ಡಿಸೆಂಬರ್ ೨೯ ರಂದು ಶ್ರೀರಾಮಲಲ್ಲಾನ ಮೂರ್ತಿಯ ಆಯ್ಕೆ 

೩ ಮೂರ್ತಿಗಳಲ್ಲಿ ಒಂದು ಮೂರ್ತಿ ಆಯ್ಕೆ ಮಾಡಲಾಗುವುದು !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಭವ್ಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮನ ಬಾಲರೂಪದಲ್ಲಿನ ಯಾವ ಮೂರ್ತಿ ಸ್ಥಾಪನೆ ಆಗುವುದು, ಇದರ ನಿರ್ಣಯ ಡಿಸೆಂಬರ್ ೨೯ ರಂದು ಆಗುವುದು. ಪ್ರಾಣ ಪ್ರತಿಷ್ಠಾಪನೆಗಾಗಿ ೩ ಮೂರ್ತಿಗಳು ತಯಾರಿಸಲಾಗಿದೆ. ಕಾಂಚೀಯ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರ ಸೂಚನೆಯ ಪ್ರಕಾರ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ನ್ಯಾಸದ ಒಂದು ತಂಡ ಇದರಲ್ಲಿನ ಒಂದು ಮೂರ್ತಿ ಆಯ್ಕೆ ಮಾಡುವುದು. ಇನ್ನೊಂದು ಉತ್ಸವ ಮೂರ್ತಿ ಎಂದು ಆಯ್ಕೆ ಮಾಡಲಾಗುವುದು. ಮೂರನೆಯ ಮೂರ್ತಿ ಎಲ್ಲಿ ಇಡುವುದು ? ಈ ನಿರ್ಣಯ ಕೂಡ ಅಂದೇ ನಡೆಯುವುದು. ಮೇ ೨೦೨೩ ರಿಂದ ಅಯೋಧ್ಯೆಯಲ್ಲಿನ ಮೂರು ಮೂರ್ತಿ ತಯಾರಿಕೆ ನಡೆಯುತ್ತಿದೆ. ಈ ಕಾರ್ಯ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಮತ್ತು ಕರ್ನಾಟಕದ ಗಣೇಶ. ಎಲ್ ಇವರಿಂದ ನಡೆಯುತ್ತಿದ್ದು ಭಟ್ಟ ಮತ್ತು ಅರುಣ ಯೋಗಿರಾಜ ಇವರು ಕುಸರೀ ಕೆಲಸ ಮಾಡುತ್ತಿದ್ದಾರೆ.

(ಸೌಜನ್ಯ – Good News Today)