ಅಂಬರನಾಥ್‌ನಲ್ಲಿ ಪೊಲೀಸರಿಂದ ಅನಧಿಕೃತ ಚರ್ಚ್ ಬಂದ್ !

ಹಿಂದುತ್ವನಿಷ್ಠ ಕಮಲೇಶ್ ಗುಪ್ತಾ ಇವರ ಜಾಗರೂಕತೆ ಮತ್ತು ತತ್ಪರತೆಯ ಪರಿಣಾಮ !

ಚರ್ಚ್ ಅಧ್ಯಕ್ಷರು ಚಾರಿಟಿ ಆಯುಕ್ತರಿಂದ ಅನುಮತಿ ಪಡೆದಿಲ್ಲ ಎಂಬುದು ಬಹಿರಂಗ

ಠಾಣೆ, – ಅಂಬರನಾಥ್ (ಪಶ್ಚಿಮ) ದ ಹಿಂದೂ ಬಹುಸಂಖ್ಯಾತ ಬುವಾಪಾಡಾ ಪ್ರದೇಶದಲ್ಲಿ ‘ಗ್ಲೋರಿ ಪ್ರಾರ್ಥನಾ ಭವನ’ ಎಂಬ ಚರ್ಚ್ ಅನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತು. ಇಲ್ಲಿನ ಹಿಂದುತ್ವನಿಷ್ಠ ಶ್ರೀ. ಕಮಲೇಶ್ ಗುಪ್ತಾ ಅವರ ಪ್ರಯತ್ನದಿಂದಾಗಿ, ಈ ಅನಧಿಕೃತ ಕ್ರೈಸ್ತ ಪ್ರಾರ್ಥನಾ ಸ್ಥಳವನ್ನು ಮುಚ್ಚಲಾಯಿತು. (ಹಿಂದೂ ಧಮ್ದ ಮೇಲಿನ ದಾಳಿಗಳನ್ನು ತಡೆಯಲು ಪ್ರತ್ಯಕ್ಷ ಕೃತಿ ಮಾಡಿದ ಶ್ರೀ. ಕಮಲೇಶ್ ಗುಪ್ತಾ ಅವರಿಗೆ ಅಭಿನಂದನೆಗಳು ! ಶ್ರೀ. ಗುಪ್ತರಂತಹ ಹಿಂದುತ್ವನಿಷ್ಠರೇ ಹಿಂದೂ ಧರ್ಮದ ನಿಜವಾದ ಶಕ್ತಿ ! – ಸಂಪಾದಕರು)

1. ಅಗತ್ಯವಿರುವ ಹಿಂದೂಗಳನ್ನು ಪ್ರಾರ್ಥನೆಗೆ ಒಟ್ಟಿಗೆ ಕರೆತಂದು, ವಿವಿಧ ಪ್ರಲೋಭನೆಗಳನ್ನು ತೋರಿಸಿ ‘ಕ್ರೈಸ್ತ ಧರ್ಮ ಹೇಗೆ ಸರಿ ಇದೆ?’ ಎಂದು ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿತ್ತು. ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದಿವೆ.

2. ಈ ಕುರಿತು ಹಿಂದುತ್ವನಿಷ್ಠ ಕಮಲೇಶ್ ಗುಪ್ತಾ ಇವರು ‘ಹಿಂದೂ ಬಹುಸಂಖ್ಯಾತ ಜನವಸತಿ ಪ್ರದೇಶದಲ್ಲಿ ಚರ್ಚ್‌ನ ಅಗತ್ಯವೇನು ? ಅಲ್ಲದೆ, ಚರ್ಚ್‌ಗೆ ಅಂಬರನಾಥ್ ಮುನ್ಸಿಪಲ್ ಕೌನ್ಸಿಲ್ ಮತ್ತು ಅಂಬರನಾಥ್ ಪೊಲೀಸ್ ಠಾಣೆಯ ಅನುಮತಿಯನ್ನು ತೆಗೆದುಕೊಳ್ಳಲಾಗಿದೆಯೇ? ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆನ್‌ಲೈನ್ ಮೂಲಕ ಅಂಬರನಾಥ ಠಾಣೆ ಹಾಗೂ ಥಾಣೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.

3. ಅವರ ದೂರನ್ನು ಗಮನಿಸಿದ ಅಂಬರನಾಥ್ ಪೊಲೀಸರು ‘ಗ್ಲೋರಿ ಪ್ರಾರ್ಥನಾ ಭವನ’ ಚರ್ಚ್‌ನ ಅಧ್ಯಕ್ಷ ಜೇಮ್ಸ್ ಕುಂಜ್ಕುಜ್ (ವಯಸ್ಸು 60 ವರ್ಷ) ಅವರನ್ನು ವಿಚಾರಣೆಗಾಗಿ ಕರೆದರು. ಅವರು ದತ್ತಿ ಆಯುಕ್ತರಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಹಾಗಾಗಿ ಪೊಲೀಸರು ಆತನ ಮೇಲೆ ಸಿ.ಆರ್‌.ಪಿ.ಸಿ. 149 ರ ನೋಟಿಸ್ ಜಾರಿ ಮಾಡಿ ಈ ಅನಧಿಕೃತ ಚರ್ಚ್ ಅನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಿತು ಮತ್ತು ಕಮಲೇಶ್ ಗುಪ್ತಾ ಅವರಿಗೆ ತಿಳಿಸಲಾಯಿತು.

ಸಂಪಾದಕರ ನಿಲುವು

* ಇಂತಹ ಅನಧಿಕೃತ ಚರ್ಚ್ ಹೇಗೆ ನಿಲ್ಲುತ್ತದೆ ? ಈ ಬಗ್ಗೆ ಪೊಲೀಸರು ಮತ್ತು ಆಡಳಿತದವರ ನಿಯಂತ್ರಣ ಹೇಗೆ ಇಲ್ಲ ?