ಸೊಮಾಲಿಯಾ ಹತ್ತಿರದ ಸಮುದ್ರದಲ್ಲಿ ಅಪಹರಣಕ್ಕೊಳಗಾಗಿರುವ ಹಡಗಿನಿಂದ 21 ಜನರ ರಕ್ಷಣೆ

ಭಾರತೀಯ ನೌಕಾದಳಕ್ಕೆ ಬಹುದೊಡ್ಡ ಯಶಸ್ಸು

15 ಭಾರತೀಯರ ಸಮಾವೇಶ

ಮೊಗಾಡಿಶು (ಸೊಮಾಲಿಯಾ) – ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾ ದೇಶದ ಹತ್ತಿರ ಜನೇವರಿ 4 ರಂದು ಒಂದು ಹಡಗಿನ ಅಪಹರಣ ಮಾಡಲಾಗಿತ್ತು. `ಎಂ.ವಿ. ಲೀಲಾ ನಾರಫೋಕ’ ಹೆಸರಿನ ಈ ಹಡಗಿನಲ್ಲಿ 15 ಭಾರತೀಯ ಸದಸ್ಯರೊಂದಿಗೆ 21 ಜನರು ಕೆಲಸ ಮಾಡುತ್ತಿದ್ದರು. ಈ ಘಟನೆಯ ಮಾಹಿತಿ ಸಿಗುತ್ತಲೇ ಭಾರತೀಯ ನೌಕಾದಳ ತ್ವರಿತವಾಗಿ ಸಕ್ರಿಯಗೊಂಡು ಕಾರ್ಯಾಚರಣೆ ಪ್ರಾರಂಭಿಸಿತು. ಅವರು ನಡೆಸಿದ ಕಾರ್ಯಾಚರಣೆಯಿಂದಾಗಿ ಹಡಗಿನಲ್ಲಿದ್ದ 15 ಭಾರತೀಯರೊಂದಿಗೆ 21 ಸದಸ್ಯರನ್ನು ಬಿಡುಗಡೆಗೊಳಿಸಲಾಯಿತು. ಮಾರ್ಕೊಸ (ಭಾರತೀಯ ನೌಕಾದಳದ ಕಮಾಂಡೋ) ಕಾರ್ಯಾಚರಣೆ ನಡೆಸಿದ ಹಡಗಿನಲ್ಲಿ ಶೋಧನೆಯನ್ನು ನಡೆಸಿತು; ಆದರೆ ಅವರಿಗೆ ಅಪಹರಣಕಾರರು ಕಂಡು ಬರಲಿಲ್ಲ.

ಬಿಡುಗಡೆಗೊಂಡಿರುವ ಸದಸ್ಯರು,

ಅಪಹರಣ ಮಾಡುವಾಗ ಅಪಹರಣಕಾರರು ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತದನಂತರ ಆಶ್ರಯ ಪಡೆದು ಅವರು ಅಡಗಿ ಕುಳಿತಿದ್ದರು. ಭಾರತೀಯ ನೌಕಾದಳದ ಪ್ರಮುಖ ಆರ್. ಹರಿ ಕುಮಾರ ಇವರು ಅರಬ್ಬಿ ಸಮುದ್ರದಲ್ಲಿ ಕಾರ್ಯನಿರತವಾಗಿದ್ದ ಭಾರತೀಯ ಯುದ್ಧನೌಕೆಯನ್ನು ಅಪಹರಣ ಮಾಡುವ ಸಮುದ್ರ ಲೂಟಿಕೋರರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿದ್ದಾರೆ.