ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಇವರಿಂದ ಉಪಾಧ್ಯಕ್ಷ ಜಗದೀನ್ ಧನ್‌ಖಾದ್ ಅವರ ಬಗೆಗಿನ ಉದ್ಧಟತನ ಮುಂದುವರಿಕೆ !
ಕೋಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವಾಗ ರಾಜ್ಯಸಭಾ ಅಧ್ಯಕ್ಷ ಮತ್ತು ದೇಶದ ಉಪಾಧ್ಯಕ್ಷ ಜಗದೀಪ್ ಧನಖಡ ಅವರ ಅಕಲು ಮಾಡಿದ್ದರು. ಇದರಿಂದಾಗಿ ಅವರ ಜತೆಗೆ ಹಲವು ಸಂಸದರನ್ನು ಅಮಾನತು ಮಾಡಲಾಗಿದೆ. ಈ ಘಟನೆಯಿಂದ ಕೋಲಕಾತಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಂಸದ ಕಲ್ಯಾಣ್ ಬ್ಯಾನರ್ಜಿ, ನಾನು ಮಿಮಿಕ್ರಿ ಮಾಡುವುದನ್ನು ಮುಂದುವರಿಸುತ್ತೇನೆ. ಇದೊಂದು ಕಲೆಯಾಗಿದೆ. ಅಗತ್ಯವಿದ್ದರೆ, ನಾನು ಅದನ್ನು ಸಾವಿರಾರು ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ನನಗೆ ಮೂಲಭೂತ ಹಕ್ಕಿದೆ. ನೀವು ನನ್ನನ್ನು ಕೊಲ್ಲಬಹುದು; ಆದರೆ ನಾನು ಹಿಂದೆ ಸರಿಯುವುದಿಲ್ಲ, ನಾನು ಹೋರಾಡುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.
ಬ್ಯಾನರ್ಜಿ ತಮ್ಮ ಮಾತನ್ನು ಮುಂದುವರೆಸುತ್ತಾ, ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ನನಗೆ ಒಂದು ಪ್ರಶ್ನೆ ಇದೆ. ಅವರು (ಜಗದಿಪ್ ಧನಖಡ್) ರಾಜ್ಯಸಭೆಯಲ್ಲಿ ನಿಜವಾಗಿಯೂ ಈ ರೀತಿ ವರ್ತಿಸುತ್ತಾರೆಯೇ ? ಈ ಹಿಂದೆ ಲೋಕಸಭೆಯಲ್ಲೂ ಪ್ರಧಾನಿ ಮೋದಿ ಮಿಮಿಕ್ರಿ ಮಾಡಿದ್ದರು.
ಸಂಪಾದಕೀಯ ನಿಲುವುನಕಲು ಮಾಡುವವರು ನಕಲು ಮಾಡಿ ಜನರನ್ನು ರಂಜಿಸುವುದು ಒಂದು ಕಲೆ ಎಂದು ಪರಿಗಣಿಸಲಾಗಿದೆ; ಆದರೆ ಸಂಸದರು ಟೀಕೆ ಎಂದು ಉಪರಾಷ್ಟ್ರಪತಿಯನ್ನು ನಕಲು ಮಾಡುವುದು ಕಲೆಯಲ್ಲ ದ್ವೇಷ, ಅದಕ್ಕೆ ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು ! |