ಶ್ರೀರಾಮ ಜನ್ಮ ಭೂಮಿಯ ತೀರ್ಪು ಎಲ್ಲಾ ನ್ಯಾಯಮೂರ್ತಿಗಳ ಒಮ್ಮತದಿಂದ ನೀಡಲಾಗಿತ್ತು ! – ನ್ಯಾಯಮೂರ್ತಿ ಚಂದ್ರಚೂಡ

ನವ ದೆಹಲಿ – ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯ ಹೋರಾಟದ ದೀರ್ಘ ಇತಿಹಾಸ ಮತ್ತು ವಿವಿಧ ಅಂಶಗಳನ್ನು ಗಮನಿಸಿ ಈ ಮೊಕದ್ದಮೆಗೆ ಸಂಬಂಧಿಸಿದ ಎಲ್ಲಾ ನ್ಯಾಯಮೂರ್ತಿಗಳು ಒಮ್ಮತದಿಂದ ನಿರ್ಣಯ ನೀಡಲಾಗಿತ್ತು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರು ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ಗೆ ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ನೀಡಿದರು.

(ಸೌಜನ್ಯ – NEWS 18 Uttarakhand)

೧. ಸಲಿಂಗ ವಿವಾಹದ ಮಾನ್ಯತೆ ನಿರಾಕರಿಸುವ ಸಂದರ್ಭದಲ್ಲಿನ ನಿರ್ಣಯದ ಬಗ್ಗೆ ನ್ಯಾಯಾಧೀಶ ಚಂದ್ರಚೂಡ ಇವರು, ಈ ನಿರ್ಣಯದ ನಂತರ ಏನೆಲ್ಲಾ ತೀರ್ಪುಗಳು ಬಂದಿವೆ, ಅದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ. ಸಲಿಂಗ ವಿವಾಹದ ಕಾನೂನಿನ ಸ್ಥಾನ ನೀಡಲು ನಿರಾಕರಿಸುವ ನಿರ್ಣಯದ ಗುಣಮಟ್ಟದ ಬಗ್ಗೆ ಟೀಕೆ ಮಾಡುವುದಿಲ್ಲ. ನಾವು ಸಂವಿಧಾನ ಮತ್ತು ಕಾನೂನಿನ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಟೀಕೆಗೆ ಪ್ರತ್ಯುತ್ತರ ನೀಡುವುದು ಅಥವಾ ನನ್ನ ನಿರ್ಣಯವನ್ನು ಕಾಪಾಡುವುದು ನನಗೆ ಯೋಗ್ಯ ಅನಿಸುವುದಿಲ್ಲ ಎಂದು ಹೇಳಿದರು.

೨. ನ್ಯಾಯಮೂರ್ತಿ ಚಂದ್ರಚೂಡ ಇವರು, ನಮ್ಮ ಪ್ರಶಿಕ್ಷಣ ನಮಗೆ ಒಂದು ವಿಷಯ ಕಲಿಸುತ್ತದೆ ಅದೇನೆಂದರೆ, ಒಮ್ಮೆ ನೀವು ಯಾವುದಾದರೂ ಮೋಕದ್ದಮೆಯ ತೀರ್ಪು ನೀಡಿದ ನಂತರ ನೀವು ಅದರಿಂದ ದೂರ ಉಳಿಯಬೇಕಾಗುತ್ತದೆ. ನ್ಯಾಯಾಧೀಶ ಎಂದು ನಿರ್ಣಯ ತಮಗಾಗಿ ಎಂದು ವೈಯಕ್ತಿಕ ಇರುವುದಿಲ್ಲ. ನ್ಯಾಯಾಧೀಶರ ಜೀವನದ ಒಂದು ಮಹತ್ವದ ಭಾಗ ಎಂದರೆ ಸ್ವತಃ ಎಂದು ಯಾವುದೇ ಸಮಸ್ಯೆಯ ಜೊತೆಗೆ ಜೋಡಣೆ ಆಗದೆ ಇರುವುದಾಗಿದೆ, ಎಂದು ಹೇಳಿದರು.