ರಾಜ್ಯದ ಪ್ರಸಿದ್ಧ ಶಿಲ್ಪಿ ಅರುಣ ಯೋಗಿರಾಜ ಇವರು ಕೆತ್ತಿರುವ ರಾಮಲಲ್ಲನ ಮೂರ್ತಿ ದೇವಸ್ಥಾನದಲ್ಲಿ ಸ್ಥಾಪನೆ ! – ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದಿಂದ ಜನವರಿ ೧೭ ಕ್ಕೆ ಅಧಿಕೃತ ಘೋಷಣೆ ಆಗಲಿದೆ

ಮೈಸೂರ /ಅಯೋಧ್ಯೆ – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕಾಗಿ ರಾಮಲಲ್ಲನ ಮೂರ್ತಿ ಅಂತಿಮಗೊಳಿಸಲಾಗಿದೆ. ಕರ್ನಾಟಕದಲ್ಲಿನ ಪ್ರಸಿದ್ಧ ಶಿಲ್ಪಿ ಅರುಣ ಯೋಗಿರಾಜ ಇವರು ಇದನ್ನು ಕೆತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇವರು ‘ಎಕ್ಸ್’ ನಲ್ಲಿ ಈ ಘೋಷಣೆ ಮಾಡಿದರು. ಹೀಗಿದ್ದರೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದಿಂದ ಇದರ ಕುರಿತು ಅಧಿಕೃತ ಘೋಷಣೆ ಜನವರಿ ೧೭ ಕ್ಕೆ ಮಾಡಲಾಗುವುದು.

೧. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ‘ಎಕ್ಸ್’ ಮೂಲಕ, ”ಎಲ್ಲಿ ರಾಮ, ಅಲ್ಲೇ ಹನುಮ. ಕರ್ನಾಟಕ ಇದು  ಹನುಮಂತನ ಸ್ಥಳ ಆಗಿದೆ. ಹನುಮಂತನ ಸ್ಥಳ ಆಗಿರುವ ಕರ್ನಾಟಕದಿಂದ ರಾಮಲಲ್ಲನಿಗಾಗಿ ಇದು ಮಹತ್ವದ ಸೇವೆ ಆಗಿದೆ, ಇದರಲ್ಲಿ ಅನುಮಾನವಿಲ್ಲ.” ಎಂದು ಹೇಳಿದರು.

೨. ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇವರು, ಯೋಗಿರಾಜ ಇವರ ಅಭಿನಂದನೆಗಳು ! ರಾಜ್ಯಕ್ಕಾಗಿ ಇದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

೩. ಶಿಲ್ಪಿ ಅರುಣ್ ಯೋಗಿರಾಜ ಇವರು, ನನಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಯಾವ ಶಿಲ್ಪಿಯ ಈ ಕಾರ್ಯಕ್ಕಾಗಿ ಆಯ್ಕೆಯಾಗಿದ್ದು ಅದರಲ್ಲಿ ನಾನು ಇದ್ದೇನೆ, ಇದರ ಆನಂದ ನನಗೆ ಇದೆ. ಮೂರ್ತಿ ಹೇಗೆ ಇರಬೇಕು, ಅದರಲ್ಲಿ ಪರಮೇಶ್ವರನ ದಿವ್ಯ ಬಾಲರೂಪ ಕಾಣಬಹುದು, ಯಾವಾಗ ಜನರು ಮೂರ್ತಿಯನ್ನು ನೋಡುತ್ತಾರೆ ಆಗ ಅವರಿಗೆ ದೇವತ್ವ ಅರಿವಿಗೆ ಬರುತ್ತದೆ. ಬಾಲ ಸ್ವರೂಪ ಮುಖ ಮತ್ತು ಮತ್ತು ಭಗವಂತನ ದೇವತ್ವ ಕಣ್ಣೆದುರು ಇಟ್ಟು ಕೆಲವು ತಿಂಗಳ ಹಿಂದೆ ನಾನು ಕಾರ್ಯ ಆರಂಭಿಸಿದ್ದೆ ಎಂದು ಹೇಳಿದರು. ಅರುಣ ಯೋಗಿರಾಜ ಅವರು ದೆಹಲಿಯಲ್ಲಿನ ಇಂಡಿಯಾ ಗೇಟನಲ್ಲಿ ಸ್ಥಾಪಿಸಿರುವ ನೇತಾಜಿ ಸುಭಾಷ ಚಂದ್ರ ಬೋಸ ಇವರ ಪುತ್ತಳಿಯನ್ನು ತಯಾರಿಸಿದ್ದಾರೆ.

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಚಂಪತರಾಯ ಇವರ ಹೇಳಿಕೆ !

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಚಂಪತರಾಯ ಇವರು, ಜನವರಿ ೨ ರಂದು ಯಾವ ಮೂರ್ತಿ ನಿಶ್ಚಿತಗೊಳಿಸುವುದು ? ಇದು ನನಗೆ ಹೇಳಲು ಆಗುವುದಿಲ್ಲ. ಮಂದಿರ ಸಮಿತಿ ಇದನ್ನು ನಿರ್ಧರಿಸುವರು. ಜನವರಿ ೧೭ ಕ್ಕೆ ಈ ವಿಷಯದ ಬಗ್ಗೆ ರಾಮಭಕ್ತರಿಗೆ ಮಾಹಿತಿ ನೀಡಲಾಗುವುದೆಂದು ಹೇಳಿದರು.

ಹೀಗಿರಲಿದೆ ರಾಮಲಲ್ಲಾನ ಮೂರ್ತಿ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಗರ್ಭಗುಡಿಗಾಗಿ ಶ್ರೀರಾಮಲಲ್ಲಾನ ಒಟ್ಟು ಮೂರು ಮೂರ್ತಿ ಕೆತ್ತಲಾಗಿದೆ. ಮೂರೂ ಮೂರ್ತಿಗಳ ಎತ್ತರ ೫೧ ಇಂಚು ಅಷ್ಟು ಇದೆ. ಮೂರು ಮೂರ್ತಿಯಲ್ಲಿ ಕಮಲದ  ಆಸನದ ಮೇಲೆ ಕುಳಿತಿರುವ ರಾಮಲಲ್ಲಾನ ೫ ವರ್ಷದ ಬಾಲರೂಪದಲ್ಲಿ ಕೆತ್ತಲಾಗಿದೆ. ಕಮಲಪುಷ್ಪ ಸೇರಿ ಮೂರ್ತಿಯ ಎತ್ತರ ಸುಮಾರು ೮ ಅಡಿ ಇದೆ.