ದೂರಿನ ನಂತರ ಪೊಲೀಸರಿಂದ ತನಿಖೆ ಆರಂಭ !
ಕರ್ಣಾವತಿ (ಗುಜರಾತ) – ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ೩೦ ವರ್ಷದ ಮಹಿಳೆಯ ಛಾಯಾಚಿತ್ರವನ್ನು ಅಂತರ್ವಸ್ತ್ರದ ಜಾಹೀರಾತಿಗಾಗಿ ತಿಳಿಸದೆ ಬಳಸಿರುವ ಘಟನೆ ಬಹಿರಂಗವಾಗಿದೆ. ಈ ಮಹಿಳೆಯು ಜಾಹೀರಾತು ನೋಡಿದ ನಂತರ ಪೊಲೀಸರಿಗೆ ದೂರು ನೀಡಿದಳು. ಅದರ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮಹಿಳೆ ಓರ್ವ ನಿವೃತ್ತ ಪೊಲೀಸ ಅಧಿಕಾರಿಯ ಮಗಳಾಗಿದ್ದಾಳೆ.
ಸಂತ್ರಸ್ತೆ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದರು. ಆಕೆ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದಾರೆ. ಆಕೆ ಈ ದೂರಿನಲ್ಲಿ, ನವಂಬರ್ ೨೩ ರಂದು ‘ತೃಪ್ತಿ ಚೌಹಾಣ್’ ಹೆಸರಿನ ಒಂದು ಇನ್ಸ್ಟಾಗ್ರಾಮ್ ಖಾತೆಯಿಂದ ಸಂದೇಶ ದೊರೆಯಿತು. ಇದರಲ್ಲಿ ಈ ಮಹಿಳೆಯು ಆಕೆಯ ಅಂತರ್ವಸ್ತ್ರದಲ್ಲಿನ ಒಂದು ಛಾಯಾಚಿತ್ರ ಇರುವ ಜಾಹೀರಾತು ಕಳುಹಿಸಿದ್ದಳು. ಈ ಖಾತೆಯಲ್ಲಿ ಇಂತಹ ಅನೇಕ ಮಹಿಳೆಯರ ಈ ರೀತಿಯ ಛಾಯಾಚಿತ್ರಗಳು ದೊರೆತವು. ಅದರಲ್ಲಿನ ಕೆಲವು ಅಶ್ಲೀಲವಾಗಿದ್ದವು. ಅದಕ್ಕಾಗಿ ಕೇವಲ ಮಹಿಳೆಯರ ಮುಖದ ಬಳಕೆ ಮಾಡಲಾಗಿತ್ತು.
ಸಂಪಾದಕೀಯ ನಿಲುವುಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಥವಾ ಸ್ನೇಹಿತರ, ಸಂಬಂಧಿಕರ ಮುಂತಾದವರ ಛಾಯಾಚಿತ್ರ ಇಡುವುದು ಅಪಾಯಕಾರಿಯಾಗಿದೆ. ಛಾಯಾಚಿತ್ರದ ಬಳಕೆ ಅಪರಾಧಿ ಕಾರ್ಯ ಚಟುವಟಿಕೆಗಾಗಿ ಹಾಗೂ ಮೋಸ ಮಾಡುವುದಕ್ಕಾಗಿ ಮಾಡಲಾಗುತ್ತಿರುವುದರಿಂದ ಜನರು ಛಾಯಾಚಿತ್ರಗಳನ್ನು ಇಡಬಾರದೆಂದು ಈಗ ಸರಕಾರ ಹೇಳುವುದು ಆವಶ್ಯಕವಾಗಿದೆ ! |