ಭಯೋತ್ಪಾದಕರು ಸಿರಿಯಾದಲ್ಲಿರುವ ಸಂಸ್ಥೆಗೆ ಹಣ ಪೂರೈಸಿರುವುದು ಬಹಿರಂಗ !

ಭಯೋತ್ಪಾದಕರು ‘ಪಡಘಾ’ ಗ್ರಾಮವನ್ನು ‘ಭಾರತದ ಗ್ರೇಟರ್ ಸಿರಿಯಾ’ ಎಂದು ಉಲ್ಲೇಖ !

ಮಹಾರಾಷ್ಟ್ರದಲ್ಲಿ `ಐಸಿಸ್’ ಭಯೋತ್ಪಾದಕ `ಮಾಡ್ಯುಲ್’ ಕುರಿತು ಆರೋಪಪತ್ರ ಸಲ್ಲಿಸಿದ ಪ್ರಕರಣ

(ಮಾಡ್ಯೂಲ್ ಎಂದರೆ ಕಾರ್ಯವಿಧಾನ)

ಮುಂಬಯಿ – ಭಯೋತ್ಪಾದಕ ಶರ್ಜೀಲ್ ಶೇಖ್ ಇವನು ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು, ಸಿರಿಯಾದಲ್ಲಿರುವ ‘ದಿ ಮರ್ಸಿಫುಲ್ ಹ್ಯಾಂಡ್ಸ್’ ಸಂಸ್ಥೆಗೆ 176 (ಸಿರಿಯನ್ ಪೌಂಡ್) (ಭಾರತೀಯ ಹಣ 14 ಸಾವಿರ 600 ರೂಪಾಯಿ) ಕಳುಹಿಸಿದ್ದನು, ಜೊತೆಗೆ ಜುಲ್ಫಿಕರ್ ಅಲಿ ಬಡೋದಾವಾಲಾ ಇವನ ದೃಷ್ಟಿಯಲ್ಲಿ ಪಡಘಾ ಗ್ರಾಮವು ಭಾರತದ ‘ಅಲ್ ಶಾಮ್’ (ಗ್ರೇಟರ್ ಸಿರಿಯಾ) ಆಗಿತ್ತು. ಇಂತಹ ಅನೇಕ ಆಘಾತಕಾರಿ ವಿಷಯಗಳು ರಾಷ್ಟ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. ಮಹಾರಾಷ್ಟ್ರದಲ್ಲಿ `ಐಸಿಸ್‌’ನ ಭಯೋತ್ಪಾದಕನ `ಮಾಡ್ಯುಲ್’ ವಿಷಯವನ್ನು ಆರೋಪಪತ್ರದಲ್ಲಿ ದಾಖಲಿಸಲಾಗಿತ್ತು.

1. ತನಿಖಾ ದಳದವರಿಗೆ ಭಯೋತ್ಪಾದಕ ಶರ್ಜಿಲ್ ಶೇಖ್‌ನ ಮೊಬೈಲನಲ್ಲಿ ಅನೇಕ ವಿಡಿಯೋಗಳು ಪತ್ತೆಯಾಗಿವೆ. ಇದರಿಂದ ಅವನು ಭಯೋತ್ಪಾದಕ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಸಾಕಷ್ಟು ಪುರಾವೆಗಳು ದೊರೆತಿವೆ.

2. ಈ ವೀಡಿಯೊಗಳಲ್ಲಿ ಇಸ್ಲಾಮಿಕ್ ಸ್ಟೇಟನ ಧ್ವಜ ಕಂಡು ಬರುತ್ತಿದ್ದು, ಗುಂಡಿನ ದಾಳಿ ನಡೆಸುವುದು, ಸಿರಿಯಾದಲ್ಲಿ ಮಾಸ್ಕ ಹಾಕಿ ತಿರುಗಾಡುವುದು, ಖಲಿಫಾದ ಭಾಷಣಗಳು, ಪಾಕಿಸ್ತಾನ ಮತ್ತು ಸಿರಿಯಾದಲ್ಲಿನ ಭಾಷಣಗಳು ಪತ್ತೆಯಾಗಿವೆ. ಆರೋಪಿ ದೊಡ್ಡ ಪ್ರಮಾಣದಲ್ಲಿ ‘ವಿಪಿಎನ್ ನೆಟ್‌ವರ್ಕ್’ ಅನ್ನು ಬಳಸುತ್ತಿದ್ದನು. ಐಸಿಸ್ ಭಯೋತ್ಪಾದಕರಿಂದ ವ್ಯಕ್ತಿಯೊಬ್ಬನ ಕತ್ತು ಸೀಳಿರುವ ವಿಡಿಯೋ ಕೂಡ ಸಿಕ್ಕಿದೆ.

3. ‘ವಾಯ್ಸ್ ಆಫ್ ಹಿಂದ’ನ ‘ಪ್ರಚಾರ ಪತ್ರಿಕೆ’ ಮತ್ತು ಇತರ ಜಿಹಾದಿ ಕಾಗದಪತ್ರಗಳು ಮೊಬೈಲ್ ನಲ್ಲಿ ಸಿಕ್ಕಿವೆ.

4. ಇದರೊಂದಿಗೆ ವಿದೇಶದಲ್ಲಾಗುವ ಮುಸ್ಲಿಮರ ಹತ್ಯೆ, ಖಿಲಾಫತ್ ಮತ್ತು ಇತರ ಸಂಘಟನೆಗಳ ಪತ್ರಿಕೆ ಇಂತಹ ದಾಖಲೆಗಳೂ ಸಿಕ್ಕಿವೆ. ಆರೋಪಿ ತಬಿಶ ಸಿದ್ದಿಕಿ ಮತ್ತು ಬರೋದಾವಾಲಾನು ‘ಬಯಾಥ’ (ಸಂಘಟನೆಗೆ ಏಕನಿಷ್ಠರಾಗಿರಲು ತೆಗೆದುಕೊಳ್ಳುವ ಪ್ರತಿಜ್ಞೆ) ತೆಗೆದುಕೊಂಡಿದ್ದ.