ಕೇಂದ್ರ ಸರಕಾರ ದೇವಸ್ಥಾನ ಸರಕಾರಿಕರಣದಿಂದ ಮುಕ್ತ ಮಾಡುವ ಸಿದ್ಧತೆಯಲ್ಲಿದ್ದು ಮಹಾರಾಷ್ಟ್ರ ಕೂಡ ಇದರ ಮೇಲೆ ಕ್ರಮ ಕೈಗೊಳ್ಳಬೇಕು ! – ಸುರೇಶ ಚೌಹಾಣಕೆ , ಮುಖ್ಯ ಸಂಪಾದಕರು, ‘ಸುದರ್ಶನ ನ್ಯೂಸ’ ವಾರ್ತಾ ವಾಹಿನಿ

ಮುಂಬಯಿ, ಜನವರಿ ೫ (ವಾರ್ತೆ.) – ತಮಿಳನಾಡಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದಿಂದ ‘ಕೇಂದ್ರ ಸರಕಾರ ಕೂಡ ದೇವಸ್ಥಾನ ಸರಕಾರಿಕರಣ ಮುಕ್ತಗೊಳಿಸುವುದರ ಸಿದ್ಧತೆಯಲ್ಲಿದೆ’, ಇದು ಗಮನಕ್ಕೆ ಬರುತ್ತದೆ. ಅವರು ಆದಷ್ಟು ಬೇಗನೆ ಹಾಗೆ ಮಾಡಬೇಕು ಮತ್ತು ಮಹಾರಾಷ್ಟ್ರ ಸರಕಾರ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ‘ಸುದರ್ಶನ ನ್ಯೂಸ್’ ವಾರ್ತಾ ವಾಹಿನಿಯ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆ ಇವರು ಜನವರಿ ೫ ರಂದು ದೈನಿಕ ಸನಾತನ ಪ್ರಭಾತದ ಪ್ರತಿನಿಧಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು.

ಶ್ರೀ ಸುರೇಶ ಚೌವ್ಹಾಣಕೆ ಮಾತು ಮುಂದುವರೆಸಿ, ‘ಯಾರಿಗೆ ದೇವರ ಮೇಲೆ ಶ್ರದ್ಧೆ ಇಲ್ಲ, ಅಂತಹ ನಾಸ್ತಿಕ ಜನರು ದೇವಸ್ಥಾನದಲ್ಲಿ ಅವ್ಯವಸ್ಥೆಯ ಆಡಳಿತ, ಭ್ರಷ್ಟಾಚಾರ ಮತ್ತು ದೇವಸ್ಥಾನ ನಿಧಿಯ ದುರುಪಯೋಗ ಮಾಡುತ್ತಾರೆ. ಇದಕ್ಕೆ ದೇವಸ್ಥಾನ ಸರಕಾರಿಕರಣದ ವ್ಯವಸ್ಥೆಯೇ ಕಾರಣವಾಗುತ್ತದೆ. ಆದ್ದರಿಂದ ಮಹಾರಾಷ್ಟ್ರ ಸರಕಾರವು ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಗೊಳಿಸಬೇಕು. ದೇವಸ್ಥಾನ ಸರಕಾರಿಕರಣದ ವಿರುದ್ಧ ‘ಸುದರ್ಶನ’ ವಾಹಿನಿ ಕಳೆದ ೨೦ ವರ್ಷದಿಂದ ಧ್ವನಿ ಎತ್ತುತ್ತಿದೆ. ದೇವಸ್ಥಾನದ ಸರಕಾರಿಕರಣದಿಂದ ದೇವಸ್ಥಾನದ ನಿಧಿ ಅಧಾರ್ಮಿಕ ಕಾರ್ಯಗಳಿಗಾಗಿ ಉಪಯೋಗಿಸಲಾಗುತ್ತಿದೆ. ಪ್ರತಿವರ್ಷ ೧ ಲಕ್ಷ ೬೦ ಸಾವಿರ ಕೋಟಿ ರೂಪಾಯಿ ಎಂದರೆ ಒಂದು ತಿಂಗಳಲ್ಲಿ ಭಾರತ ಸರಕಾರದ ವಸ್ತು ಮತ್ತು ಸೇವಾ ತೆರಿಗೆಕ್ಕಿಂತ (ಜಿಎಸ್‌ಟಿ) ಹೆಚ್ಚಿನ ಹಣ ದೇವಸ್ಥಾನಕ್ಕೆ ಪ್ರತಿ ವರ್ಷ ಬರುತ್ತದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರವು ಕ್ರಮ ಕೈಗೊಳ್ಳಬೇಕು ಇದಕ್ಕಾಗಿ ಹಿಂದೂಗಳು ಬೆಂಬೇತ್ತಬೇಕು.” ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತ ಇರುವ ಶರದ ಪವಾರ ಇವರು ಅವ್ಹಾಡ ಇವರ ಹಿಂದೂದ್ವೇಷಿ ಹೇಳಿಕೆಯ ಬಗ್ಗೆ ಆಕ್ಷೇಪ ಏಕೆ ವ್ಯಕ್ತಪಡಿಸಲಿಲ್ಲ ? – ಚೌಹಾಣಕೆ

‘ಪ್ರಭು ಶ್ರೀರಾಮ ಸಸ್ಯಹಾರಿ ಅಲ್ಲದೆ ಮಾಂಸಾಹಾರಿ ಆಗಿದ್ದರು’, ಎಂದು ಜಿತೇಂದ್ರ ಆವ್ಹಾಡ ಇವರು ಹೇಳಿಕೆ ಗಂಭೀರ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಅಪರಾಧಿಗಳಿಗೆ ಮಹಾರಾಷ್ಟ್ರ ಸರಕಾರದಿಂದ ತಕ್ಷಣ ಬಂಧಿಸಿ ಕಠೋರ ಶಿಕ್ಷೆಯೇ ನೀಡಬೇಕು. ಹಣ್ಣುಗಳು, ಗೆಡ್ಡೆಗೆಣಸುಗಳು ಸೇವಿಸುವ ಶ್ರೀರಾಮನನ್ನು ನಾವು ಅವತಾರ ಎಂದು ನಂಬುತ್ತೇವೆ, ಹಾಗೆ ದೇವರೆಂದು ನಂಬುತ್ತೇವೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ಭಾರತದ ಹೊರಗೆ ಕೂಡ ಶ್ರೀ ರಾಮನ ಕೋಟ್ಯಾಂತರ ಭಕ್ತರಿದ್ದಾರೆ. ಆವ್ಹಾಡ ಇವರಿಂದ ಆ ಭಕ್ತರ ಧರ್ಮಿಕ ಭಾವನೆಗೆ ನೋವು ಉಂಟಾಗಿದೆ. ಜಿತೇಂದ್ರ ಆವ್ಹಾಡ ಇವರು ಈ ರೀತಿಯ ಹೇಳಿಕೆ ನೀಡಿದಾಗ ಶರದ ಪವಾರ ಇವರು ಕೂಡ ಅಲ್ಲಿ ಉಪಸ್ಥಿತರಿದ್ದರು. ಅವರು ಆ ಸಮಯದಲ್ಲಿ ಮತ್ತು ಇಲ್ಲಿಯವರೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ? ಅವರ ಪಕ್ಷವು ಅವ್ಹಾಡ ಇವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ? ಪ್ರಭು ಶ್ರೀರಾಮಚಂದ್ರನ ಅವಾಮಾನ ಆಗುತ್ತಿರುವಾಗ ಶರದ ಪವಾರ ಇವರ ಮೌನವಹಿಸುವುದು ಕೂಡ ಪಾಪವೇ ಆಗಿದೆ. ಆವ್ಹಾಡ ಇವರನ್ನು ಬೆಂಬೆಲಿಸುವವರೆಲ್ಲರೂ ಅಪರಾಧಿಗಳೇ ಆಗಿದ್ದಾರೆ. ಅವರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು, ಎಂದು ಈ ಸಮಯದಲ್ಲಿ ಸುರೇಶ ಚವ್ಹಾಣಕೆ ಇವರು ಒತ್ತಾಯಿಸಿದರು.