ಯಾವುದೇ ಪ್ರಾಣಹಾನಿ ಆಗಿಲ್ಲ !
ಪ್ಯಾಂಗಯಾಂಗ್ (ಉತ್ತರಕೊರಿಯಾ) – ಉತ್ತರಕೊರಿಯಾವು ದಕ್ಷಿಣಕೊರಿಯಾದ ಮೇಲೆ ದಾಳಿ ಮಾಡುತ್ತಾ ೨೦೦ ಬಾಂಬ್‌ಗಳನ್ನು ಹಾಕಿದೆ. ಈ ಬಾಂಬ್‌ಗಳು ನೇರವಾಗಿ ದಕ್ಷಿಣಕೊರಿಯಾದ ಗಡಿಯೊಳಗೆ ಬಿದ್ದಿಲ್ಲ. ಅವು ಅದರ ದಕ್ಷಿಣದ ಕಡೆಯ ಯೋಗಪೇಯೋಂಗ್ ದ್ವೀಪದ ಬಳಿ ಬಿದ್ದಿದೆ. ಆದ್ದರಿಂದ, ದ್ವೀಪದಲ್ಲಿ ವಾಸಿಸುವ ೨೦೦೦ ಜನರನ್ನು ಸ್ಥಳಾಂತರಿಸುವಂತೆ ದಕ್ಷಿಣಕೊರಿಯಾ ಹೇಳಿದೆ. ದಕ್ಷಿಣ ಕೊರಿಯಾದ ಸೈನ್ಯವು ಈ ದಾಳಿಯ ಬಗ್ಗೆ ಮಾಹಿತಿ ನೀಡಿದೆ. ದಕ್ಷಿಣ ಕೊರಿಯಾ ಈ ದಾಳಿಯನ್ನು ಖಂಡಿಸಿ, ಇದೊಂದು ‘ಪ್ರಚೋದನಾಕಾರಿ ಕೃತ್ಯ‘ ಎಂದು ಹೇಳಿದೆ.
ಡಿಸೆಂಬರ್ ೨೦೨೨ ರಲ್ಲಿ, ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಗಡಿಗೆ ತಾಗಿರುವ ಸಮುದ್ರದಲ್ಲಿ ಬಾಂಬ್ ಹಾಕಿತ್ತು. ೨೦೧೦ ರಲ್ಲಿ ಉತ್ತರ ಕೊರಿಯಾ ಯೋನಪೆಯೋಂಗ್ ದ್ವೀಪದ ಮೇಲೆ ದಾಳಿ ಮಾಡಿ ೪ ಜನರ ಹತ್ಯೆ ಮಾಡಿತ್ತು. ಇತ್ತಿಚೆಗೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಮಧ್ಯೆ ಯುದ್ಧದ ಒತ್ತಡ ಕಡಿಮೆ ಮಾಡಲು ಒಪ್ಪಂದವಾಗಿತ್ತು; ಆದರೆ ಪ್ರಸ್ತುತ ದಾಳಿಯಿಂದಾಗಿ ಈ ಒಪ್ಪಂದಗಳನ್ನು ರದ್ದುಗೊಳಿಸಲಾಗಿದೆ.
North Korea fires artillery at sea against South military ‘gangsters’ https://t.co/zhfns6VOEE pic.twitter.com/9sKSU4Rfjc
— Reuters World (@ReutersWorld) January 5, 2024