ಮುಂಬಯಿ – ಭಿವಂಡಿಯ ಪಡಘಾ ಗ್ರಾಮದಿಂದ ರಾಷ್ಟ್ರೀಯ ತನಿಖಾ ದಳವು ಬಂಧಿಸಿರುವ ಸಾಕಿಬ್ ನಾಚನ್ ನ ವಿಚಾರಣೆ ನಡೆಸಿದಾಗ, ಸಿರಿಯಾದ ವ್ಯಕ್ತಿಯನ್ನು ಭೇಟಿಯಾಗಲು ಪಡಘಾಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ವಿದೇಶದಲ್ಲಿ ಅಡಗಿರುವ ಕೆಲವು ಭಯೋತ್ಪಾದಕರು ಆತನಿಗೆ ಈ ಕಾರ್ಯವನ್ನು ವಹಿಸಿದ್ದರು. ಮುಂದಿನ ದಿನಗಳಲ್ಲಿ ಐಸಿಸ್ ಜಾಲವನ್ನು ಹರಡುವುದು ಹೇಗೆ ?, ಎಲ್ಲಿ ರಕ್ತಪಾತ ಮಾಡಬೇಕು ಹಾಗೂ ಹೇಗೆ ಮಾಡಬೇಕು ಎಂಬುದರ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆದಿತ್ತು. ಆದರೆ, ಈ ಆರೋಪಗಳನ್ನು ಸಾಕಿಬ್ ನಿರಾಕರಿಸಿದ್ದಾನೆ.
ಯಾವುದೇ ಖಾತೆ ಇಲ್ಲದಿದ್ದರೂ ಜಮೀನು ಖರೀದಿ ಮತ್ತು ಮಾರಾಟದ ವ್ಯವಹಾರ ಮಾಡುತ್ತಿದ್ದ. ಅದರಿಂದ ಪ್ರತಿ ತಿಂಗಳು 2 ರಿಂದ 3 ಲಕ್ಷ ರೂಪಾಯಿ ಪಡೆಯುತ್ತಿದ್ದ. ಈ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬೇಕಿತ್ತು. ಈ ಹಣವನ್ನು ಅದಕ್ಕಾಗಿ ಬೇಕಿರುವ ಅಗತ್ಯ ವಸ್ತುಗಳನ್ನು ಖರೀದಿಸಲು ಬಳಸುತ್ತಿದ್ದ ಎಂಬುದು ಅವರ ತನಿಖೆಯಿಂದ ತಿಳಿದುಬಂದಿದೆ.
ಸಂಪಾದಕೀಯ ನಿಲುವು
ಒಬ್ಬ ವ್ಯಕ್ತಿಯು ಭಯೋತ್ಪಾದಕನನ್ನು ಭೇಟಿಯಾಗಲು ಸಿರಿಯಾದಿಂದ ಬಂದಿರುವ ಮಾಹಿತಿಯನ್ನು ಪೊಲೀಸರು ಅಥವಾ ಗುಪ್ತಚರ ಸಂಸ್ಥೆಗಳು ಹೇಗೆ ಸಿಗುವುದಿಲ್ಲ ? |