ಸ್ಥಳೀಯ ಶ್ರೀ ಬೌಗನಾಥ ದೇವರ ಮೇಲಿನ ಶ್ರದ್ಧೆ ಜೊತೆಗೆ ಜ್ಞಾನ ಮತ್ತು ಕರ್ಮದಿಂದ ರಕ್ಷಣಾಕಾರ್ಯ ಯಶಸ್ವಿ ! – ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಹ

ಕೆಳಶಿಯಲ್ಲಿ (ಗೋವಾ) ‘ಪಾಂಚಜನ್ಯ’ ಪತ್ರಿಕೆಯಿಂದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜನೆ !

ಮಡಗಾಂವ್ (ಗೋವಾ), ಡಿಸೆಂಬರ 25 (ಸುದ್ದಿ.) – ಉತ್ತರಾಖಂಡದ ಸಿಲ್ಕಿಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸ್ಥಳೀಯ ಆರಾಧ್ಯ ದೈವ ಶ್ರೀ ಬೌಗನಾಥನ ಮೇಲಿನ ಶ್ರದ್ಧೆ ಮತ್ತು ಜ್ಞಾನ ಮತ್ತು ಕರ್ಮದಿಂದಾಗಿ ಯಶಸ್ವಿಯಾಗಿದೆವು. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರಕ್ಕೆ ಬಂದ ನಂತರ ಭಾರತದ ವಿದೇಶಾಂಗ ನೀತಿಯಲ್ಲಿ ತೀವ್ರ ಬದಲಾವಣೆಯಾಗಿದೆ. 2015ರಲ್ಲಿ ಯೆಮನ್‌ನಲ್ಲಿ ನಡೆದ ಯುದ್ಧದಂತಹ ಪರಿಸ್ಥಿತಿಯಿಂದ ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದ ‘ಆಪರೇಷನ್ ರಾಹತ್’ ಮತ್ತು 2022ರಲ್ಲಿ ಉಕ್ರೇನ್‌ನಿಂದ ಭಾರತಕ್ಕೆ ಭಾರತೀಯರನ್ನು ಕರೆತರಲು ನಡೆಸಿದ ‘ಆಪರೇಷನ್ ಗಂಗಾ’ ಯಶಸ್ವಿ ಆಯಿತು. ಸಪ್ಟೆಂಬರ್ 2023 ರಲ್ಲಿ ದೆಹಲಿಯಲ್ಲಿ ನಡೆದ ‘ಜಿ-20 ಸಮ್ಮೇಳನ’ವೂ ಇದರಿಂದಲೇ ಯಶಸ್ವಿ ಆಯಿತು. ಎಂದು ಕೇಂದ್ರ ರಸ್ತೆ ನಿರ್ಮಾಣ ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಹೇಳಿದರು.

ಹಿಂದುತ್ವನಿಷ್ಠ ಹಿಂದಿ ನಿಯತಕಾಲಿಕೆಯಾದ ‘ಪಾಂಚಜನ್ಯ’ ವತಿಯಿಂದ ಡಿಸೆಂಬರ್ 24 ರಂದು ‘ಸಾಗರಮಂಥನ್ ಸುಶಾಸನ್ ಸಂವಾದ 2.0’ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಕಾಮಡಗಾಂವ್ ಬಳಿಯ ಕೆಳಶಿಯ ‘ನೊವಾಟೆಲ್ ಡೊನಾ ಸಿಲ್ವಿಯಾ ರೆಸಾರ್ಟ್’ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಮಾತನಾಡಿದರು. ಈ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದ ಗಣ್ಯರು ‘ಸಾಂಸ್ಕೃತಿಕ ಪ್ರೇರಣೆ’, ‘ಆರೋಗ್ಯಕರ ಭಾರತದ ಸೂತ್ರ’, ‘ರಾಷ್ಟ್ರ-ಧರ್ಮ’ ಮೊದಲಾದ ವಿಷಯಗಳ ಕುರಿತು ಮಾತನಾಡಿದರು.

ಮಿಲಿಂದ್ ಪರಾಂಡೆ, ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ, ಕರ್ಣಾವತಿ (ಗುಜರಾತ್)ಯ ಖ್ಯಾತ ಮೂಳೆಚಿಕಿತ್ಸಕ ಡಾ. ಕೆಯುರ್ ಬುಚ್, ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಖ್ಯಾತ ವೈದ್ಯ ಮಹೇಶ್ ವ್ಯಾಸ್, ಅಮುಲ್ ಫೌಂಡೇಶನ್‌ನ ಪ್ರಬಂಧ ನಿರ್ದೇಶಕ ಜಯನ್ ಮೆಹ್ತಾ, ದೀನದಯಾಳ್ ಸಂಶೋಧನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತುಲ್ ಜೈನ್, ವಿದೇಶದಲ್ಲಿ ಕೆಲಸ ಮಾಡುವ ರಾಷ್ಟ್ರನಿಷ್ಠ ಸಂಘಟನೆಯಾದ ಸಂಪರ್ಕ ಭಾರತಿಯ ಕರ್ನಲ್ ತೇಜ್ ಕುಮಾರ್ ಟಿಕ್ಕು, ‘ಪಾಂಚಜನ್ಯ’ದ ಪ್ರಧಾನ ಸಂಪಾದಕ ಹಿತೇಶ್ ಶಂಕರ್ ಮುಂತಾದವರು ಮಾತನಾಡಿದರು.

ಕೇಂದ್ರ ಸರಕಾರ ನಿರೀಕ್ಷಿತ ಅಭಿವೃದ್ಧಿ ಸಾಧಿಸುವಲ್ಲಿ ಗೋವಾ ಮುಂದಿದೆ ! – ಮುಖ್ಯಮಂತ್ರಿ ಪ್ರಮೋದ್ ಸಾವಂತ್

ಈ ಬಾರಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ‘ಗತಿಮಾನ್ ಗೋವಾ, ಶಕ್ತಿಮಾನ್ ಭಾರತ್’ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ‘ಪಾಂಚಜನ್ಯ’ ಪತ್ರಿಕೆಯ ಪ್ರಧಾನ ಸಂಪಾದಕ ಹಿತೇಶ್ ಶಂಕರ್ ಅವರನ್ನು ಸಂದರ್ಶಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಕೆಳಗಿನ ಸೂತ್ರಗಳನ್ನು ಮಂಡಿಸಿದರು.

1. ಕೇಂದ್ರ ಸರಕಾರದ ನಿರೀಕ್ಷೆಯಂತೆ ಗೋವಾದ ಅಭಿವೃದ್ಧಿ ಸಾಧಿಸುವಲ್ಲಿ ಗೋವಾ ಮುಂದಿದೆ. ಗೋವಾದ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಯಿತು.

2. ಕೇಂದ್ರ ಸರಕಾರ ಗೋವಾಕ್ಕೆ 25 ಸಾವಿರ ಕೋಟಿ ರೂಪಾಯಿಗಳ ನೆರವು ನೀಡಿದ್ದು, ಯೋಜಿತ 90 ಯೋಜನೆಗಳ ಪೈಕಿ 17 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

3. ಗೋವಾದ ವಿಮಾನ ನಿಲ್ದಾಣ, ಬಂದರು ಮತ್ತು ರೈಲ್ವೇಗಳು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಹೊಂದಿರುವುದರಿಂದ ಗೋವಾದಿಂದ ಅಂತಾರಾಷ್ಟ್ರೀಯವಾಗಿ ಸರಕುಗಳನ್ನು ರಫ್ತು ಮಾಡಲು ಈಗ ಸಾಧ್ಯವಾಗುತ್ತದೆ.

4. ‘ಸ್ವಯಂಪೂರ್ಣ ಗೋವಾ’ ಯೋಜನೆಯ ಅನುಷ್ಠಾನದ ಅಡಿಯಲ್ಲಿ ಗೋವಾದಲ್ಲಿ ಹಾಲಿನ ಉತ್ಪಾದನೆಯನ್ನು ಶೇಕಡಾ 30 ರಿಂದ 40 ರಷ್ಟು ಹೆಚ್ಚಿಸಲು ಪ್ರಯತ್ನಿಸಲಾಯಿತು. ರಾಜ್ಯದಲ್ಲಿ ತರಕಾರಿ ಉತ್ಪಾದನೆಯೂ ಹೆಚ್ಚಿದೆ. ಎಲ್ಲಾ ಶ್ರೇಯಸ್ಸು ಸರಕಾರಿ ಅಧಿಕಾರಿಗಳಿಗೆ, ಎಲ್ಲಾ ಪಂಚಾಯತ್ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಸಲ್ಲುತ್ತದೆ.

5. ‘ಗೋವಾದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊಂದಿದೆ’ ಎಂಬಂತೆ ಗೋವಾದ ಚಿತ್ರಣ ಸೃಷ್ಟಿಯಾಗುತ್ತಿದೆಯೇ ? ಈ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಗೋವಾ ಸಂಸ್ಕೃತಿ ಹಾಗಲ್ಲ. ಪೋರ್ಚುಗೀಸರು 450 ವರ್ಷಗಳ ಕಾಲ ಗೋವಾವನ್ನು ಆಳಿದರೂ, ಗೋವಾದಲ್ಲಿ ನಮ್ಮ ಪೂರ್ವಜರು ಭಾರತೀಯ ಸಂಸ್ಕೃತಿಯನ್ನು ಉಳಿಸಿದರು. ಇದು ಗೋವಾದ ವಿಶೇಷತೆಯಾಗಿದೆ. ‘ಸೂರ್ಯ, ಮರಳು ಮತ್ತು ಸಮುದ್ರ’ (ಸನ್, ಸ್ಯಾಂಡ್ ಎಂಡ್ ಸೀ) ಗೋವಾದ ಸಂಸ್ಕೃತಿಯಲ್ಲ ಆದರೆ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗೋವಾದ ಹಲವು ಭಾಗಗಳಿವೆ. ಧಾರ್ಮಿಕ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ಮುಂತಾದ ಹಲವು ಕ್ಷೇತ್ರಗಳಲ್ಲಿ ನಾವು ಕೆಲಸ ಮಾಡಲು ಬಯಸುತ್ತೇವೆ. ಗೋವಾ ಸರಕಾರವು ಇಲ್ಲಿನ ಪುರಾತನವಾದ ಸಪ್ತಕೋಟೇಶ್ವರ ದೇವಾಲಯವನ್ನು ಪುನರ್ನಿರ್ಮಿಸಿದೆ.”ಎಂದು ಹೇಳಿದರು.