ಹಡಗಿನ ಮೇಲೆ ದಾಳಿ ಮಾಡಿದವರನ್ನು ಪಾತಾಳದಿಂದಲೂ ಕಂಡುಕೊಳ್ಳುತ್ತೇವೆ ! – ರಕ್ಷಣಾ ಸಚಿವ ರಾಜನಾಥ್ ಸಿಂಗ್

ನೌಕಾಪಡೆಗೆ ಸೇರ್ಪಡೆಗೊಂಡ ‘ಐ.ಎನ್.ಎಸ್. ಇಂಫಾಲ್ ಯುದ್ಧನೌಕೆ !

ಮುಂಬಯಿ – ದೇವತೆಗಳಲ್ಲಿ ವಿವಿಧ ಶಕ್ತಿಗಳು ಇದ್ದರೂ ರಾಕ್ಷಸರನ್ನು ಸೋಲಿಸಲು ಸಾಧ್ಯವಾಗದಿದ್ದಾಗ, ಎಲ್ಲಾ ಶಕ್ತಿಗಳು ಒಗ್ಗೂಡಿ ‘ಮಹಾಶಕ್ತಿ ಜಗದಂಬಾ’ ಜನಿಸಿದಳು. ಅವಳು ರಾಕ್ಷಸರನ್ನು ಸೋಲಿಸಿದಳು. ಅದೇ ರೀತಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಂಪೂರ್ಣ ಬಲದಿಂದ ಒಗ್ಗೂಡಬೇಕು. ಇದು ಭಾರತವನ್ನು ಸೂಪರ್ ಪವರ್ ಆಗಲು ಸಹಾಯ ಮಾಡುತ್ತದೆ. ಐ.ಎನ್.ಎಸ್. ಇಂಫಾಲ’ ಅದರ ಸಂಕೇತವಾಗಿದೆ. ‘ಐ.ಎನ್.ಎಸ್. ಇಂಫಾಲ್ ದಿಂದ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಭಾರತದ ಹೆಚ್ಚುತ್ತಿರುವ ನೌಕಾ ಶಕ್ತಿಯು ಕೆಲವರಿಗೆ ಆತಂಕವನ್ನು ಉಂಟುಮಾಡುತ್ತಿದೆ. ಹಡಗಿನ ಮೇಲಿನ ದಾಳಿಯ ಹಿಂದೆ ಯಾರಿದ್ದಾರೆ, ಅವರು ಸಮುದ್ರದ ತಳದಲ್ಲಿ ಅಥವಾ ಪಾತಾಳದಲ್ಲಿ ಅಡಗಿಕೊಂಡರೂ ನಾವು ಅವರನ್ನು ಪತ್ತೆ ಮಾಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ವಿಶಾಖಪಟ್ಟಣಂ ವರ್ಗದ ಮೂರನೇ ಯುದ್ಧನೌಕೆ ‘ಐ.ಎನ್‌.ಎಸ್‌. ಇಂಫಾಲ್ ಡಿಸೆಂಬರ್ 26 ರಂದು ನೌಕಾಪಡೆಗೆ ಸೇರಿತು. ಮುಂಬಯಿನ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಇಂಫಾಲ್ ಯುದ್ಧನೌಕೆಯಲ್ಲಿ ಪ್ರಥಮ ಬಾರಿಗೆ ನೌಕಾಪಡೆಯ ಧ್ವಜವನ್ನು ಗೌರವಯುತವಾಗಿ ಹಾರಿಸಲಾಯಿತು.