ಈ ವರ್ಷ, ಗೋವಾ ಅಥವಾ ಮಸುರಿ ಅಲ್ಲ, ಅಯೋಧ್ಯೆ ಮತ್ತು ವಾರಣಾಸಿಯಲ್ಲಿ ಅಭೂತಪೂರ್ವ ಜನಸಮೂಹ !

  • ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಮೊದಲು-ನಂತರ ಅಯೋಧ್ಯೆ ನಗರಿಯಲ್ಲಿ ೫೦ ಸಾವಿರ ಕೋಟಿ ರೂಪಾಯಿಯ ವಹಿವಾಟು ನಡೆಯುವ ಸಾಧ್ಯತೆ !

  • ಕೇಂದ್ರ ಸರಕಾರದ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಬೃಹತ್ ಪ್ರತಿಕ್ರಿಯೆ !

ನವ ದೆಹಲಿ – ಶ್ರೀರಾಮಜನ್ಮಭೂಮಿಯಲ್ಲಿ ಕಟ್ಟಿರುವ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವುದಕ್ಕಾಗಿ ಭಾರತಾದ್ಯಂತದ ಹಿಂದೂಗಳು ಕಾತೂರರಾಗಿದ್ದಾರೆ. ಹಿಂದೂಗಳ ಐದೂವರೆ ವರ್ಷದ ಸುಧೀರ್ಘ ಹೋರಾಟದಿಂದ ದೊರೆತಿರುವ ಈ ಯಶಸ್ಸನ್ನು ಕಣ್ಣು ತುಂಬಾ ನೋಡುವುದಕ್ಕಾಗಿ ಹಿಂದೂಗಳು ಕಾತೂರರಾಗಿದ್ದಾರೆ. ಅಯೋಧ್ಯೆ ಸಹಿತ ವಾರಾಣಸಿ, ಉಜ್ಜೈನ್ ಮತ್ತು ಮಥೂರಾ ಈ ತೀರ್ಥಕ್ಷೇತ್ರಗಳಿಗೂ ಕೂಡ ಹಿಂದುಗಳು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ. ಕೆಲವರು, ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನಡೆಯುತ್ತಿರುವ ಪ್ರಯತ್ನವೇ ಇದರ ಹಿಂದಿನ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಈಗ ಗೋವಾ ಅಥವಾ ಮಸೂರಿಗೆ ಹೋಗದೆ, ಅಯೋಧ್ಯೆ ಮತ್ತು ವಾರಾಣಸಿಗೆ ಕೋಟ್ಯಾಂತರ ಜನರು ಹೋಗುತ್ತಿದ್ದಾರೆ. ಅಯೋಧ್ಯೆಯಲ್ಲಿನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಸಮಯದಲ್ಲಿ ಸುಮಾರು ೫೦ ಸಾವಿರ ಕೋಟಿ ರೂಪಾಯಿಯ ವಹಿವಾಟು ನಡೆಯುವ ಸಾಧ್ಯತೆ ದಟ್ಟವಾಗಿದೆ.

೨೦೨೪ ಕ್ಕಾಗಿ ಅಯೋಧ್ಯೆ ಎಲ್ಲಕ್ಕಿಂತ ದೊಡ್ಡ ಪ್ರವಾಸಿ ತಾಣವಾಗುವುದು !

ಇಂದು ಸಂಸ್ಕೃತಿಕ ರಾಷ್ಟ್ರನಿಷ್ಠೆಯ ಗಾಳಿ ಬೀಸುತ್ತಿದ್ದು ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವುದಕ್ಕಾಗಿ ಹಿಂದುಗಳು ಕಾತೂರರಾಗಿದ್ದಾರೆ. ಇಂತಹ ಸಮಯದಲ್ಲಿ ಹಿಂದುಗಳು ಕೇವಲ ಪ್ರವಾಸಕ್ಕೆ ಎಂದು ಅಲ್ಲದೆ ಹಿಂದೂ ಧರ್ಮದ ಮಹಾತ್ಮೆ ತಿಳಿಯಬೇಕು, ಇದಕ್ಕಾಗಿ ಕೂಡ ಸರಕಾರ ಪ್ರಯತ್ನ ಮಾಡಬೇಕು.

‘ಓಯೋ’ ಈ ಹೋಟೆಲ್ ಸಮೂಹದ ಸಂಸ್ಥಾಪಕ ರಿತೇಶ ಅಗ್ರವಾಲ ಇವರು ಇದರ ಬಗ್ಗೆ ಮಾಹಿತಿ ನೀಡಿದರು. ಅವರು, ೨೦೨೩ ರ ಕೊನೆಯ ದಿನದಂದು ಶೇಕಡಾ ೮೦ ರಷ್ಟು ಜನರು ಅಯೋಧ್ಯೆಯಲ್ಲಿ ಇರಲು ಮಾಹಿತಿ ಹುಡುಕ್ಕುತ್ತಿದ್ದರು. ಅಯೋಧ್ಯೆ ೨೦೨೪ ಕ್ಕೆ ಎಲ್ಲಕಿಂತ ದೊಡ್ಡ ಪ್ರವಾಸಿ ತಾಣವಾಗುವುದು. ಭಾರತದಲ್ಲಿನ ತೀರ್ಥಕ್ಷೇತ್ರಗಳು ಈಗ ಜನರ ಅಚ್ಚುಮೆಚ್ಚಿನ ಸ್ಥಳಗಳಾಗಿವೆ. ಮುಂದಿನ ೫ ವರ್ಷಗಳಾದರೂ ಅಧ್ಯಾತ್ಮದ ಪ್ರವಾಸೋದ್ಯಮ ಇದು ಪ್ರವಾಸೋದ್ಯಮದ ‘ನಾಯಕ’ನೆಂದು ಪರಿಗಣಿಸಲಾಗುವುದು. ೨೦೨೪ ರ ಮೊದಲ ದಿನ ಬಾಬಾ ವಿಶ್ವನಾಥನ ದರ್ಶನಕ್ಕೆ ೮ ಲಕ್ಷ ಜನರು ವಾರಾಣಸಿಯಲ್ಲಿ ಉಪಸ್ಥಿತ ಇದ್ದರು. ಇದೆ ಸಮಯದಲ್ಲಿ ೪ ಲಕ್ಷ ಹಿಂದೂಗಳು ಗಂಗಾನದಿಯ ವಿವಿಧ ಘಾಟಗಳಲ್ಲ ಸ್ನಾನ ಮಾಡಿದರು. ದೇವಸ್ಥಾನ ಸಮಿತಿಯು, ಇಲ್ಲಿಯ ತನಕ ಇರುವ ಎಲ್ಲಾ ದಾಖಲೆ ಹಿಂದಿಕ್ಕಿದೆ. ಕಳೆದ ವರ್ಷ ಶ್ರಾವಣ ಮಾಸದಲ್ಲಿ ೧.೫೭ ಕೋಟಿ ಭಕ್ತರು ವಾರಾಣಸಿಗೆ ಭೇಟಿ ನೀಡಿದ್ದರು. ಶ್ರೀಕೃಷ್ಣ ಜನ್ಮಭೂಮಿ ಆಗಿರುವ ಮಥೂರೆಯಲ್ಲಿ ೩ ದಿನದಲ್ಲಿ ೧೮ ಲಕ್ಷ ಜನರು ದರ್ಶನ ಪಡೆದರು. ಧಾರ್ಮಿಕ ಪ್ರವಾಸೋದ್ಯಮದಿಂದ ಪರಿಸರದಲ್ಲಿನ ಬಡ ಜನರಿಗಾಗಿ ಕೂಡ ಉದ್ಯೋಗದ ಅನೇಕ ಅವಕಾಶಗಳು ಉಪಲಬ್ಧವಾಗಿವೆ.

ಸಂಪಾದಕೀಯ ನಿಲುವು

ಹಿಂದೂ ಸಮಾಜ ಧಾರ್ಮಿಕವಾಗಿದೆ. ಮಧ್ಯಂತರದ ಕಾಲದಲ್ಲಿ ವಿವಿಧ ಕಾರಣಗಳಿಂದ ಅವರಲ್ಲಿನ ಧಾರ್ಮಿಕ ವೃತ್ತಿ ಕಡಿಮೆಯಾಗಿತ್ತು. ಈಗ ಹಿಂದುಗಳಲ್ಲಿ ಧಾರ್ಮಿಕ ವೃತ್ತಿ ಹೆಚ್ಚುತ್ತಿರುವುದರ ಇದು ಉದಾಹರಣೆಯಾಗಿದೆ. ‘ಧರ್ಮ ಇದು ಅಫಿಮಿನ ಗುಳಿಗೆ ಇದ್ದ ಹಾಗೆ’, ಎಂದು ಹೇಳುವವರಿಗೆ ಇದು ತಪರಾಕಿ !