ದೇಶದ ಪ್ರತಿಯೊಂದು ದೇವಸ್ಥಾನದಲ್ಲಿ ಜನವರಿ ೧೪ ರಿಂದ ೨೨ ಈ ಸಮಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ! – ಪ್ರಧಾನಿ ಮೋದಿ

  • ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ದೇಶವಾಸಿಯರಿಗೆ ಕರೆ !

  • ಅಯೋಧ್ಯಾನಗರ ಪ್ರತಿದಿನ ಸ್ವಚ್ಛವಾಗಿ ಇಡುವ ಜವಾಬ್ದಾರಿ ಅಯ್ಯೋಧ್ಯಾವಾಸಿಯವರಲ್ಲಿದೆ !

ನವ ದೆಹಲಿ – ಪ್ರಧಾನಮಂತ್ರಿ ಮೋದಿ ಇವರು ಅಯೋಧ್ಯಾನಗರ ಸ್ವಚ್ಛವಾಗಿಡಲು ‘ಇನ್ಸ್ಟಾಗ್ರಾಮ್’ನಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿ, ಇದರಲ್ಲಿ ಅವರು ‘ದೇಶಾದ್ಯಂತ ಇರುವ ನಾಗರಿಕರಿಗೆ, ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಯ ಒಂದು ವಾರ ಮೊದಲನಿಂದಲೆ, ಎಂದರೆ ಮಕರ ಸಂಕ್ರಾಂತಿಯಿಂದ ದೇಶದಲ್ಲಿನ ಚಿಕ್ಕ ದೊಡ್ಡ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನ ನಡೆಸಬೇಕು ಎಂದು ನನ್ನ ಪ್ರಾರ್ಥನೆಯಾಗಿದೆ. ಈ ಅಭಿಯಾನ ಜನವರಿ ೧೪ ರಿಂದ ೨೨ ವರೆಗೆ ನಡೆಯಬೇಕೆಂದು ಕರೆ ನೀಡಿದ್ದಾರೆ.

ಪ್ರಭು ಶ್ರೀರಾಮನ ಆಗಮನ ಆಗುವಾಗ ಒಂದೇ ಒಂದು ದೇವಸ್ಥಾನ ಮತ್ತು ತೀರ್ಥಕ್ಷೇತ್ರ ಕೂಡ ಅಸ್ವಚ್ಛ ಇರಬಾರದು !

ಪ್ರಧಾನಮಂತ್ರಿ ಅಯೋಧ್ಯೆಯಲ್ಲಿನ ನಾಗರಿಕರಿಗೆ, ಈಗ ದೇಶ-ವಿದೇಶಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುತ್ತಾರೆ. ಆದ್ದರಿಂದ ಅಯೋದ್ಯಾವಾಸಿಯರು, ರಾಮನಗರ ದೇಶದಲ್ಲಿನ ಸ್ವಚ್ಛ ನಗರ ಮಾಡುವೆವು ಎಂದು ಸಂಕಲ್ಪ ಮಾಡಬೇಕು. ಸ್ವಚ್ಛ ಅಯೋಧ್ಯೆ ಮಾಡುವ ಜವಾಬ್ದಾರಿ ಅಯೋದ್ಯಾವಾಸಿಯರ ಮೇಲೆ ಇದೆ. ಪ್ರಭು ಶ್ರೀರಾಮ ಎಲ್ಲರವರಾಗಿದ್ದಾರೆ. ಭಗವಾನ್ ಶ್ರೀ ರಾಮನ ಆಗಮನ ಆಗುವಾಗ ನಮ್ಮ ಒಂದೇ ಒಂದು ದೇವಸ್ಥಾನ ಮತ್ತು ತೀರ್ಥಕ್ಷೇತ್ರ ಅಸ್ವಚ್ಛವಾಗಿ ಇರಬಾರದು ಎಂದು ಹೇಳಿದರು.