‘ಫ್ಯುಯೆಲ್ ಸೆಲ್’ ತಂತ್ರಜ್ಞಾನದಿಂದ ಬಾಹ್ಯಾಕಾಶದಲ್ಲಿ ‘PSLV-C58’ ನಲ್ಲಿ ನಡೆಸಿದ ಯಶಸ್ವಿ ಪರೀಕ್ಷಣೆ!
ಬೆಂಗಳೂರು – ಇತ್ತೀಚೆಗೆ ಅಂದರೆ ಜನವರಿ 1 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ಇಸ್ರೋ, ಪಿಎಸ್‌ಎಲ್‌ವಿ-ಸಿ 58 ಅನ್ನು ಬಾಹ್ಯಾಕಾಶ ಉಡಾವಣೆ ಮಾಡಿತು. ಅದರಲ್ಲಿ ನಡೆಸಿದ ಪರೀಕ್ಷಣೆಯಲ್ಲಿ ಯಾವುದೇ ಮಾಲಿನ್ಯವಿಲ್ಲದೆ ಇಂಧನವನ್ನು ಉತ್ಪಾದಿಸಲು ಇಸ್ರೋಗೆ ಸಾಧ್ಯವಾಯಿತು. ಇದನ್ನೇ ‘ಫ್ಯುಯಲ್ ಸೆಲ್’ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ, ಇಂಧನವನ್ನು ಉತ್ಪಾದಿಸುವ ಈ ಪ್ರಕ್ರಿಯೆಯಲ್ಲಿ ಶುದ್ಧ ಕುಡಿಯುವ ನೀರು ಉತ್ಪಾದನೆಯಾಗುತ್ತದೆ. ಅದರ ಉಪಯೋಗ ಬಾಹ್ಯಾಕಾಶಕ್ಕೆ ಹೋಗುವ ಮಾನವನಿಗೆ ಆಗಲಿದೆ. ಇಸ್ರೋಗೆ ಇದು ದೊಡ್ಡ ಯಶಸ್ಸು ಲಭಿಸಿದೆ. ಇದರ ಲಾಭವು ಭಾರತಕ್ಕೆ ಮಾನವಸಹಿತ ಬಾಹ್ಯಾಕಾಶ ಅಭಿಯಾನವಾಗಿರುವ `ಗಗನಯಾನ’ ಕಾರ್ಯಕ್ರಮಕ್ಕೆ ಆಗಲಿದೆ.
ಇಸ್ರೋ ಬಾಹ್ಯಾಕಾಶದಲ್ಲಿ 100 ವ್ಯಾಟ್ ಶ್ರೇಣಿಯ ‘ಪಾಲಿಮರ್ ಎಲೆಕ್ಟ್ರೋಲೈಟ್ ಮೆಂಬರೇನ್ ಫ್ಯೂಯಲ್ ಸೆಲ್’ ಈ ತಂತ್ರಜ್ಞಾನವನ್ನು ಆಧರಿಸಿರುವ ‘ಪವರ್ ಸಿಸ್ಟಮ್’ (? ) ಈ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಈ ಪರೀಕ್ಷಣೆಯ ಸಮಯದಲ್ಲಿ, ‘ಹೈಡ್ರೋಜನ್’ ಮತ್ತು ‘ಆಮ್ಲಜನಕ’ ಇದನ್ನು ವಾಯುವಿನ ಸಹಾಯದಿಂದ ಅಧಿಕ ಒತ್ತಡವಿರುವ ಒಂದು ಪಾತ್ರೆಯಲ್ಲಿ 180 ವ್ಯಾಟ್ ಶಕ್ತಿಯು ಉತ್ಪಾದಿಸಲಾಯಿತು. ಇದರಿಂದ ಶುದ್ಧ ಕುಡಿಯುವ ನೀರು ದೊರಕಿತು ಮತ್ತು ಯಾವುದೇ ಮಾಲಿನ್ಯವಾಗಲಿಲ್ಲ. ‘ಫ್ಯುಯೆಲ್ ಸೆಲ್’ ತಂತ್ರಜ್ಞಾನವು ಒಂದು ವಿದ್ಯುತ್ ಜನರೇಟರ್ ಆಗಿದ್ದು, ಇದು ‘ಎಲೆಕ್ಟ್ರೋಕೆಮಿಕಲ್’ (ವಿದ್ಯುತ್ ರಾಸಾಯನಿಕ ಪ್ರಣಾಲಿ) ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.
ಈ ಶಕ್ತಿಯನ್ನು ವಾಹನಗಳಲ್ಲಿಯೂ ಉಪಯೋಗಿಸಬಹುದಾಗಿದೆ!
‘ಫ್ಯೂಯಲ್ ಸೆಲ್’ ತಂತ್ರಜ್ಞಾನದ ಪ್ರಯೋಜನಗಳ ಬಗ್ಗೆ ಯೋಚಿಸಿದಾಗ, ಈಗ ವಾಹನಗಳಲ್ಲಿಯೂ ಬ್ಯಾಟರಿಯ ಸ್ಥಳದಲ್ಲಿ ಈ ತಂತ್ರಜ್ಞಾನದ ಉಪಯೋಗಿಸಲು ವಿಚಾರ ಮಾಡಲಾಗುತ್ತಿದೆ. ಇದರಿಂದ ಕೇವಲ ಸಾಂಪ್ರದಾಯಿಕ ಇಂಜಿನಗಳು ಆದಷ್ಟು ಬೇಗನೆ ರೀಚಾರ್ಜ್ ಮಾಡಬಹುದು ಎಂದಾಗುವುದಿಲ್ಲ, ಆದರೆ ಇದರಿಂದ ಇಂಧನ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಆಗುವ ಮಾಲಿನ್ಯದ ಮೇಲೆ ನಿಯಂತ್ರಣವನ್ನು ಹೊಂದಲು ಸಾಧ್ಯವಾಗುತ್ತದೆ.
Significant Milestone in Space Exploration for #ISRO : Succeeds in generating Pollution-free energy in space !
— Successful testing of ‘Fuel Cell’ technology through PSLV – C58 !
DETAILS :
Bengaluru (Karnataka) – Just a few days ago, on January 1, the Indian Space Research… pic.twitter.com/DnnZTi2QNc— Sanatan Prabhat (@SanatanPrabhat) January 5, 2024