ದಾಳಿ ಯಾರು ಮಾಡಿದ್ದಾರೆ ಸ್ಪಷ್ಟವಾಗಿಲ್ಲ !ಕಳೆದ ತಿಂಗಳಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನವು ಖಲಿಸ್ತಾನಿಗಳು ನಿಷೇಧಿಸಿತ್ತು! |
ಒಟಾವಾ (ಕೆನಡಾ) – ಇಲ್ಲಿಯವರೆಗೆ ಕೆನಡಾದಲ್ಲಿ ಖಲಿಸ್ತಾನಿಗಳಿಂದ ಹಿಂದುಗಳ ದೇವಸ್ಥಾನಗಳನ್ನು ಗುರಿ ಮಾಡಿ ಅದನ್ನು ಧ್ವಂಸ ಮಾಡುತ್ತಿದ್ದರು. ಇದರ ಜೊತೆಗೆ ಭಾರತ, ಹಿಂದುಗಳು ಮತ್ತು ನರೇಂದ್ರ ಮೋದಿ ಇವರ ವಿರುದ್ಧ ಘೋಷಣೆಗಳನ್ನು ಬರೆಯುತ್ತಿದ್ದರು; ಆದರೆ ಈಗ ಸರೆ ಪ್ರಾಂತದಲ್ಲಿನ ಪ್ರಸಿದ್ಧ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಅಧ್ಯಕ್ಷ ಸತೀಶ ಕುಮಾರ ಇವರ ಮನೆಯ ಮೇಲೆ ಡಿಸೆಂಬರ್ ೨೮ ರ ರಾತ್ರಿ ದಾಳಿ ನಡೆಸಲಾಗಿದೆ. ಅವರ ಮನೆಯ ಮೇಲೆ ೧೪ ಗುಂಡುಗಳು ಹಾರಿಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಯಾವುದೇ ಜೀವ ಹಾನಿ ನಡೆದಿಲ್ಲ. ಕಳೆದ ತಿಂಗಳಲ್ಲಿ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವನ್ನು ಖಲಿಸ್ತಾನಿಗಳಿಗೆ ಖಂಡಿಸಿತ್ತು. ಇದರಿಂದ ಈ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ; ಆದರೆ ಈ ಗುಂಡಿನ ದಾಳಿ ಯಾರು ಮಾಡಿದ್ದಾರೆ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಪೊಲೀಸರು ಈ ದಾಳಿಯ ತನಿಖೆ ನಡೆಸುತ್ತಿದ್ದಾರೆ.
೧. ಸತೀಶ ಕುಮಾರ ಇವರು ಈ ಘಟನೆಯ ಬಗ್ಗೆ, ಯಾವ ಮನೆಯ ಮೇಲೆ ದಾಳಿ ನಡೆದಿದೆ, ಅಲ್ಲಿ ನನ್ನ ಪುತ್ರ ವಾಸಿಸುತ್ತಿದ್ದಾನೆ. ಪೊಲೀಸರು ಈಗ ಗುಂಡಿನ ದಾಳಿ ನಡೆಸಿದವರನ್ನು ಹುಡುಕುತ್ತಿದ್ದಾರೆ. ಈ ಗುಂಡಿನ ದಾಳಿ ಖಚಿತವಾಗಿ ಯಾರು ಮಾಡಿದ್ದಾರೆ ? ಇದು ಈಗ ಹೇಳುವುದು ಕಠಿಣವಾಗಿದೆ. ಕೆಲವು ದಿನಗಳ ಹಿಂದೆ ದೇವಸ್ಥಾನದ ಮೇಲೆ ದಾಳಿ ನಡೆದಿತ್ತು. ಅದರ ಮತ್ತು ಈ ದಾಳಿಯಲ್ಲಿ ಏನಾದರೂ ಸಂಬಂಧವಿದೆ ? ಎಂದು ಪ್ರಶ್ನೆ ಕೇಳಿದಾಗ ಸತೀಶ ಕುಮಾರ ಇವರು, ಈಗ ಅದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
೨. ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಅಥವಾ ದೇವಸ್ಥಾನಕ್ಕೆ ಸಂಬಂಧಿಸಿದ ಸದಸ್ಯರನ್ನು ಗುರಿ ಮಾಡುವುದು ಇದು ಮೂರನೇ ಬಾರಿ ಆಗಿದೆ. ಈ ಘಟನೆಯ ನಂತರ ಕೆನಡಾದಲ್ಲಿನ ಭಾರತೀಯ ಹಿಂದೂ ಜನಾಂಗದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(ಸೌಜನ್ಯ : The Economic Times)
ಸಂಪಾದಕರ ನಿಲುವು* ಕೆನಡಾದಲ್ಲಿನ ಒಟ್ಟಾರೆ ಪರಿಸ್ಥಿತಿ ನೋಡಿದರೆ ಇದರ ಹಿಂದೆ ಖಲಿಸ್ತಾನಿಗಳ ಕೈವಾಡ ಇರಬಹುದು ಎಂದು ಸಂದೇಹ ಇರುವುದರಲ್ಲಿ ಅನುಮಾನವಿಲ್ಲ, ಆದರೆ ಇದು ಸತ್ಯವಾದರೆ ಬಾರತವು ಈ ವಿಷಯ ಜಗತ್ತಿನೆದುರು ಹೆಚ್ಚು ಪ್ರಖರವಾಗಿ ಮಂಡಿಸಿ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಕೆನಡಾಗೆ ಅನಿವಾರ್ಯಗೊಳಿಸಬೇಕು ! |