ಕೇಂದ್ರ ಸರಕಾರದಿಂದ ಕಾಶ್ಮೀರದ ‘ತಹರಿಕ-ಎ-ಹುರಿಯತ್’ ಈ ಸಂಘಟನೆಯ ಮೇಲೆ ನಿಷೇಧ ! 

ನವ ದೆಹಲಿ – ಕೇಂದ್ರ ಸರಕಾರವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ‘ತಹರಿಕ್-ಎ-ಹುರಿಯತ್’ ಈ ಸಂಘಟನೆಯ ಮೇಲೆ ನಿಷೇದ ಹೇರಿದೆ. ಕೆಲವು ದಿನಗಳ ಹಿಂದೆ ಸರಕಾರವು ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ'(ಮಸರತ ಆಲಂ ಗ್ರೂಪ್) ಈ ಸಂಘಟನೆಯ ಮೇಲೆ ನಿಷೇಧ ಹೇರಿತ್ತು.

ಕೇಂದ್ರ ಗೃಹ ಸಚಿವ ಅಮಿತ ಶಾ ಇವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಈ ಮಾಹಿತಿ ನೀಡಿದರು. ಅವರು, ತಹರಿಕ್-ಎ-ಹುರಿಯತ್ ಈ ಸಂಘಟನೆ ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಇಸ್ಲಾಮಿ ಅಧಿಕಾರ ಸ್ಥಾಪಿಸುವುದಕ್ಕಾಗಿ ಚಟುವಟಿಕೆ ಮಾಡುತ್ತಿದೆ. ಈ ಸಂಘಟನೆ ರಾಜ್ಯದಲ್ಲಿ ಪ್ರತ್ಯೇಕತಾವಾದಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಭಾರತ ವಿರೋಧಿ ಪ್ರಚಾರ ಮತ್ತು ಭಯೋತ್ಪಾದಕ ಚಟುವಟಿಕೆ ಮಾಡುತ್ತಿತ್ತು. ಭಯೋತ್ಪಾದಕರ ವಿರೋಧದಲ್ಲಿ ಶೂನ್ಯ ಸಹನಶೀಲತೆಯ ನೀತಿಯ ಅಡಿಯಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ಸಹಭಾಗಿಯಾಗಿರುವ ವ್ಯಕ್ತಿ ಅಥವಾ ಸಂಘಟನೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು. ಎಂದು ಹೇಳಿದರು.

ಸಂಘಟನೆಯ ಮೇಲೆ ನಿಷೇಧ ಎಂದರೆ ಏನು ?

‘ಕಾನೂನು ಬಾಹಿರ ಕೃತ್ಯ ಪ್ರತಿಬಂಧ ಕಾನೂನು (ಅನಾಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್-ಯು.ಎ.ಪಿ.ಎ.) ಈ ಕಾನೂನಿನಡಿಯಲ್ಲಿ ಸರಕಾರ ಯಾವುದಾದರೂ ಸಂಘಟನೆಯನ್ನು ‘ಕಾನೂನ ಬಾಹಿರ’ ಅಥವಾ ‘ಭಯೋತ್ಪಾದಕ’ ಎಂದು ಘೋಷಿಸಬಹುದು. ಇದರಿಂದ ಅದರ ಮೇಲೆ ನಿಷೇಧ ಹೇರಲಾಗುತ್ತದೆ. ಇಂತಹ ವಿಷಯದ ಸಂಬಂಧಿತ ಸದಸ್ಯರು ಸಂಘಟನೆಯ ಹೆಸರಿನಲ್ಲಿ ಕಾರ್ಯ ನಡೆಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಅವರ ಆಸ್ತಿಯನ್ನು ಕೂಡ ವಶಪಡಿಸಿಕೊಳ್ಳಬಹುದು. ಈಗ ದೇಶದಲ್ಲಿನ ೪೩ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ಅವುಗಳ ಮೇಲೆ ನಿಷೇಧ ಹೇರಲಾಗಿದೆ.

ಸಂಪಾದಕೀಯ ನಿಲುವು

ಇಸ್ಲಾಮಿ ಸಂಘಟನೆಗಳಿಗೆ ‘ಭಯೋತ್ಪಾದಕ’ ಎಂದು ಘೋಷಿಸಿ ಅದನ್ನು ನಿಷೇಧಿಸುವುದು ಇದು ಒಂದು ಹಂತವಾಗಿದೆ; ಆದರೆ ಅದರ ಚಟುವಟಿಕೆ ತಡೆದು ಸಂಪೂರ್ಣ ಸಂಘಟನೆ ನಾಶ ಮಾಡುವುದು ಆವಶ್ಯಕವಾಗಿದೆ. ಭಾರತದಿಂದ ಇಲ್ಲಿಯವರೆಗೆ ೪೩ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಷೇಧ ಹೇರಿದ್ದರೂ ಹೆಚ್ಚಿನವುಗಳ ಚಟುವಟಿಕೆ ಈಗಲೂ ಮುಂದುವರೆದಿವೆ !