‘ಸನಾತನಿ ಮತ್ತು ಭಾರತೀಯರಾಗಿದ್ದರೆ, ಪಶ್ಚಿಮಾತ್ಯವಿಕೃತಿಯ ಮೇಲೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದರು !
ಬಾಗೇಶ್ವರ (ಮಧ್ಯಪ್ರದೇಶ) – ಭಾರತದಲ್ಲಿನ ಎಷ್ಟು ಸನಾತನಿ ಹಿಂದೂ ಪೋಷಕರು ಮತ್ತು ತಂದೆ ತಾಯಿಗಳು ಇದ್ದಾರೆ ಅವರು ತಮ್ಮ ಮಕ್ಕಳನ್ನು ಸಾಂತಾಕ್ಲಾಸ್ ಮಾಡಿ ಚರ್ಚ್‌ಗೆ ಕಳುಹಿಸುವ ಬದಲು ಅವರನ್ನು ಶ್ರೀ ಹನುಮಂತನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದರ್ಶನ ಪಡೆಯಿರಿ ಮತ್ತು ಅಲ್ಲಿಯ ಪ್ರಸಾದ ಸ್ವೀಕರಿಸಿ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಕರೆ ನೀಡಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅವರು ಕ್ರಿಸ್‌ಮಸ್ ಆಚರಿಸುವ ಬದಲು ಮಾತಾ ಪಿತೃಗಳ ಪೂಜೆಯ ದಿನ ಆಚರಿಸಲು ಕೂಡ ಕರೆ ನೀಡಿದರು. ‘ನೀವು ಸನಾತನೀ ಮತ್ತು ಭಾರತೀಯರಾಗಿದ್ದರೆ, ಈ ಪಾಶ್ಚಾತ್ಯವಿಕೃತಿಯನ್ನು ಬಹಿಷ್ಕರಿಸಿ’ ಎಂದು ಕೂಡ ಅವರು ಹೇಳಿದರು.
ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಮಾತು ಮುಂದುವರಿಸಿ, ಸನಾತನಿ ಹಿಂದುಗಳು ತಮ್ಮ ವಿರಾಟ ಸನಾತನ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಮನೆ ಮನೆಯಲ್ಲಿ ತುಳಸಿ ಪೂಜೆ ಮಾಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ಕಿಸ್‌ಮಸ್‌ಗೆ ಯಾವುದೇ ಸ್ಥಾನವಿಲ್ಲ. ಆದ್ದರಿಂದ ಪ್ರತಿಯೊಂದು ಹಿಂದೂ ಕುಟುಂಬವು ತಮ್ಮ ಮಕ್ಕಳ ಮೇಲೆ ಸನಾತನ ಧರ್ಮದ ಸಂಸ್ಕಾರ ಮಾಡಿ ಅವರ ವಿಕಾಸ ಮಾಡಬೇಕು. ಅವರಿಗೆ ಸಂತ ಮೀರಾ ಬಾಯಿಯ ಹಾಗೆ ಮಹಾರಾಣಿ ಲಕ್ಷ್ಮೀಬಾಯಿ ಮತ್ತು ಸ್ವಾಮಿ ವಿವೇಕಾನಂದರ ಹಾಗೆ ಕಾರ್ಯ ಮಾಡುವುದಕ್ಕಾಗಿ ಪ್ರೇರಿತಗೊಳಿಸಬೇಕು ಎಂದು ಹೇಳಿದರು.