ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರಿಂದ ಫಲಕ ಪ್ರರ್ದಶನ !
ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರು ಪಕ್ಷದ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ ಮತ್ತು ಅವರ ಪತ್ನಿ ರಾಬಡಿ ದೇವಿ ಇವರ ಮನೆಯ ಹೊರಗೆ ಸಾವಿತ್ರಿಬಾಯಿ ಫುಲೆ ಇವರ ಜಯಂತಿಯ ಪ್ರಯುಕ್ತ ಫಲಕ ಹಾಕಿದ್ದಾರೆ. ಇದರಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಕುರಿತು ಪರೋಕ್ಷವಾಗಿ ಟೀಕಿಸುತ್ತಾ, ‘ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗವಾಗಿದೆ’, ಈ ರೀತಿಯಲ್ಲಿ ಬರೆಯಲಾಗಿದೆ. ಹಾಗೂ ಈ ಫಲಕದ ಮೇಲೆ ಲಾಲು ಪ್ರಸಾದ ಯಾದವ, ರಾಬಡಿ ದೇವಿ, ಅವರ ಪುತ್ರ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರ ಛಾಯಾಚಿತ್ರಗಳು ಇವೆ. ಇದಲ್ಲದೆ ಭಗವಾನ ಬುದ್ಧ, ಸಾಮ್ರಾಟ ಅಶೋಕ ಇವರ ಚಿತ್ರಗಳು ಮತ್ತು ಸಾವಿತ್ರಿಬಾಯಿ ಫುಲೆ ಮತ್ತು ಇತರ ಜನರ ಛಾಯಾಚಿತ್ರಗಳು ಇವೆ.
ಈ ಫಲಕದ ಮೇಲೆ, ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗವಾಗಿದೆ ಮತ್ತು ಶಾಲೆಯ ಅರ್ಥ ಜೀವನದಲ್ಲಿನ ಪ್ರಕಾಶದ ಮಾರ್ಗ. ದೇವಸ್ಥಾನದಲ್ಲಿ ಘಂಟೆ ಬಾರಿಸಿದಾಗ, ನಾವು ಮೂಢನಂಬಿಕೆ, ಡೋಂಗಿ, ಮೂರ್ಖತನ, ಅಜ್ಞಾನದ ಕಡೆಗೆ ಹೋಗುತ್ತಿದ್ದೇವೆ ಎಂಬ ಸಂದೇಶ ಸಿಗುತ್ತದೆ. ಯಾವಾಗ ಶಾಲೆಯಲ್ಲಿನ ಘಂಟೆ ಬಾರಿಸುತ್ತದೆ ಆಗ ನಾವು ಸರ್ವಗುಣ ಜ್ಞಾನ ಮತ್ತು ವೈಜ್ಞಾನಿಕ ಪ್ರಕಾಶದ ಕಡೆಗೆ ಮಾರ್ಗಕ್ರಮಣ ಮಾಡುತ್ತೇವೆ ಎಂಬ ಸಂದೇಶ ಸಿಗುತ್ತದೆ. ಈಗ ನೀವೇ ನಿಧ್ರಿಸಿ ನಮಗೆ ಯಾವ ಕಡೆಗೆ ಹೋಗುವುದಿದೆ, ಎಂದು ಹೇಳಿದರು.
‘Mandir path to mental slavery’ posters in Bihar trigger tension between RJD, JDU; BJP slams Opposition as politics over #RamTemple grows#RamMandir #RamMandirAyodhya | @AnushaSoni23 pic.twitter.com/SrTl0xCMGQ
— News18 (@CNNnews18) January 1, 2024
(ಸೌಜನ್ಯ : News18)
ಸಂಪಾದಕರ ನಿಲುವು* ದೇವಸ್ಥಾನದ ಮಹತ್ವ ತಿಳಿಯದೆ ದೇವಸ್ಥಾನವನ್ನು ದ್ವೇಷಿಸುವವರು ಈ ರೀತಿಯ ಹೇಳಿಕೆ ನೀಡುತ್ತಾರೆ ! ಇಂತಹವರ ಮೇಲೆ ಸರಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲದ್ದರಿಂದ ಅವರು ಮತ್ತೆ ಮತ್ತೆ ಈ ರೀತಿಯ ಹೇಳಿಕೆ ನೀಡುತ್ತಾ ಹಿಂದೂ ಧರ್ಮದ ಅವಮಾನ ಮಾಡುತ್ತಿರುತ್ತಾರೆ ! ಈ ಸ್ಥಿತಿ ಹಿಂದೂ ರಾಷ್ಟ್ರದಲ್ಲಿ ಬದಲಾಯಿಸಲಾಗುವುದು ! |