ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ 5 ವರ್ಷ ವಯಸ್ಸಿನ ರಾಮನ ಮೂರ್ತಿ ಪ್ರತಿಷ್ಠಾಪನೆ !

24 ಗಂಟೆ ಕೆಲಸ ಮಾಡುತ್ತಿರುವ 4 ಸಾವಿರ ಕಾರ್ಮಿಕರು !

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಚಂಪತ್ ರಾಯ್ ಇವರು ಇತ್ತೀಚೆಗೆ ಶ್ರೀರಾಮ ಮಂದಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವರದಿಗಾರರಿಗೆ ನೀಡಿದರು. ಅವರು, 5 ವರ್ಷ ವಯಸ್ಸಿನ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಈ ವಿಗ್ರಹವು ದೇವರ ಮಗುವಿನ ರೂಪದಲ್ಲಿರುವುದರಿಂದ ದೇವಸ್ಥಾನದಲ್ಲಿ ಸೀತಾ ಮಾತೆಯ ವಿಗ್ರಹ ಇರುವುದಿಲ್ಲ. ಮೂರು ಅಂತಸ್ತಿನ ಶ್ರೀರಾಮ ಮಂದಿರದ ಎರಡನೇ ಮಹಡಿಯ ಕಾಮಗಾರಿ ಪ್ರಗತಿಯಲ್ಲಿದೆ. ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಮೊದಲ ಮಹಡಿ ಶೇ 80ರಷ್ಟು ಪೂರ್ಣಗೊಂಡಿದೆ. 70 ಎಕರೆಯಲ್ಲಿ 30 ರಷ್ಟು ನಿರ್ಮಾಣ ಹಂತದಲ್ಲಿದೆ.

ರಾಯ ಇವರು ಹೇಳಿದ ದೇವಾಲಯಕ್ಕೆ ಸಂಬಂಧಿಸಿದ ವಿಶಿಷ್ಟ ಸೂತ್ರಗಳು –

* ಮುಖ್ಯ ದೇವಾಲಯವು 360 ಅಡಿ ಉದ್ದ ಮತ್ತು 235 ಅಡಿ ಅಗಲ !

* ದೇವಾಲಯದ ಶಿಖರವು 161 ಅಡಿ ಎತ್ತರ !

* ನೆಲ ಮಹಡಿಯಲ್ಲಿ 18 ಬಾಗಿಲುಗಳಿರುತ್ತವೆ; ಅವುಗಳಲ್ಲಿ 14 ಬಾಗಿಲುಗಳಿಗೆ ಚಿನ್ನದ ಲೇಪನ !

* ಇಡೀ ಸಂಕೀರ್ಣದಲ್ಲಿ ಇನ್ನೂ 7 ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಶ್ರೀರಾಮನ ಗುರು ಋಷಿ ವಸಿಷ್ಠ, ಋಷಿ ವಿಶ್ವಾಮಿತ್ರ, ಋಷಿ ವಾಲ್ಮೀಕಿ, ಅಗಸ್ತ್ಯ ಮುನಿ, ರಾಮ ಭಕ್ತ ಕೇವತ್, ನಿಷಾದರಾಜ ಮತ್ತು ಮಾತಾ ಶಬರಿಯ ದೇವಾಲಯಗಳು ಸೇರಿವೆ ! ಇದರ ನಿರ್ಮಾಣವು 2024 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ !

ಶ್ರೀ ರಾಮಲಾಲ ದರ್ಶನದ ದಾರಿ !

* ದೇವಾಲಯದ ಪ್ರವೇಶವು ಪೂರ್ವ ದಿಕ್ಕಿನಲ್ಲಿರುವ ಸಿಂಹದ ಬಾಗಿಲಿನ ಮೂಲಕ ಇರುತ್ತದೆ.

* ಸಿಂಹದ ದ್ವಾರದಿಂದ 32 ಮೆಟ್ಟಿಲುಗಳನ್ನು ಹತ್ತಿದ ನಂತರ, ಮೊದಲ ರಂಗಮಂಟಪ ಸಿಗಲಿದೆ. ಇಲ್ಲಿನ ಗೋಡೆಗಳ ಮೇಲೆ ಪ್ರಭು ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ಪಾತ್ರಗಳನ್ನು ಕೆತ್ತಲಾಗಿದೆ.

* ರಂಗಮಂಟಪದ ಮೂಲಕ ಹಾದುಹೋದ ನಂತರ ನೃತ್ಯ ಮಂಟಪ ಇರುತ್ತದೆ. ಇಲ್ಲಿ ದೇವತೆಗಳ ವಿಗ್ರಹಗಳು ಮತ್ತು ರಾಮಾಯಣದ ಶ್ಲೋಕಗಳನ್ನು ಕಲ್ಲುಗಳ ಮೇಲೆ ಸುಂದರವಾಗಿ ಕೆತ್ತಲಾಗಿದೆ.

* ಮುಂದೆ ಹೋದನಂತರ ಭಗವಾನ ಶ್ರೀ ರಾಮಲಲಾನ ಗರ್ಭಗುಡಿ ಇದೆ. ಇಲ್ಲೇ ಜನವರಿ 22, 2024 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮ್ ಲಲಾನ ಪ್ರಾಣಪ್ರತಿಷ್ಠಾಪನೆ ಮಾಡಲಿದ್ದಾರೆ.

ಉತ್ತರ ಭಾರತದಲ್ಲಿ ಕಳೆದ 2 ಶತಮಾನಗಳಲ್ಲಿ ಶ್ರೀರಾಮ ಮಂದಿರದಂತೆ ಕಟ್ಟಡ ನಿರ್ಮಾಣವಾಗಿಲ್ಲ !

ಉತ್ತರ ಭಾರತದಲ್ಲಿ ಕಳೆದ 2 ಶತಮಾನಗಳಲ್ಲಿ ಶ್ರೀರಾಮ ಮಂದಿರದಂತಹ ನಿರ್ಮಾಣ ನಡೆದಿಲ್ಲ. ನಿರ್ಮಾಣವಾಗುತ್ತಿರುವ ದೇವಾಲಯದ ಗೋಡೆಗಳನ್ನು ತಮಿಳುನಾಡು ಮತ್ತು ಕೇರಳದ ದೇವಾಲಯಗಳಲ್ಲಿ ಮಾತ್ರ ನಿರ್ಮಿಸಲಾಗುತ್ತದೆ. ಪ್ರಸ್ತುತ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ 6 ತಿಂಗಳು ಬೇಕು. ಈ ಉದ್ಯಾನವನಗಳಲ್ಲಿ ವೃದ್ಧರು ಮತ್ತು ಅಂಗವಿಕಲರಿಗೆ ಲಿಫ್ಟ್ ಸೌಲಭ್ಯವಿರುತ್ತದೆ.