ರಾಜ್ಯದ ೧೦ ನೆ ತರಗತಿಯ ವಿದ್ಯಾರ್ಥಿಯ ಜೊತೆಗೆ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ತೆಗೆದಿದ್ದ ಮುಖ್ಯೋಪಾಧ್ಯಾಯಿನಿ ಅಮಾನತು !

ವಿದ್ಯಾರ್ಥಿ ಜೊತೆ ತಾಯಿ ಮಗನ ಸಂಬಂಧ ಇರುವುದೆಂದು ಮುಖ್ಯೋಪಾಧ್ಯಾಯಿನಿ ದಾವೆ

ಬೆಂಗಳೂರು – ಟೂರ್ ಸಮಯದಲ್ಲಿ ೧೦ ನೆ ತರಗತಿಯ ವಿದ್ಯಾರ್ಥಿ ಜೊತೆಗೆ ಅಕ್ಷೆಪಾರ್ಹ ಛಾಯಾಚಿತ್ರ ತೆಗೆದಿರುವ ಪ್ರಕಾರಣದಲ್ಲಿ ಮುರುಗಮಲ್ಲ ಇಲ್ಲಿಯ ಒಂದು ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲಾಗಿದೆ. ಈ ಛಾಯಾಚಿತ್ರಗಳಲ್ಲಿ ಮುಖ್ಯೋಪಾಧ್ಯಾಯಿನಿ ಮತ್ತು ವಿದ್ಯಾರ್ಥಿ ಪರಸ್ಪರ ತಬ್ಬಿಕೊಂಡಿರುವುದು ಮತ್ತು ಕೆನ್ನೆಗೆ ಚುಂಬಿಸುತ್ತಿರುವುದು ಕಾಣುತ್ತಿದೆ. ಈ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಶಾಲೆಯ ಆಡಳಿತದಿಂದ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಆರ್. ಇವರಿಗೆ ಈ ಛಾಯಾಚಿತ್ರದ ಬಗ್ಗೆ ಕೇಳಿದಾಗ ಅವರು, ಛಾಯಾಚಿತ್ರದಲ್ಲಿ ಕಾಣುವ ವಿದ್ಯಾರ್ಥಿಯ ಜೊತೆಗೆ ಆಕೆಯ ತಾಯಿ ಮಗನ ಸಂಬಂಧವಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಇಂತಹ ಮುಖ್ಯೋಪಾಧ್ಯಾಯಿನಿ ವಿದ್ಯಾರ್ಥಿಗಳ ಮೇಲೆ ಎಂತಹ ಸಂಸ್ಕಾರ ಮಾಡುವರು ?