ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಸರ್ವೋಚ್ಛ ನ್ಯಾಯಾಲಯದಿಂದ ನಿರಾಕರಣೆ !

ನವ ದೆಹಲಿ – ಸರ್ವೋಚ್ಛ ನ್ಯಾಯಾಲಯವು ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ರಚಿಸಲು ನಿರಾಕರಿಸಿದೆ. ಅಲ್ಲದೆ ಭಾರತೀಯ ಷೇರು ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾದ ‘ಸೆಬಿ‘ಗೆ (ಸೆಕ್ಯುರಿಟೀಸ್ ಅಂಡ್ ಎಕ್ಸಛೇಂಜ್ ಬೋರ್ಡ ಆಫ್ ಇಂಡಿಯಾ) ಈ ಬಗ್ಗೆ ತನಿಖೆ ನಡೆಸುವಂತೆ ಕೇಳಲಾಗಿದೆ. ಸೆಬಿಯ ತನಿಖೆಯಲ್ಲಿ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

೧. ನ್ಯಾಯಾಲಯವು, ‘ಸೆಬಿ’ಯು ೨೪ ಪ್ರಕರಣಗಳಲ್ಲಿ ೨೨ ಪ್ರಕರಣಗಳನ್ನು ತನಿಖೆ ಮಾಡಿದೆ. ಉಳಿದ ೨ ಪ್ರಕರಣಗಳ ತನಿಖೆಯನ್ನು ೨ ತಿಂಗಳ ಒಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದೇವೆ. ‘ಸೆಬಿ’ ಸಮರ್ಥ ಪ್ರಾಧಿಕರಣವಾಗಿದೆ. ‘ಸೆಬಿ‘ಯು ವಿಚಾರಣೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದಿದೆ.

೨. ಸರ್ವೋಚ್ಚ ನ್ಯಾಯಾಲಯವು ಭಾರತ ಸರಕಾರ ಹಾಗೂ ಸೆಬಿಗೆ ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡಲು ತಜ್ಞರ ಸಮಿತಿಯ ಶಿಫಾರಸುಗಳ ಪ್ರಕಾರ ಕಾರ್ಯ ನಿರ್ವಹಿಸಲು ಹೇಳಿದೆ. ನ್ಯಾಯಾಲಯವು ‘ಸೆಬಿ’ಗೆ ಪ್ರಸ್ತುತ ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಲು ತಜ್ಞ ಸಮಿತಿಯ ಸೂಚನೆಯಂತೆ ಕೆಲಸ ಮಾಡಲು ಹೇಳಿದೆ.

ಸತ್ಯಮೇವ ಜಯತೇ ! – ಗೌತಮ ಅದಾನಿ

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ ಅದಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ‘ಎಕ್ಸ್‘ ಪೋಸ್ಟ್ ನಲ್ಲಿ, ಸತ್ಯಕ್ಕೆ ಜಯ ಸಿಕ್ಕಿದೆ. ಸತ್ಯಮೇವ ಜಯತೇ, ನಮ್ಮ ಬೆಂಬಲಕ್ಕೆ ನಿಂತವರಿಗೆ ನಾನು ಅಭಾರಿಯಾಗಿದ್ದೇನೆ. ಭಾರತದ ಅಭಿವೃದ್ದಿ ಪಥಕ್ಕೆ ನಮ್ಮ ವಿನಮ್ರ ಕೊಡುಗೆ ಮುಂದುವರೆಯುತ್ತದೆ. ಜೈಹಿಂದ್ ಎಂದು ಬರೆದಿದ್ದಾರೆ.

ಏನಿದು ಪ್ರಕರಣ?

ಅಮೇರಿಕಾ ಮೂಲದ ಷಾರ್ಟ್ ಸೆಟರ ಹಿಂಡೆನ್ ಬರ್ಗ್ ರೀಸರ್ಚ್ ನ ವರದಿಯಲ್ಲಿ ಜನವರಿ ೨೦೨೩ ರಲ್ಲಿ ಗೌತಮ ಅದಾನಿ ಅವರ ಸಮೂಹದ ಮೇಲೆ ಷೇರು ಮಾರುಕಟ್ಟೆ ಅದಲು-ಬದಲು ಮತ್ತು ವಂಚನೆಯ ಆರೋಪ ಮಾಡಿದ್ದರು. ಆನಂತರ ಈ ಸಮೂಹವು ಎಲ್ಲಾ ಆರೋಪಗಳನ್ನು ನಿರಾಕರಿಸಿತ್ತು. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ವಿಶೇಷ ತನಿಖಾ ತಂಡವನ್ನು ಕೋರಲಾಗಿತ್ತು.