲಡ್ಡುಗಳು ಮತ್ತು 25 ಗ್ರಾಂ ತೂಕದ 75 ಸಾವಿರ ಸಣ್ಣ ಲಡ್ಡುಗಳನ್ನು ತಯಾರಿಸಲಾಗುತ್ತದೆ.

5. ಅಯೋಧ್ಯೆಯಲ್ಲಿ ಭಗವಾನ ವೆಂಕಟೇಶ್ವರನ ಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಮಂಡಳಿಯು ಯೋಗಿ ಆದಿತ್ಯನಾಥ ಸರ್ಕಾರದ ಅನುಮತಿಗಾಗಿ ಎದುರು ನೋಡುತ್ತಿದ್ದೇವೆ

ಸಂಪಾದಕೀಯ ನಿಲುವು

ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮ ಸನಾತನ ಧರ್ಮಕ್ಕೆ ಐತಿಹಾಸಿಕ ಕ್ಷಣ! – ತಿರುಪತಿ ದೇವಸ್ಥಾನ