|
ಭೋಪಾಲ (ಮಧ್ಯಪ್ರದೇಶ) – ಇಲ್ಲಿಯ ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಖಾಸಗಿ ಬಾಲಕಿಯರ ಹಾಸ್ಟೆಲ್ ನ ೬೮ ಹೆಣ್ಣು ಮಕ್ಕಳಲ್ಲಿ ೨೬ ನಾಪತ್ತೆ ಆಗಿರುವ ಬಗ್ಗೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರಿಗೆ ಮಾಹಿತಿ ದೊರೆತಿದೆ. ನಂತರ ಅವರು ಅಲ್ಲಿ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಅಲ್ಲಿರುವ ಅನೇಕ ಅನಪೇಕ್ಷಿತ ವಿಷಯಗಳು ಕಂಡು ಬಂದಿದೆ. ಈ ಮಾಹಿತಿಯನ್ನು ಅವರು ‘ಎಕ್ಸ್’ನಲ್ಲಿ ಪ್ರಸಾರಗೊಳಿಸಿದ್ದಾರೆ. ಈ ಬಾಲಕಿಯರ ಹಾಸ್ಟೆಲ್ ನಲ್ಲಿ ೬ ರಿಂದ ೧೮ ವಯಸ್ಸಿನ ಹೆಣ್ಣು ಮಕ್ಕಳು ವಾಸಿಸುತ್ತಿದ್ದರು. ಅದರಲ್ಲಿನ ಹೆಚ್ಚಿನವರು ಹಿಂದೂ ಹುಡುಗಿಯರಾಗಿದ್ದಾರೆ. ಹುಡುಗಿಯರು ನಾಪತ್ತೆಯಾಗಿರುವ ಸಂದರ್ಭದಲ್ಲಿ ಬಾಲಕಿಯರ ಹಾಸ್ಟೆಲ್ ನ ಸಂಚಾಲಕ ಮ್ಯಾಥ್ಯು ಇವರು, ನಾಪತ್ತೆ ಆಗಿರುವ ಹುಡುಗಿಯರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಕಾನೂನಗೋ ಇವರು ನೀಡಿರುವ ಮಾಹಿತಿಯನುಸಾರ ರಸ್ತೆಯಲ್ಲಿ ದೊರೆತಿರುವ ಅನಾಥ ಹಿಂದೂ ಮಕ್ಕಳ ಬಗ್ಗೆ ಸರಕಾರಕ್ಕೆ ಯಾವುದೇ ಮಾಹಿತಿ ನೀಡದೆ ಈ ಬಾಲಕಿಯರನ್ನು ಹಾಸ್ಟೆಲ್ ನಲ್ಲಿಟ್ಟು ಅವರಿಂದ ಕ್ರೈಸ್ತ ಧರ್ಮದ ಪಾಲನೆ ಮಾಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಇಲ್ಲಿ ೬ ರಿಂದ ೧೮ ವಯಸ್ಸಿನ ೪೦ ಗಿಂತಲೂ ಹೆಚ್ಚಿನ ಹುಡುಗಿಯರು ಹಿಂದುಗಳಾಗಿದ್ದಾರೆ.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ ! ದೇಶದಲ್ಲಿನ ಕ್ರೈಸ್ತ ಮಿಷನರಿಗಳ ಪ್ರತಿಯೊಂದು ತಥಾಕಥಿತ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯದ ವಿಚಾರಣೆ ನಡೆಸುವುದು ಆವಶ್ಯಕವಾಗಿದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ ! |