ಕಲಬುರ್ಗಿಯಲ್ಲಿ ಅಲ್ಪಸಂಖ್ಯಾತ ಬಾಲಕಿಯರ ಹಾಸ್ಟೆಲ್ ನ ಬಾತ್ ರೂಂನಲ್ಲಿ ಕ್ಯಾಮೆರಾ ಅಳವಡಿಸಿದ್ದ ಸಲೀಂ ಬಂಧನ !

ಮೂರು ಮಕ್ಕಳ ತಂದೆಯಾಗಿರುವ ಸಲೀಂ !

ಕಲಬುರ್ಗಿ – ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಗಳ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಕ್ಯಾಮರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಸಲೀಂ ಎಂಬ 3 ಮಕ್ಕಳ ತಂದೆ ತನ್ನ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯರ ಚಿತ್ರೀಕರಣವನ್ನು ವೈ-ಫೈ ಮೂಲಕ ನೋಡುತ್ತಿದ್ದ. ಡಿಸೆಂಬರ್ 20 ರಂದು ವಿದ್ಯಾರ್ಥಿನಿಯೊಬ್ಬಳಿಗೆ ಇದು ಗಮನಕ್ಕೆ ಬಂತು. ಆಕೆ ಕಿರುಚಿದಾಗ ಇತರ ವಿದ್ಯಾರ್ಥಿನಿಯರು ಅಲ್ಲಿ ಜಮಾಯಿಸಿದರು. ಹಾಸ್ಟೆಲ್ ಕಟ್ಟಡದ ಬಳಿ ನಡೆದುಕೊಂಡು ಹೋಗುತ್ತಿದ್ದ ಸಲೀಂ ಅಲಿಯನ್ನು ಹಾಸ್ಟೆಲ್ ಅಧಿಕಾರಿಗಳು ಹಿಡಿದಿದ್ದಾರೆ. ಸ್ಥಳೀಯರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಹಾಸ್ಟೆಲ್‌ನಲ್ಲಿ 50ಕ್ಕೂ ಹೆಚ್ಚು ಬಾಲಕಿಯರು ವಾಸಿಸುತ್ತಿದ್ದಾರೆ. ಇವರೆಲ್ಲರೂ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಸಲೀಂನ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯರ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರನ್ನು ಷರಿಯಾ ಕಾನೂನಿನ ಪ್ರಕಾರ ಸೊಂಟದವರೆಗೆ ನೆಲದಲ್ಲಿ ಹೂತು ಕಲ್ಲೆಸೆದು ಕೊಲ್ಲಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯವೇನಿಲ್ಲ !