ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇದರಿಂದ ಭಾರತವನ್ನು ಹಿಯಾಳಿಸುವ ಹೇಳಿಕೆ !
ಓಟಾವಾ (ಕೆನಡಾ) – ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಅನಿರೀಕ್ಷಿತ ಬದಲಾವಣೆ ಆಗುತ್ತಿರುವುದು ಕಾಣುತ್ತಿದೆ. ಖಲಿಸ್ತಾನಿ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಗಾಗಿ ಭಾರತ ಸರಕಾರದ ಸಿಬ್ಬಂದಿ ಸಂಪರ್ಕಿಸಿರುವ ಆರೋಪ ಅಮೇರಿಕಾದಿಂದ ಭಾರತದ ಮೇಲೆ ಮಾಡಿದ ನಂತರ ಈ ಬದಲಾವಣೆ ಆಗಿದೆ. ಭಾರತದ ಗಮನಕ್ಕೆ ಬಂದಿರಬಹುದು, ಅದು ಯಾವಾಗಲು ಆಕ್ರಮಣಕಾರಿ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಭಾರತದಲ್ಲಿ ಸಹಯೋಗದ ಭಾವನೆ ನಿರ್ಮಾಣವಾಗಿದೆ.
ಅಮೇರಿಕಾದ ಕಠಿಣ ನಿರ್ಣಯದಿಂದ ಭಾರತ ಮಂಡಿಯೂರಿತು ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಭಾರತವನ್ನು ಟೀಕಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಭಯೋತ್ಪಾದಕ ಪನ್ನು ಹತ್ಯೆಯ ಷಡ್ಯಂತ್ರ ರೂಪಿಸಿರುವ ಪ್ರಕರಣದ ಬಗ್ಗೆ ಹೇಳುವಾಗ ‘ಯಾವುದೇ ಘಟನೆ ಅಮೆರಿಕ-ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ’, ಎಂದು ಹೇಳಿದ್ದರು. ಅದರಿಂದ ಟ್ರುಡೋ ಇವರು ಮೇಲಿನ ಹೇಳಿಕೆ ನೀಡಿದ್ದಾರೆ.
ಟ್ರುಢೋ ಮಾತು ಮುಂದುವರಿಸುತ್ತಾ,
೧. ಪನ್ನು ಪ್ರಕರಣದಲ್ಲಿ ಅಮೇರಿಕಾದ ಕಠಿಣ ನಿಲುವಿನಿಂದ ಭಾರತೀಯ ವ್ಯವಸ್ಥೆಯು ತನಿಖೆಗೆ ಸಹಕಾರ ನೀಡಲು ಸಿದ್ಧವಾಗಿದೆ. ಈಗ ನಿಜ್ಜರ ಹತ್ಯೆಯ ಪ್ರಕರಣದಲ್ಲಿ ಭಾರತದಿಂದ ಕೆನಡಾಗು ಕೂಡ ತನಿಖೆಯಲ್ಲಿ ಸಹಕಾರ ದೊರೆಯುವುದೆಂದು ಆಶಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ನಿಜವಾದ ಅಪರಾಧಿಗೆ ಶಿಕ್ಷೆ ಆಗುವುದು. (ಟ್ರುಡೋ ಇವರು ಭಾರತೀಯ ರಾಯಭಾರಿ ಕಚೇರಿ, ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ನಡೆಸುವ ಖಲಿಸ್ತಾನಿಗಳಿಗೆ ಬಂಧಿಸಿ ಮೊದಲು ಶಿಕ್ಷೆ ನೀಡಬೇಕು ಮತ್ತು ನಂತರ ನಿಜ್ಜರ ಹತ್ಯೆಯ ಬಗ್ಗೆ ಮಾತನಾಡಬೇಕು ! – ಸಂಪಾದಕರು)
೨. ನಮಗೆ ಭಾರತೀಯರ ಜೊತೆಗೆ ಸಂಘರ್ಷ ಬೇಡ ಹಾಗೂ ಸಂಬಂಧಗಳು ಕೂಡ ಸುಧಾರಿಸಬೇಕಾಗಿದೆ. (ಸಂಬಂಧ ಸುಧಾರಿಸುವದಕ್ಕಾಗಿ ಹಾಗೆ ವರ್ತನೆಯೂ ಬೇಕು ! – ಸಂಪಾದಕರು) ನಮಗೆ ಇಂಡೋ ಪೆಸಿಫಿಕ್ ತಂತ್ರಗಳನ್ನು ಮುಂದುವರಿಸುವುದಿದೆ; ಆದರೆ ಜನರ ಹಕ್ಕು ಮತ್ತು ರಕ್ಷಣೆಗಾಗಿ ಹೋರಾಡುವುದು, ಇದು ಕೆನಡಾದ ಕರ್ತವ್ಯವಾಗಿದೆ. (ಜನರ ಹಕ್ಕು ಮತ್ತು ಭಾರತ ವಿರೋಧಿ ಖಲಿಸ್ತಾನಿ ಭಯೋತ್ಪಾದಕರ ಹಕ್ಕು ಇದರಲ್ಲಿ ವ್ಯತ್ಯಾಸವಿದೆ. ಟ್ರುಡೋ ಇಬ್ಬರನ್ನು ಸಮಾನ ಎನ್ನಲು ಸಾಧ್ಯವಿಲ್ಲ. ಖಲಿಸ್ತಾನಿಗಳನ್ನು ಬೆಂಬಲಿಸುವುದು ಇದು ಕೆನಡಾದ ಕರ್ತವ್ಯವಾಗಿದ್ದರೆ, ಆಗ ಭಾರತದ ಜೊತೆಗೆ ಸಂಬಂಧ ಎಂದಿಗೂ ಸುಧಾರಿಸಲು ಸಾಧ್ಯವಿಲ್ಲ, ಇದನ್ನು ಅದು ಶಾಶ್ವತವಾಗಿ ನೆನಪಿಟ್ಟುಕೊಳ್ಳಬೇಕು ! – ಸಂಪಾದಕರು)
Canada’s Trudeau sees shift in India relations after US plot revealedhttps://t.co/ZMMYUp8rqK
— The Business Standard (@tbsnewsbd) December 21, 2023
ಸಂಪಾದಕರ ನಿಲುವು‘ಟ್ರುಡೋ ಇವರು ಭಾರತವನ್ನು ಹೀಯಾಳಿಸುವುದನ್ನು ಬಿಟ್ಟು ಭಾರತ ವಿರೋಧಿ ಚಟುವಟಿಕೆ ನಡೆಸುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಭಾರತ ಕಿವಿ ಹಿಂಡುವುದು ಆವಶ್ಯಕವಾಗಿದೆ ! |