ಕಳೆದ 5 ವರ್ಷಗಳಲ್ಲಿ, 13 ಲಕ್ಷದ 7 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ !
ನವದೆಹಲಿ – ಕೇಂದ್ರ ಸರಕಾರವು ಮುಸ್ಲಿಂ ಮಹಿಳೆಯರಿಗಾಗಿರುವ ‘ತ್ರಿವಳಿ ತಲಾಖ್’ (ಮೂರು ಬಾರಿ ‘ತಲಾಖ್ ತಲಾಖ್ ತಲಾಕ್’ ಎಂದು ಹೇಳುವ ಮೂಲಕ ವಿಚ್ಛೇದನ) ಅನ್ನು ಕಾನೂನು ಮೂಲಕ ರದ್ದುಗೊಳಿಸಿದೆ. ಇದು ಈಗ 5 ವರ್ಷ ಪೂರ್ಣಗೊಂಡಿದೆ; ಆದರೆ ಇನ್ನೂ ತ್ರಿವಳಿ ತಲಾಖ್ ಪ್ರಕರಣಗಳು ಕಡಿಮೆಯಾಗಿಲ್ಲ. ಕೇಂದ್ರ ಕಾನೂನು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023 ರಲ್ಲಿ 1 ಲಕ್ಷದ 57 ಸಾವಿರದ 725 ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಲಾಗಿದೆ. ಇವರಲ್ಲಿ ಹೆಚ್ಚಿನ ಮಹಿಳೆಯರು ಬಡವರಾಗಿದ್ದಾರೆ.
ಅ. ಸೆಪ್ಟೆಂಬರ್ 19, 2018 ರಂದು ಕಾನೂನು ಜಾರಿಗೆ ಬಂದ ನಂತರ, 13 ಲಕ್ಷದ 7 ಸಾವಿರಕ್ಕೂ ಹೆಚ್ಚು ತ್ರಿವಳಿ ತಲಾಖ್ ಪ್ರಕರಣಗಳು ನಡೆದಿವೆ. 2019 ರಲ್ಲಿ 2 ಲಕ್ಷ 69 ಸಾವಿರ, 2020 ರಲ್ಲಿ 95 ಸಾವಿರ, 2021 ರಲ್ಲಿ 5 ಲಕ್ಷ 41 ಸಾವಿರ ಮತ್ತು 2022 ರಲ್ಲಿ 2 ಲಕ್ಷ 45 ಸಾವಿರ ಘಟನೆಗಳು ನಡೆದಿವೆ. ಈ ಪ್ರಕರಣಗಳಲ್ಲಿ ಈ ಮಹಿಳೆಯರಿಗೆ ವಿವಿಧ ಸರಕಾರಿ ಪ್ರಾಧಿಕರಣಗಳ ಮೂಲಕ ಕಾನೂನು ನೆರವು ನೀಡಿದರು.
ಆ. ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ಬಿ.ಎಸ್. ಚೌಹಾಣ ಇವರು, ಈ ನಿಟ್ಟಿನಲ್ಲಿ ಮುಸ್ಲಿಮರ ದೊಡ್ಡ ನಾಯಕರು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ಕಾಯಿದೆಯ ಕಠಿಣ ಷರತ್ತುಗಳನ್ನು ತಿಳಿಸಬೇಕು. ಅಲ್ಲದೆ ಸಂತ್ರಸ್ತೆಯ ಹೇಳಿಕೆಯನ್ನು ಕೇಳದೆ ಮಧ್ಯಂತರ ಜಾಮೀನಿನ ಮೇಲೆ ಪತಿ ವಿಚಾರಣೆ ನಡೆಸಬಾರದು. ಇದು ಜನರಲ್ಲಿ ಭಯವನ್ನು ಹುಟ್ಟುಹಾಕುತ್ತದೆ ಮತ್ತು ಅವರು ಕಾನೂನನ್ನು ಪಾಲಿಸುತ್ತಾರೆ. ನ್ಯಾಯಾಲಯಗಳು ಕೂಡ ಇಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನೋಡಬೇಕು.
ಸಂಪಾದಕೀಯ ನಿಲುವುಮುಸ್ಲಿಮರ ವಿರುದ್ಧ ಎಷ್ಟೇ ಕಠಿಣ ಕಾನೂನುಗಳನ್ನು ಮಾಡಿದರೂ, ಅವರು ಇನ್ನೂ ತಮ್ಮ ಧರ್ಮವನ್ನು ಅನುಸರಿಸುತ್ತಾರೆ ಮತ್ತು ಭಾರತೀಯ ಕಾನೂನುಗಳನ್ನು ರಾಜಾರೋಷವಾಗಿ ಉಲ್ಲಂಘಿಸಿ ಅಪರಾಧಗಳನ್ನು ಮಾಡುತ್ತಲೇ ಇರುತ್ತಾರೆ. ಮುಂದೆ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು ಇತ್ಯಾದಿ ಕಾನೂನುಗಳು ಜಾರಿಯಾದರೂ ಅದನ್ನು ಮುಸ್ಲಿಮರು ಎಷ್ಟು ಪಾಲಿಸುತ್ತಾರೆ ಎಂಬುದು ಅನುಮಾನ ! ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ ! |