ಮುಂಬಯಿ – ಹಾಜಿಮಲಂಗ್ ದರ್ಗಾ ತೆಗೆಯುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ಈ ರೀತಿ ಹೇಳಿಕೆ ಹೇಗೆ ನೀಡಲು ಸಾಧ್ಯ ? ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಪ್ರಕಾರ ಎಲ್ಲ ಧರ್ಮಗಳೂ ಸಮಾನವಾಗಿರಬೇಕು. ಮುಖ್ಯಮಂತ್ರಿಯಾಗಿದ್ದರೂ ಅವರು ಹೀಗೆ ಅರ್ಥಹೀನ ಹೇಳಿಕೆ ಹೇಗೆ ನೀಡುತ್ತಾರೆ ?, ಎಂದು ಅವಕಾಶವಾದಿ ಹೇಳಿಕೆಯನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಲಿಸಂ (ಎಂ.ಐ.ಎಂ.ಐ.) ಪಕ್ಷದ ಮುಖ್ಯಸ್ಥ ಸಂಸದ ಅಸದುದ್ದೀನ್ ಓವೈಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂದೆ ಜನವರಿ 2 ರಂದು ಶ್ರೀ ಮಚ್ಚಿಂದ್ರನಾಥನ ಸಮಾಧಿ ಸ್ಥಳವಾದ ಠಾಣೆ ಜಿಲ್ಲೆಯ ಕಲ್ಯಾಣ್‌ನ ಮಲಂಘಡನಲ್ಲಿ ನಡೆದ ಅಖಂಡ ಹರಿನಾಮ ಸಪ್ತಾಹದಲ್ಲಿ ಉಪಸ್ಥಿತರಿದ್ದರು. ಆ ವೇಳೆ ‘ಮಲಂಗಡ್ ಮುಕ್ತ ಆಗುವ ತನಕ ಸುಮ್ಮನಿರುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಒವೈಸಿ ಮೇಲಿನ ಮಾತುಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಬೋರ್ಡ್ ಮಲಂಘಡನ ಮಾಲೀಕತ್ವವನ್ನು ಹೊಂದಿದೆ.
ಅಸಾದುದ್ದೀನ್ ಓವೈಸಿ ಮಾತು ಮುಂದುವರೆಸಿ, ‘ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾದ ಏಕನಾಥ್ ಶಿಂದೆ ಹಾಜಿಮಲಾಂಗ್ ದರ್ಗಾ ತೆರವುಗೊಳಿಸಲು ಹೊರಟಿದ್ದಾರೆ’. 200 ರಿಂದ 300 ವರ್ಷಗಳಷ್ಟು ಹಳೆಯದಾದ ದರ್ಗಾದ ಬಗ್ಗೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಈ ಜನರ ವಿಶ್ವಾಸ ಹೆಚ್ಚಾಗಿದೆ. ಆ ಫಲಿತಾಂಶದ ನಂತರ ದೇಶದಲ್ಲಿ ಅವ್ಯವಸ್ಥೆ ಹರಡುವ ಪ್ರಯತ್ನ ನಡೆಯುತ್ತಿದೆ. ಪ್ರಚೋದನಕಾರಿ ಹೇಳಿಕೆಗಳು ಹೆಚ್ಚಿವೆ. ಜನರನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೇಂದ್ರ ಸಚಿವರು ನಿರಂತರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಮುಂದೆ ನೀತಿಯನ್ನು ಸ್ಪಷ್ಟಪಡಿಸಬೇಕು. ಇದು ಅವರ ಜವಾಬ್ದಾರಿಯಾಗಿದೆ.’ ಎಂದು ಹೇಳಿದರು. (ಹಿಂದೂಗಳ ನೀತಿಯನ್ನು ವಿವರಿಸಲು ಕೇಳುವ ಮೊದಲು ವಕ್ಫ್ ಬೋರ್ಡ್ ಮೂಲಕ ಹಿಂದೂ ಭೂಮಿಯನ್ನು ಕಬಳಿಸುವವರನ್ನು ಪ್ರಶ್ನಿಸುವ ಧೈರ್ಯ ಓವೈಸಿ ಏಕೆ ತೋರಿಸುತ್ತಿಲ್ಲ ? – ಸಂಪಾದಕರು)
ಎಲ್ಲಾ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕಲಾಗುವುದು ! – ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
ಎಲ್ಲಾ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕಲಾಗುವುದು. ಎಂದು ದೆವೇಂದ್ರ ಫಡ್ನವಿಸ್ ಇವರು ನಾಗ್ಪುರದಲ್ಲಿ ಹೇಳಿಕೆ ನೀಡಿದ್ದರು. ಅಲ್ಲಿ ಅನಧಿಕೃತ ಕಟ್ಟಡಗಳನ್ನು ಕೆಡವುತ್ತಿರುವ ಬಗ್ಗೆ ಪತ್ರಕರ್ತರು ಅವರನ್ನು ಕೇಳಿದಾಗ ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಸಂಪಾದಕರ ನಿಲುವು* ಇಷ್ಟು ವರ್ಷಗಳ ಕಾಲ ‘ಅಲ್ಪಸಂಖ್ಯಾತ’ರಾಗಿ ಸರಕಾರದಿಂದ ವಿಶೇಷ ರಿಯಾಯಿತಿಗಳನ್ನು ತೆಗೆದುಕೊಳ್ಳುವಾಗ ಓವೈಸಿಗೆ ಈ ತತ್ವ ಏಕೆ ನೆನಪಿಲ್ಲ ? ಓವೈಸಿಯ ಧರ್ಮ ಸಹೋದರರು ಹಿಂದೂ ಧರ್ಮದ ವಿರುದ್ಧ ವಾಗ್ದಾಳಿ ನಡೆಸಿದಾಗ, ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡುವಾಗ, ಲವ್ ಜಿಹಾದ್ ಮಾಡುವಾಗ, ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದಾಗ, ಓವೈಸಿ ಅವರಿಗೆ ಈ ತತ್ವವನ್ನು ಏಕೆ ತಿಳಿಸಲಿಲ್ಲ ? ಸರ್ವಧರ್ಮವನ್ನು ಅನುಕೂಲಕ್ಕೆ ತಕ್ಕಂತೆ ಬಳಸುವವರು ಹಿಂದೂಗಳು ಗುರುತಿಸಿದ್ದಾರೆ ! |