ಶ್ರೀರಾಮ ಮಂದಿರಕ್ಕೆ 600 ಕೆಜಿ ತೂಕದ ಗಂಟೆ ಅಳವಡಿಸಲಾಗುವುದು !

ನವದೆಹಲಿ – ಅಯೋಧ್ಯೆಯ ಶ್ರೀರಾಮ ಮಂದಿರದ ಸಮಾರಂಭದ ಸಂದರ್ಭದಲ್ಲಿ, ಶ್ರೀರಾಮ ದೇವಸ್ಥಾನದಲ್ಲಿ 600 ಕೆಜಿ ತೂಕದ ಗಂಟೆಯನ್ನು ಇರಿಸಲಾಗುತ್ತದೆ. ಈ ಗಂಟೆ ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ. ಅದರ ಮೇಲೆ ‘ಜೈ ಶ್ರೀರಾಮ್’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

ಉತ್ತರ ಪ್ರದೇಶದ ಜಲೇಸರ್‌ನ ಕುಟುಂಬವೊಂದು ಈ ದೈತ್ಯ ಗಂಟೆವನ್ನು ನಿರ್ಮಿಸಿದೆ. ನೂರಾರು ಕಾರ್ಮಿಕರು ಈ ಗಂಟೆಯನ್ನು ಮಾಡಲು ಸಹಕರಿಸಿದ್ದಾರೆ. ಇತರ ದೇವಾಲಯಗಳಲ್ಲಿ ಸ್ಥಾಪಿಸಲಾದ ದೈತ್ಯ ಗಂಟೆಗಳನ್ನು 3-3 ಭಾಗಗಳಲ್ಲಿ ಜೋಡಿಸಲಾಗುತ್ತದೆದೆ; ಆದರೆ ಶ್ರೀರಾಮ ಮಂದಿರಕ್ಕೆ ಮಾಡಿದ ಗಂಟೆಗಳು ಒಂದೇ ಭಾಗದಲ್ಲಿ ಮಾಡಲಾಗಿದ್ದು ಅದು ಅಖಂಡವಾಗಿದೆ. ಗಂಟೆಯ ಕೆಳ ಸುತ್ತಳತೆ 15 ಅಡಿ, ಎತ್ತರ 8 ಅಡಿ ಇದೆ.