ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೇಹ ಬಹದ್ದೂರ್ ಸಿಂಹ ಕುಶವಾಹಾ ಇವರಿಂದ ಶ್ರೀ ಸರಸ್ವತಿ ದೇವಿಯ ಮೇಲೆ ಹೀನಮಟ್ಟದ ಟೀಕೆ 

ಶಾಲೆಯಲ್ಲಿ ಶ್ರೀ ಸರಸ್ವತಿ ದೇವಿಯ ಬದಲು ಸಾವಿತ್ರಿಬಾಯಿ ಫುಲೆ ಇವರ ಮೂರ್ತಿ ಸ್ಥಾಪಿಸಲು ಆಗ್ರಹ !

ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿನ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೇಹ ಬಹದ್ದೂರ್ ಸಿಂಹ ಕುಶವಾಹಾ ಇವರು ವಿದ್ಯೆಯ ದೇವತೆ ಶ್ರೀ ಸರಸ್ವತಿ ದೇವಿಯ ಕುರಿತು ಅಶ್ಲೀಲ ಟೀಕೆ ಮಾಡಿದ್ದಾರೆ. ಅವರು ಶಾಲೆಯಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಯ ಬದಲು ಸಾವಿತ್ರಿಬಾಯಿ ಫುಲೆ ಇವರ ಮೂರ್ತಿ ಸ್ಥಾಪಿಸಲು ಆಗ್ರಹಿಸಿದೆ. ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು. ಜನವರಿ ೭ ರಂದು ಸಾವಿತ್ರಿಬಾಯಿ ಫುಲೆ ಇವರ ಜಯಂತಿ ಇದೆ. ಇದರ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಶಾಸಕ ಕುಶವಾಹಾ ಇವರು, ಸುರಸತಿ (ಸರಸ್ವತಿ)ಯು ಬ್ರಹ್ಮನ ಮಗಳಾಗಿದ್ದಾಳೆ, ಆಕೆಯ ಮೇಲೆ ಬ್ರಹ್ಮನ ದೃಷ್ಟಿ ಬೀಳುತ್ತದೆ ಮತ್ತು ಅವನು ಸುರಸತಿಯ ಜೊತೆಗೆ ವಿವಾಹ ಮಾಡಿಕೊಂಡನು, ನಿಮ್ಮ ಗ್ರಂಥದಲ್ಲಿಯೇ ಬರೆದಿದೆ, ಇದರಿಂದ ನೀವು ಯಾರನ್ನು ಪೂಜಿಸುತ್ತಿದ್ದಿರಿ ಆಕೆ ಚರಿತ್ರಹೀನ ಅಥವಾ ಚರಿತ್ರಸಂಪನ್ನ ? ಇದು ನಾನಲ್ಲ, ಇದನ್ನು ಕಬಿರರು ಹೇಳಿದ್ದಾರೆ ಎಂದು ಹೇಳಿದರು.

ಶಾಸಕ ಕುಶವಾಹಾ ಇವರು ಈ ಹಿಂದೆ ಕೂಡ ಶ್ರೀದುರ್ಗಾದೇವಿಯ ಕುರಿತು ಅಶ್ಲೀಲವಾಗಿ ಟೀಕಿಸಿದ್ದರು !

ಶಾಸಕ ಕುಶವಾಹಾ ಇವರು ಈ ಹಿಂದೆ ಶ್ರೀ ದುರ್ಗಾದೇವಿಯನ್ನು ಟಿಕಿಸುವಾಗ ‘ದುರ್ಗಾದೇವಿಯ ಕಥೆ ಕಾಲ್ಪನಿಕವಾಗಿದೆ ಎಂದು ಹೇಳಿದ್ದರು. ‘ದುರ್ಗಾದೇವಿಯ ಅಸ್ತಿತ್ವ ಏನಾದರೂ ಇದ್ದಿದ್ದರೆ, ಬ್ರಿಟಿಷರ ಆಡಳಿತ ಇರುವಾಗ ಆಕೆ ಭಾರತವನ್ನು ಏಕೆ ರಕ್ಷಿಸಲಿಲ್ಲ ? ಹೀಗೆ ಪ್ರಶ್ನೆ ಕೇಳಿದ್ದರು. ಕುಶವಾಹಾ ಇವರು ತಮ್ಮನ್ನು ‘ಮಹಿಷಾಸುರನ ವಂಶಜರು’ ಎಂದು ಹೇಳಿಕೊಳ್ಳುತ್ತಾರೆ. (ಇಂತಹ ವಂಶಜರು ಎಂದಾದರೂ ಹಿಂದುಗಳ ದೇವತೆಯನ್ನು ಗೌರವಿಸುವರೇ ? – ಸಂಪಾದಕರು) ಕುಶವಾಹಾ ಇವರು, ಹಿಂದೂ ಧರ್ಮಶಾಸ್ತ್ರದ ಪ್ರಕಾರ ಭಗವಾನ್ ಶಿವ ಮತ್ತು ಇತರ ದೇವತೆಗಳು ಆವಾಹನೆಯ ನಂತರ ಶ್ರೀ ದುರ್ಗಾದೇವಿಯ ಉತ್ಪತ್ತಿಯಾಗಿತ್ತು. ಆದ್ದರಿಂದ ಭಗವಾನ್ ಶಿವ ಆಕೆಯ ತಂದೆ ಆಗುತ್ತಾರೆ. ಇನ್ನೊಂದು ಕಡೆ ಆಕೆಯನ್ನು ‘ಮಹಾಗೌರಿ’ ಎಂದು ಕೂಡ ಕರೆಯಲಾಗುತ್ತದೆ. ಇಂತಹ ಸಮಯದಲ್ಲಿ ಗೌರಿ ಶಿವನ ಪತ್ನಿ ಆಗುತ್ತಾಳೆ. ಅಂದರೆ ಭಗವಾನ್ ಶಿವನು ತನ್ನ ಮಗಳ ಜೊತೆಗೆ ವಿವಾಹ ಮಾಡಿಕೊಂಡನೆ ? ಹೇಗೆ ಪ್ರಶ್ನೆ ಕೂಡ ಅವರು ಕೇಳಿದ್ದರು.

ಶಾಸಕ ಕುಶವಾಹಾ ಇವರು ಮಾತು ಮುಂದುವರಿಸಿ, ಇದು ಎಲ್ಲಾ ಮನುವಾದಿಗಳ ಷಡ್ಯಂತ್ರವಾಗಿದೆ. ಮಹಿಷಾಸುರನ ಹತ್ಯೆ ಮಾಡುವುದಕ್ಕಾಗಿ ಅವರು ಶ್ರೀ ದುರ್ಗಾದೇವಿಯನ್ನು ಉಪಯೋಗಿಸಿದರು. ಮಹಿಷಾಸುರನ ವಧೆ ಅಲ್ಲ ಅದು ಹತ್ಯೆ ಆಗಿತ್ತು. ಮನುವಾದಿಗಳು, ದುರ್ಗಾದೇವಿ ಮಹಿಷಾಸುರನ ಜೊತೆಗೆ ಯಾವ ಮೈದಾನದಲ್ಲಿ ಯುದ್ಧ ಮಾಡಿದ್ದಳು ಮತ್ತು ಯಾವ ಯುದ್ಧ ಮಾಡುವುದಕ್ಕಾಗಿ ಆಕೆ ರ್‍ತರಿ ಹೋಗುತ್ತಿದ್ದಳು ಇದನ್ನು ಹೇಳುವರೇ ? ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ತಮ್ಮನ್ನು ಪ್ರಗತಿ(ಅಧೋ)ಪರರು ಅನಿಸಿಕೊಳ್ಳುವ ಜನರು ವಿದ್ಯೆಯ ದೇವತೆಯಾಗಿರುವ ಶ್ರೀ ಸರಸ್ವತಿ ದೇವಿಯನ್ನು ಕಳೆದ ಅನೇಕ ದಶಕಗಳಿಂದ ಟೀಕೆಸುತ್ತಿದ್ದಾರೆ; ಆದರೂ ಕೂಡ ಹಿಂದೂಗಳ ಶ್ರದ್ಧೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ ಮತ್ತು ಆಗುವುದೂ ಇಲ್ಲ; ಏಕೆಂದರೆ ಅವರಿಗೆ ದೇವಿಯ ಮಹಾತ್ಮೆ ತಿಳಿದಿದೆ !

ಹಿಂದುಗಳ ದೇವತೆಯನ್ನು ಈ ರೀತಿ ಅವಮಾನ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ; ಆದರೆ ಇಸ್ಲಾಂನ ಅವಮಾನ ಆದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಅಥವಾ ಅವರ ಅನುಯಾಯಿಗಳು ನೇರ ಕಾನೂನು ಕೈಗೆತ್ತಿಕೊಂಡು ಅಪರಾಧಿ ಕೃತ್ಯಗಳು ನಡೆಸುತ್ತಾರೆ ! ಹಿಂದುಗಳು ಸಹಿಷ್ಣುಗಳಾಗಿರುವುದರಿಂದ ಅವರು ಹಾಗೆ ಮಾಡುವುದಿಲ್ಲ !