ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !
ನವ ದೆಹಲಿ – ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳಿಂದ ಸ್ಥಳಾಂತರವಾಗಿರುವ ನಾಲ್ಕುವರೆ ಲಕ್ಷ ಕಾಶ್ಮೀರಿ ಹಿಂದುಗಳ ಬಗ್ಗೆ ಕಡಿಮೆ ಚರ್ಚೆ ನಡೆದಿದೆ. ‘ಕಾಶ್ಮೀರಿ ಹಿಂದೂ’ ಇವರು ರಾಜಕೀಯ ಗಮನ ಸೆಳೆಯುವಷ್ಟು ದೊಡ್ಡ ವೋಟ ಬ್ಯಾಂಕ್ ಆಗಿರಲಿಲ್ಲ, ಎಂದು ನಿವೃತ್ತರಾಗಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ್ ಇವರು ಡಿಸೆಂಬರ್ ೨೫ ರಂದು ಹೇಳಿಕೆ ನೀಡಿದರು. ಕಲಂ ೩೭೦ ರದ್ದು ಪಡೆಸಿರುವ ತೀರ್ಪು ನೀಡುವ ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಮೂರ್ತಿಗಳ ವಿಭಾಗೀಯಪೀಠದಲ್ಲಿ ನ್ಯಾಯಮೂರ್ತಿ ಕೌಲ ಇವರ ಸಮಾವೇಶ ಕೂಡ ಇತ್ತು ಹಾಗೂ ಅವರು ಸ್ವತಃ ಕಾಶ್ಮೀರಿ ಹಿಂದೂ ಆಗಿದ್ದಾರೆ.
ನ್ಯಾಯಮೂರ್ತಿ (ನಿವೃತ್ತ) ಕೌಲ್ ಮಾತು ಮುಂದುವರೆಸಿ,
೧. ಭಯೋತ್ಪಾದನೆಯಿಂದ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ಮುಂಚೆ ವಿವಿಧ ಜನಾಂಗದ ಜನರು ಒಟ್ಟಾಗಿ ವಾಸಿಸುತ್ತಿದ್ದರು. ಕಣಿವೆಯಲ್ಲಿನ ಪರಿಸ್ಥಿತಿ ಇಷ್ಟೊಂದು ಹೇಗೆ ಹದಗೆಟ್ಟಿತು ? ಇದು ತಿಳಿಯಲಿಲ್ಲ.
೨. ೩೦ ವರ್ಷದ ಬೆಲೆಗಾಮ ಹಿಂಸಾಚಾರದ ನಂತರ ಈಗ ಜನರು ಮುಂದೆ ಹೋಗುವ ಸಮಯ ಬಂದಿದೆ.
೩. ಮುಸಲ್ಮಾನ ಬಹುಸಂಖ್ಯಾತ ಜಮ್ಮು ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಕಾಶ್ಮೀರಿ ಹಿಂದುಗಳ ಸ್ಥಳಾಂತರದ ಬಗ್ಗೆ ಎಲ್ಲರೂ ಮೌನ ವಹಿಸಿರುವುದರಿಂದ ನನಗೆ ವಿಷಾದ ಅನಿಸುತ್ತದೆ.
೪. ೧೯೯೦ ರ ದಶಕದಲ್ಲಿನ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ದೇಶದ ಪ್ರಾದೇಶಿಕ ಅಖಂಡತೆ ಅಪಾಯಕ್ಕೆ ಸಿಲುಕಿರುವುದರಿಂದ ಸೈನ್ಯ ಕರಿಸಬೇಕಾಯಿತು. ಜಮ್ಮು ಕಾಶ್ಮೀರದಲ್ಲಿನ ಜನರ ಒಂದು ಸಂಪೂರ್ಣ ಪೀಳಿಗೆಯು ಒಳ್ಳೆಯ ಸಮಯ ನೋಡಲಿಲ್ಲ. ಎಂದು ಹೇಳಿದರು.
Part II: Kashmiri Pandits have not received justice from any government: Justice Sanjay Kishan Kaul
Interview by @DebayonRoy #SupremeCourt #Supremecourtofindiahttps://t.co/qI4ZriptUv
— Bar & Bench (@barandbench) December 30, 2023
ಸಂಪಾದಕರ ನಿಲುವು* ಈಗ ಹೀಗೆ ಮತ್ತೆ ಆಗಬಾರದು, ಅದಕ್ಕಾಗಿ ಎಲ್ಲ ಹಿಂದುಗಳು ಜಾಗರೂಕರಾಗಿ ಇರುವುದು ಆವಶ್ಯಕವಾಗಿದೆ. ಎಲ್ಲೆ ಹಿಂದುಗಳ ಮೇಲೆ ಅವರು ‘ಹಿಂದೂ’ ಇರುವುದರಿಂದ ಅವರ ಮೇಲೆ ಅತ್ಯಾಚಾರವಾದರೆ, ಎಲ್ಲಾ ಹಿಂದುಗಳು ಸಂಘಟಿತರಾಗಿ ಅದರ ವಿರುದ್ಧ ಧ್ವನಿ ಎತ್ತುವುದು, ಇದು ಕಾಶ್ಮೀರದ ಪುನರಾವೃತ್ತಿ ತಪ್ಪಿಸುವ ಮಾರ್ಗವಾಗಿದೆ. |